ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಪಾಲಕರಿಗೆ ಸಲಹೆ
ಬಣಜಿಗ ಸಮಾಜದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Team Udayavani, Jun 30, 2019, 5:07 PM IST
ಬಸವನಬಾಗೇವಾಡಿ: ಬಣಜಿಗ ಸಮಾಜ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.
ಬಸವನಬಾಗೇವಾಡಿ: ಯಾವುದೇ ಒಂದು ಸಂಪತ್ತು ವೃದ್ಧಿಯಾಗಬೇಕಾದರೆ ಮನೆಯಲ್ಲಿನ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ನೀಡಬೇಕು. ಅಂದಾಗ ಮಾತ್ರ ಆ ಸಂಪತ್ತು ವೃದ್ಧಿಯಾಗಿ ಇರಲು ಸಾಧ್ಯವಾಗುತ್ತದೆ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಹೇಳಿದರು.
ಶನಿವಾರ ಪಟ್ಟಣದ ಮುದ್ದೇಬಿಹಾಳ ರಸ್ತೆಯ ಬಸ್ ಘಟಕ ಪಕ್ಕದಲ್ಲಿ ಇರುವ ಪಂಚಾಚಾರ್ಯ ಜನ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರ ತಾಲೂಕಾ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಬಣಜಿಗ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ತಾಲೂಕು ಸಮಾವೇಶ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯಾವುದೇ ಒಂದು ಸಂಪತ್ತು ಶಾಶ್ವತವಾಗಿ ಉಳಿಯಬೇಕಾದರೆ ಮನೆಯಲ್ಲಿ ಇರುವ ಮಕ್ಕಳು ಉತ್ತಮ ಸಂಸ್ಕಾರ ಹೊಂದಿದಾಗ ಮಾತ್ರ ಆ ಸಂಪತ್ತು ವೃದ್ಧಿಯಾಗಿ ಹೆಮ್ಮರವಾಗಿ ಬೆಳೆಯುತ್ತದೆ. ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದ್ದಾಗ ನೀವು ಎಷ್ಟೆ ಸಂಪತ್ತನ್ನು ಗಳಿಸಿದರು ಕೂಡಾ ಅದು ಕೇಲವೆ ದಿನಗಳಲ್ಲಿ ಹಾಳಾಗುವುದು ನಿಚ್ಚಿತ ಎಂದು ಹೇಳಿದರು.
ಕೇಂದ್ರ ರಾಜ್ಯಸರಕಾರಗಳು ಕೇವಲ ಒಂದು ಧರ್ಮಕ್ಕೆ ಮತ್ತು ಒಂದು ಸಮಾಜಕ್ಕೆ ಮೀಸಲಾತಿ ಸಿಕ್ಕರೆ ಸಾಲದು ಯಾರ ಬಳಿ ಪ್ರತಿಭೆ ಇರುತ್ತದೆ ಹಂತವರಿಗೆ ಮೀಸಲಾತಿಗಳು ದೊರಕುವದರಿಂದ ಆ ಮೀಸಲಾತಿಗೆ ಒಂದು ಅರ್ಥಬರುತ್ತದೆ ಮತ್ತು ಸರಕಾರಕ್ಕೆ ಕೊಟ್ಟಿದ್ದಕ್ಕೂ ಸ್ವಾರ್ಥವಾಗುತ್ತದೆ. ಆ ನಿಟ್ಟಿನಲ್ಲಿ ಸರಕಾರಗಳು ಕೇವಲ ಒಂದು ಧರ್ಮ ಜಾತಿಗೆ ಮೀಸಲಾತಿ ನೀಡದೆ ಪ್ರತಿಭೆ ಇರುವಂತ ಯಾವುದೇ ಧರ್ಮವಾಗಲಿ ಜಾತಿಯಾಗಲಿ ಅದಕ್ಕೆ ಮೀಸಲಾತಿ ನೀಡುವುದು ಸೂಕ್ತ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ಕೇಲವು ರಾಜಕಾರಣಿಗಳು ಸಮಾಜದ ಸಮಾವೇಶಗಳಿಗೆ ಹೋದರೆ ಬೇರೆ ಸಮಾಜದವರು ಬೇರೆ ಅರ್ಥ ಕಲ್ಪಿಸುತ್ತಾರೆ ಎಂದು ಕೇಲವು ರಾಜ್ಯಕಾರಣಿಗಳು ತಮ್ಮ ತಮ್ಮ ಸಮಾಜದ ಸಮಾವೇಶಕ್ಕೆ ಹೋಗದೆ ದೂರು ಉಳಿಯುತ್ತಾರೆ. ಆದರೆ ನಾನು ಮಾತ್ರ ಹಾಗೇ ಮಾಡುವುದಿಲ್ಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೇಲವು ರಾಜಕೀಯ ನಾಯಕರು ಸಮಾಜದ ಜನರಿಗೆ ಅಂಜಿಕೆ ಹಾಕುತ್ತಾರೆ. ಯಾರು ಕೂಡಾ ಹಂತ ಅಂಜಿಕೆ ಅಳುಕಿಗೆ ಭಯ ಪಡಬೇಡಿ ಯಾಕೆಂದರೆ ಎಲ್ಲರೂ ತಮ್ಮ ತಮ್ಮ ಸಮಾಜದ ಸಂಘಟನೆ ಮಾಡುವದಕ್ಕೆ ಯಾರ ಅಂಜಿಕೆ ಅಳುಕಿಗೆ ಭಯ ಪಡದೆ ನಿರಂತರವಾಗಿ ಸಮಾಜದ ಸಂಘಟನೆ ಮಾಡಿ ಇದು ಪ್ರಜಾಪ್ರಭುತ್ವ ಎಲ್ಲರಿಗೂ ಅವರ ಅವರ ಸಮಾಜದ ಸಂಘಟನೆ ಮಾಡುವ ಹಕ್ಕಿದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಅಕ್ಕನಾಗಮ್ಮ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಅಶೋಕ ಹಂಚಲಿ ಅವರು ಮಾತನಾಡಿ ದಾನ ಧರ್ಮ ದೇವಸ್ಥಾನಗಳ ನಿರ್ಮಾಣ ಹಾಗೂ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಬಣಜಿಗ ಸಮಾಜದ ಕೊಡುಗೆ ಅನನ್ಯವಾಗಿದೆ. ನಮ್ಮ ಹಿಂದಿನ ಪುರ್ವಜ್ಜರು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮೀಸಿದ್ದಾರೆ ಎಂದು ಹೇಳಿದರು.
