ಶಾಲೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ
ಕಣಕಾಲ ಸ್ನೇಹ ಸದನ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಾವು ಕಚ್ಚಿ ಬಾಲಕ ಸಾವು
Team Udayavani, Jul 8, 2019, 1:28 PM IST
ಬಸವನಬಾಗೇವಾಡಿ: ಬಾಲಕನ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬಸವನಬಾಗೇವಾಡಿ ಪೊಲೀಸ್ ಠಾಣೆ ಆವರಣದಲ್ಲಿ ಬಾಲಕನ ಶವ ಇಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದರು.
ಬಸವನಬಾಗೇವಾಡಿ: ಬಾಲಕನ ಸಾವಿಗೆ ಶಾಲೆ ಸಿಬ್ಬಂದಿಯೆ ಕಾರಣ ಎಂದು ಆರೋಪಿಸಿ ಮೃತ ಬಾಲಕನ ಪಾಲಕರು ಹಾಗೂ ಸಂಬಂಧಕರು ರವಿವಾರ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.
ತಾಲೂಕಿನ ಸುಳಕೋಡ ಗ್ರಾಮದ ಮೃತ ಬಾಲಕ ಆಕಾಶ ನಾಗಪ್ಪ ಕುಂಬಾರ (13) ತಾಲೂಕಿನ ಕಣಕಾಲ ಗ್ರಾಮದ ಸ್ನೇಹ ಸದನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ಶನಿವಾರ ಶಾಲಾ ಆವರಣದಲ್ಲಿ ಬಾಲಕನಿಗೆ ಹಾವು ಕಡಿದ ಪರಿಣಾಮ ಬಸವನಬಾಗೇವಾಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಬಾಲಕ ಮೃತ ಪಟ್ಟಿದ್ದಾನೆ.
ಶಾಲೆ ಮುಖ್ಯ ಶಿಕ್ಷಕ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಾಲಕ ಮೃತ ಪಟ್ಟಿದ್ದಾನೆ. ಬಾಲಕನ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತ ಬಾಲಕನ ಸಂಬಂಧಿ ಪ್ರತಿಭಟನಾ ನಿರತ ಶಿವು ಕುಂಬಾರ ಒತ್ತಾಯಿಸಿದರು.
ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಸಿಪಿಐ ಮಹಾದೇವ ಶಿರಹಟ್ಟಿ ಈ ಕುರಿತು ಶನಿವಾರ ರಾತ್ರಿಯೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಇದರಲ್ಲಿ ಎರಡು ಮಾತಿಲ್ಲಾ ಎಂದು ಭರವಸೆ ನೀಡಿದರು. ಶಾಲೆಯನ್ನು ಬಂದ್ ಮಾಡಬೇಕು ಎಂದು ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೆದಗುಡ್ಡ ಅವರಿಗೆ ಪಾಲಕರು ಹಾಗೂ ಸಂಬಂಧಿಕರು ಆಗ್ರಹಿಸಿದರು. ಅಪ್ಪುಗೌಡ ಪಾಟೀಲ ಮಾತನಾಡಿ, ಖಾಸಗಿ ಶಾಲೆಗಳು ಅಂದರೆ ಒಳ್ಳೆಯ ಶಿಸ್ತು ಪಾಲನೆ ಮಾಡುವ ಶಾಲೆಗಳು. ಆದರೆ ಈ ಘಟನೆಯ ನಡೆದಿದ್ದು ಎಲ್ಲಿರಿಗೂ ಅಚ್ಚರಿ ಮೂಡಿಸಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ಬಾಲಕನ ಸಂಬಂಧಿಕರಿಗೆ ನ್ಯಾಯ ಒದಗಿಸಿ ಕೊಡುವ ಕಾರ್ಯವಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಕುಂಬಾರ, ಹನುಮಂತಗೌಡ ಪಾಟೀಲ, ಮಹೇಶ ಕುಂಬಾರ, ಶ್ರೀನಿವಾಸ ರಜಪೂತ, ಸತ್ಯಪ್ಪ ಗಾಣಗೇರ, ಶಾಂತಗೌಡ ಬಿರಾದಾರ, ಪುಂಡೆಪ್ಪ ಗುಡು, ರೇಣುಕಾ ಕುಂಬಾರ, ಬೋರವ್ವ ಕುಂಬಾರ, ಸುಮಿತ್ರಾ ಕುಂಬಾರ, ಶಿವಬಾಯಿ ಕುಂಬಾರ, ಗಂಗವ್ವ ಯಡ್ರಾಮಿ, ಶೇಖವ್ವ ಕುಂಬಾರ, ಪಾರ್ವತಿ ಕುಂಬಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.