ಗಮನ ಸೆಳೆದ ಭಾರ ಎತ್ತುವ ಸ್ಪರ್ಧೆ
Team Udayavani, Aug 23, 2019, 1:28 PM IST
ಬಸವನಬಾಗೇವಾಡಿ: ಮೂಲನಂದೀಶ್ವರ ಜಾತ್ರೆ ಅಂಗವಾಗಿ ನಡೆದ ಭಾರ ಎತ್ತುವ ಸ್ಪರ್ಧೆ ನೋಡಲು ಆಗಮಿಸಿದ್ದ ಜನ.
ಬಸವನಬಾಗೇವಾಡಿ: ಇಲ್ಲಿನ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯ ಮೂರನೇ ದಿನ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕಸರತ್ತಿನ ಹಾಗೂ ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿಜಯಪುರ ಸೇರಿ ವಿವಿಧ ಜಿಲ್ಲೆಗಳ ಜಟ್ಟಿಗಳು ಭಾರವಾದ ಗುಂಡು ಕಲ್ಲು, ಉಸುಕಿನ ಚೀಲ, ಸಂಗ್ರಾಣಿ ಕಲ್ಲು ಸೇರಿದಂತೆ ವಿವಿಧ ಭಾರ ಎತ್ತುವ ಸ್ಪರ್ಧೆಗಳು ಆರಂಭವಾದಾಗ ಜನರು ಮಂತ್ರಮುಗ್ದರಾಗಿ ಕುಳಿತುಕೊಂಡಿದ್ದರು. ಜಟ್ಟಿಗಳು ಭಾರ ಎತ್ತುತ್ತಿದಂತೆ ಕೇ ಕೇ ಹಾಕಿ ಜನರು ಹುರಿದುಂಬಿಸಿದರು. ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಿಗೆ ಬೆಳ್ಳಿ ಖಡ್ಗ ನೀಡಿ ಗೌರವಿಸಲಾಯಿತು. ನಾಗರಾಜ ಗುಂದಗಿ ಅವರು ಕಳೆದ 14 ವರ್ಷಗಳಿಂದ ವಿಜೇತರಿಗೆ ಬೆಳ್ಳಿ ಖಡ್ಗಗಳನ್ನು ಬಹುಮಾನ ನೀಡುತ್ತಿದ್ದಾರೆ.
ಸಂಗ್ರಾಣಿ ಕಲ್ಲು ಸಾಗ ಎತ್ತುವ ಸ್ಪರ್ಧೆ ವಿಜೇತರು: ಜತ್ತ ತಾಲೂಕಿನ ಆಸಂಗಿಯ ಅಫಜಲಖಾನ್ ಮುಜಾವರ (ಪ್ರ), ನಿಜಾಮುದ್ದೀನ್ ಶೇಖ್ (ದ್ವಿ), ಬೀಳಗಿಯ ಸಂಗಪ್ಪ ಕೊಂತಿಕಲ್ಲ (ತೃ) ಹಾಗೂ ಸಂಗ್ರಾಣಿ ಕಲ್ಲು ವತ್ತಿ ಎತ್ತುವ ಸ್ಪರ್ಧೆಯಲ್ಲಿ ಗದ್ಯಾಳದ ಚಂದ್ರಶೇಖರ ಪುರ್ತಿಗೇರಿ (ಪ್ರ), ಹಳ್ಳಗೇರಿಯ ಭೀಮಸೇನ ಮಲ್ಲಾಡದ (ದ್ವಿ), ಬೆಳ್ಳವಂಕಿಯ ಶಿವಾನಂದ ಗ್ಯಾಡನಾಳ (ತೃ) ಸ್ಥಾನ ಪಡೆದರು.
ಗುಂಡು ಎತ್ತುವ ಸ್ಪರ್ಧೆ: ಕುಂಟೋಜಿಯ ಶ್ರೀಕಾಂತ ಲಮಾಣಿ (ಪ್ರ), ಬಳಗಾನೂರಿನ ಹುವಣ್ಣ ಅರಳಿಗುಂಡಗಿ (ದ್ವಿ), ಯಾಳವಾರದ ಮಾಳಿಂಗರಾಯ ಕೊಂಡಗೂಳಿ (ತೃ). ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಗೋನಾಳದ ವಿಠ್ಠಲ ಹಡಗಲಿ (ಪ್ರ), ಯಲಗೂರಿನ ಗಂಗಾಧರ ಶಿರೂರ (ದ್ವಿ), ಸಂಗೊಂದಿಯ ಮಳಿಯಪ್ಪ ಮೇಟಿ (ತೃ) ಸ್ಥಾನ ಪಡೆದರು.
ಜೋಳದ ಚೀಲ ಎತ್ತುವ ಸ್ಪರ್ಧೆಯಲ್ಲಿ ಕುಂಟೋಜಿಯ ಶ್ರೀಕಾಂತ ಲಮಾಣಿ (ಪ್ರ), ಮಣ್ಣೂರಿನ ಲಗಮಣ್ಣ ಪೂಜಾರಿ (ದ್ವಿ), ಹನ್ನೋಳ್ಳಿಯ ನಿಂಗಣ್ಣ ಯಂಕಂಚಿ (ತೃ) ಸ್ಥಾನ ಪಡೆದರು. ಗುನ್ನಾಪುರಿನ ಕೇದಾರಲಿಂಗ ಲೋಗಾಂವಿ, ಭೀರಪ್ಪ ಲೋಗಾಂವಿ ಅವರು ಮೇಟನಾಲಿಗೆ ಮೇಲಿಂದ ಚೀಲ ಎತ್ತುವ ಮೂಲಕ ಗಮನ ಸೆಳೆದರು.
ಮುಳಸಾವಳಗಿಯ ರಮೇಶ ಪಾಟೀಲ ಅವರು ಹಲ್ಲಿನಿಂದ ಕಬ್ಬಿಣದ ಹಾರಿ ಎತ್ತಿ ಮೂರು ಸಾರಿ ಒಗೆದರು. ಸಾಲೋಟಗಿಯ ಶರಣಗೌಡ ಬಿರಾದಾರ ಎರಡು ಸಲ ಕಬ್ಬಿಣದ ಹಾರಿ ಒಗೆದು ನೋಡುಗರಿಂದ ಸೈ ಎನಿಸಿಕೊಂಡರು.
ಕಸರತ್ತಿನ ಸ್ಪರ್ಧೆಯಲ್ಲಿ ಸಿದ್ಧಲಿಂಗ ಸ್ವಾಮೀಜಿ, ಜಾತ್ರಾ ಉತ್ಸವ ಸಮಿತಿಅಧ್ಯಕ್ಷ ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಸಂಗಪ್ಪ ವಾಡೇದ, ಬಸವರಾಜ ಗೊಳಸಂಗಿ, ಸಂಗಮೇಶ ಓಲೇಕಾರ, ಮೀರಸಾಬ ಕೊರಬು, ಅಶೋಕ ಹಾರಿವಾಳ, ಸಿದ್ದನಗೌಡ ಚಿಕ್ಕೊಂಡ, ಅಪ್ಪಾಸಾಹೇಬ ಕಲ್ಲೂರ, ದಯಾನಂದ ಜಾಲಗೇರಿ ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.