ಸದ್ಬಳಕೆಯಾಗಲಿ “”ಪೋಡಿಮುಕ್ತ”
ಹೊಲ-ಗದ್ದೆ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದರೆ ಯೋಜನೆ ಅನ್ವಯಿಸಲ್ಲ
Team Udayavani, Dec 22, 2019, 4:30 PM IST
ಬಸವನಬಾಗೇವಾಡಿ: ರಾಜ್ಯ ಸರಕಾರ ಜಾರಿಗೆ ತಂದಿರುವ ಪೋಡಿಮುಕ್ತ ಯೋಜನೆಯನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಎಂ.ಎನ್. ಚೋರಗಸ್ತಿ ಹೇಳಿದರು.
ಶನಿವಾರ ಪಟ್ಟಣದ ಛಾವಡಿ ಕಟ್ಟೆಯಲ್ಲಿ ಭೂಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಸಹಯೋಗದಲ್ಲಿ ನಡೆದ ಪೋಡಿಮುಕ್ತ ಗ್ರಾಮ ಅಭಿಯಾನದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಹಲವಾರು ವರ್ಷಗಳ ಹಿಂದೆ ಬಸವನಬಾಗೇವಾಡಿ ತಾಲೂಕಿನ ರೈತರು ತಮ್ಮ ಜಮೀನುಗಳನ್ನು ವಾಟ್ನಿ ಮಾಡಿಕೊಳ್ಳಲಾಗಿತ್ತು. ಆದರೆ ಅವುಗಳು ಪೋಡಿಯಾಗದ ಹಿನ್ನಲೆಯಿಂದ ಉತಾರಿಗಳಲ್ಲಿ 3-4 ಜನರ ಹೆಸರು ಒದೆಡೆ ಬರುವದರಿಂದ ಸರಕಾರದ ಸೌಲಭ್ಯಗಳು ದೊರಕಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಬಸವನಬಾಗೇವಾಡಿ ತಾಲೂಕಿನಲ್ಲಿ ಇಂತ ಪ್ರಕರಣಗಳು ಹೆಚ್ಚಾಗಿರುವದರಿಂದ ಮತ್ತು ಈ ತಾಲೂಕಿನಲ್ಲಿ ಅತಿ ಹೆಚ್ಚು ನೀರಾವರಿ ಕೆನಾಲ್‌ಗಳು ರೈತರ ಜಮೀನುಗಳಲ್ಲಿ ಹಾದು ಹೋದ ಹಿನ್ನಲೆಯಿಂದ ರೈತರಿಗೆ ಪರಿಹಾರದ ಸಮಸ್ಯೆ ಉದ್ಭವವಾಗಿತ್ತು. ಆಗ ಶಾಸಕರಾದ ಶಿವಾನಂದ ಪಾಟೀಲ ಅವರು 2004ರಲ್ಲಿ ಈ ವಿಷಯ ಕುರಿತು ಸರಕಾರದೊಂದಿಗೆ ಚರ್ಚಿಸಿ ಸರಕಾರದಿಂದಲೇ ರೈತರಿಗೆ ಪೋಡಿ ಮಾಡುವ ಯೋಜನೆಯನ್ನು ರೂಪಿಸಿದ್ದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.
ಬಸವನಬಾಗೇವಾಡಿ ತಾಲೂಕಿನ 120 ಹಳ್ಳಿಗಳು ಬರುತ್ತವೆ. ಭೂಮಾಪನಾ ಕೇಂದ್ರದಲ್ಲಿ ಕೇವಲ 11 ಜನ ಸರ್ವೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. 4 ಸಾವಿರ ಪೋಡಿ ಅರ್ಜಿಗಳು ಬಂದಿದ್ದವು. ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂಬುದನ್ನು ಮನಗಂಡ ಶಾಸಕರು ಈ ಯೋಜನೆಗೆ
ಹೆಚ್ಚುವರಿಯಾಗಿ 20 ಜನ ಸರ್ವೇ ಸಿಬ್ಬಂದಿ ನೇಮಕ ಮಾಡ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನೀವು ಒಂದು ಪೋಡಿ ಮಾಡಿಸಿಕೊಳ್ಳಬೇಕಾದರೆ ಸುಮಾರು 2 ಸಾವಿರ ಶುಲ್ಕ ಭರಿಸಬೇಕಾಗುತ್ತದೆ, ಆದರೆ ಈಗ ಸರಕಾರದಿಂದಲೇ ಪೋಡಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ಭೂಮಾಪನಾ ಇಲಾಖೆ ಅಧಿಕಾರಿ ಎಸ್.ಜಿ. ಕಲಾದಗಿ ಮಾತನಾಡಿ, ರೈತರು ಸರಕಾರದ ಯೋಜನೆ ಲಾಭ ಪಡೆಯಬೇಕು. ಪೋಡಿ ಮುಕ್ತ ಯೋಜನೆಯಲ್ಲಿ ಈಗಾಗಲೇ ಅಣ್ಣ ತಮ್ಮಂದಿರ ಮತ್ತು ಸಂಬಂಧಿಕರ ಮಧ್ಯೆ ಹೊಲ ಗದ್ದೆಗಳ ಪಾಲುದಾರಿಕೆ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇದ್ದಲ್ಲಿ ಈ ಯೋಜನೆಗೆ ಬರುವುದಿಲ್ಲ ಮತ್ತು ವಾಟ್ನಿ ವಾರಸಾ ಕೂಡಾ ಈ ಯೋಜನೆಯಲ್ಲಿ ಅನ್ವಯಿಸುವುದಿಲ್ಲರೆಂದರು.
ಭೂಮಾಪನಾ ಇಲಾಖೆ ಅಧಿಕಾರಿಗಳಾದ ಪಿ.ಆರ್. ಹಜೆರಿ, ಸಂತೋಷ ಪೂಜಾರಿ, ಶಬ್ಬೀರ್ ಮುಜಾವರ, ಸಂಜಯಕುಮಾರ
ಕೆಳಗಿನಮನಿ, ಶ್ರೀನಿವಾಸ ಭಜಂತ್ರಿ, ಕಂದಾಯ ಇಲಾಖೆ ಅ ಧಿಕಾರಿಗಳಾದ ಎ.ಎಚ್. ಮಾಣಿಕ್ಯಬಾಯಿ, ಎಸ್. ಎಸ್. ದೇಸಾಯಿ, ಎ.ಡಿ. ಕೊರಬು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.