ಪ್ರಕೃತಿ ಮಾತೆಗೆ ಪೂಜೆ ಸಲ್ಲಿಸಿ
Team Udayavani, Dec 9, 2019, 5:45 PM IST
ಬಸವನಬಾಗೇವಾಡಿ: ಜಾತ್ಯತೀತ ಭಾರತ ದೇಶದಲ್ಲಿ 33 ಕೋಟಿ ದೇವರುಗಳನ್ನು ಪೂಜಿಸುತ್ತಾರೆ. ಆದರೆ ಪ್ರಕೃತಿ ಮಾತ್ರ ನಮ್ಮ ದೇವರು, ಅದನ್ನು ನಾವು ನಿತ್ಯ ಪೂಜಿಸಿದಾಗ ಮಾತ್ರ ಬದುಕಲು ಸಾಧ್ಯವಾಗುತ್ತದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಇಕ್ಬಾಲ್ ನಗರದಲ್ಲಿ ಅಮೋಘ ಸಿದ್ದೇಶ್ವರ ಜಾತ್ರಾ ಮೋಹತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ಜನ್ಮ ಭೂಮಿಯಲ್ಲಿ ಅನೇಕ ಶರಣರು, ಸಂತರು, ಸೂಫಿಗಳು ಅನೇಕ ಕೊಡುಗೆ ನೀಡಿದ್ದಾರೆ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗಾಗಿ ಹೋರಾಟ ಮಾಡಿದ ಫಲದಿಂದ 21ನೇ ಶತಮಾನದಲ್ಲಿ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ಸಿಗುತ್ತಿದೆ. ಮಹಿಳೆಯರು ಎಲ್ಲ ರಂಗದಲ್ಲಿ ತಮ್ಮ ಸಾಧನೆ ತೋರುತ್ತಿದ್ದಾರೆ. ಒಬ್ಬ ಮಹಿಳೆ ಶೈಕ್ಷಣಿಕವಾಗಿ ಪ್ರಗತಿ ಸಾ ಧಿಸಿದರೆ ಇಡಿ ಕುಟುಂಬ ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈರಯ್ಯ ಹಿರೇಮಠ ಸಾನ್ನಿಧ್ಯ, ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ. ಒಡೆಯರ, ಸಂಗಮೇಶ ಓಲೇಕಾರ, ಅಶೋಕ ಚಲವಾದಿ, ಸಾಹಿತಿ ಲ.ರು. ಗೊಳಸಂಗಿ, ಡಾ| ಮಹಾಂತೇಶ ಜಾಲಗೇರಿ, ಡಾ| ಅಮರೇಶ ಮಿಣಜಗಿ, ಪುರಸಭೆ ಸದಸ್ಯ ಅಶೋಕ ಹಾರಿವಾಳ, ರಾಜು ಬೂತನಾಳ, ದೇವೇಂದ್ರ ನಾಯಕ, ಪ್ರವೀಣ ಪೂಜಾರ, ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಬಸಣ್ಣ ದೇಸಾಯಿ, ಎಸ್.ಜಿ. ಹೆಗಡ್ಯಾಳ, ಶರಣಪ್ಪ ಬಲ್ಲದ, ಎಂ.ಎಸ್. ಬೂದಿಹಾಳ, ಸಂಗಮೇಶ ಪೂಜಾರಿ, ಎಸ್.ಎಸ್. ಕುದರಕರ, ಬಿ.ಎ. ಸೌದಾಗರ, ಲಾಲಸಾಬ ರಗಟಿ, ಇಸಾಕ್ ನಾಯ್ಕೋಡಿ, ಅಬ್ದುಲ್ ಶಿವಣಗಿ, ಮಹಿಬೂಬಸಾಬ ಮಮದಾಪುರ ಇದ್ದರು.
ಅಶೋಕ ಚಲವಾದಿ ಸ್ವಾಗತಿಸಿದರು. ಮೈಬೂಸಾಬ ನಾಯ್ಕೋಡಿ ನಿರೂಪಿಸಿದರು. ಎಂ.ಎಸ್. ಅಂಗಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.