ಕೇವಲ ದಾನ ಧರ್ಮ ದೇವಸ್ಥಾನ ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡದೇ ಸ್ವಾತಂತ್ರಕ್ಕಾಗಿ ಶರಣ ಸಾಹಿತ್ಯ, ಬಸವ ಸಾಹಿತ್ಯ, ಕನ್ನಡ ಸಾಹಿತ್ಯ ಸೇರಿದಂತೆ ಅನೇಕ ಸಮಾಜದ ಒಳತಿಗಾಗಿ ಹಲವಾರು ದಶಕಗಳಿಂದ ಬಣಜಿಗ ಸಮಾಜದ ಬಾಂಧವರು ನಿರಂತರವಾಗಿ ಹಿಂತ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಸಮಾಜದಲ್ಲಿ ತಮ್ಮದೇಯಾದ ಕೊಡುಗೆಗಳನ್ನು ನೀಡಿರುವ ಸಮಾಜ ಯಾವುದಾದರು ಇದ್ದರೆ ಅದು ಬಣಜಿಗ ಸಮಾಜದ ಎಂದು ಹೆಮ್ಮೆಯಿಂದ ಹೇಳುವ ಸಮಾಜ ನಮ್ಮದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶಿರೋಳ ರಾಮಾರೂಢ ಮಠದ ಶಂಕರಾರೂಢ ಶ್ರೀಗಳು ವಹಿಸಿದ್ದರು. ಸಾನ್ನಿಧ್ಯವನ್ನು ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ತಾಲೂಕಾಧ್ಯಕ್ಷ ಮುತ್ತು ಕಿಣಗಿ ವಹಿಸಿದ್ದರು. ಹರೀಶಗೌಡ ಪಾಟೀಲ, ಸುರೇಶಗೌಡ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ಎಸ್.ಜಿ. ನಾಗಠಾಣ, ಆರ್.ಎಂ. ಕೋರಿ, ಎಸ್.ಎಸ್. ಝಳಕಿ, ಸಿ.ಎಂ. ಹಂಡಗಿ, ಬಸವರಾಜ ಹನುಮಶೆಟ್ಟಿ, ಅಣ್ಣು ದುಂಬಾಳಿ, ಸಂಗಮೇಶ ಹಳ್ಳೂರ, ರಮೇಶ ಯಳಮೇಲಿ, ವೀರಣ್ಣ ಮರ್ತೂರ, ಗಂಗಾಧರ ಕುಂಟೋಜಿ, ಸಿದ್ದಣ್ಣ ಮೋದಿ, ಡಾ| ಎನ್.ಬಿ. ವಜಿರಕರ, ಸದಾನಂದ ಯಳಮೇಲಿ, ವಿಶೇಷ ಸನ್ಮಾನಿತರಾಗಿ ಮಹೇಂದ್ರ ವಾರದ, ಮುರುಗೇಶ ಹೆಬ್ಟಾಳ, ಸಂಗಮೇಶ ಕೊರಿ, ಡಾ| ನವೀನ ಶೀಲವಂತ, ಡಾ| ಸಂತೋಷ ಶೀಲವಂತ, ಅಶೋಕ ಬ್ಯಾಕೋಡ ಸೇರಿದಂತೆ ಅನೇಕರು ಇದ್ದರು.
ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಆರ್.ಜಿ. ಅಳ್ಳಗಿ ಸ್ವಾಗತಿಸಿದರು. ಬಸವರಾಜ ಹಂಚಲಿ ನಿರೂಪಿಸಿದರು. ಸಂತೋಷ ತಾಳಿಕೋಟಿ ವಂದಿಸಿದರು.
ಈ ವೇಳೆ ಬಣಜಿಗ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.