ಜೋಳದಲ್ಲಿ ಹೇನು ಬಾಧೆ-ನಿರ್ವಹಣೆಗೆ ಸಲಹೆ
Team Udayavani, Jan 12, 2020, 1:01 PM IST
ಬೀದರ: ಜೋಳದಲ್ಲಿ ಹೇನಿನ ಬಾಧೆ ಕಾಣಿಸಿದ್ದು, ಸೂಕ್ತ ನಿರ್ವಹಣೆ ಕೈಗೊಳ್ಳುವಂತೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ಹೇನು ಬಹುಭಕ್ಷಕ ಕೀಟ. ರಸಹೀರುವ ಗುಂಪಿಗೆ ಸೇರಿದ ಕೀಟ ವೈಜ್ಞಾನಿಕವಾಗಿ ರ್ಯಾಫಲೋಸೀಫಮ್ ಮೇಡಿಸ್ ಎಂದು ಕರೆಯಲಾಗುತ್ತಿದ್ದು, ಹೋಮೋಪ್ಟೆರಾ ಗಣಕ್ಕೆ ಸೇರಿದೆ. ಇದು ಜೋಳ, ಗೋವಿನ ಜೋಳವನ್ನು ಬಾಧಿಸುತ್ತದೆ. ಸಾಮಾನ್ಯವಾಗಿ ಕಪ್ಪು, ಹಸಿರು ಕೆಲವು ಸಲ ಕಂದು ಬಣ್ಣದಿಂದ ಕೂಡಿರುತ್ತವೆ. ಒಣ ಹವೆ ಇದ್ದಲ್ಲಿ ಈ ಕೀಟದ ಭಾದೆ ಹೆಚ್ಚಾಗುತ್ತದೆ. ಈ ಕೀಟಗಳು ಗಂಡು ಹಾಗೂ ಹೆಣ್ಣಿನ ಸಂಪರ್ಕವಿಲ್ಲದೆ ನಿರ್ಲಿಂಗ ಪದ್ಧತಿಯಲ್ಲಿ ಹೆಣ್ಣು ಕೀಟವು 60ರಿಂದ 100 ಮರಿಹುಳುಗಳನ್ನು 13ರಿಂದ 20
ದಿನಗಳ ಅವಧಿಯಲ್ಲಿ ಹಾಕುತ್ತವೆ. ಹಾಗೂ ತಮ್ಮ ಜೀವಿತ ಅವ ಧಿಯನ್ನು 5ರಿಂದ 8 ದಿವಸಗಳಲ್ಲಿ ಪೂರ್ಣಗೊಳಿಸುತ್ತವೆ ಎಂದು ತಿಳಿಸಿದ್ದಾರೆ.
ಬಾಧೆಯ ಲಕ್ಷಣ: ಪ್ರೌಢ ಮತ್ತು ಅಪ್ಸರೆ (ಮರಿ) ಕೀಟಗಳು ಎರಡೂ ತನ್ನ ಬಾಯಿಯಿಂದ ಚುಚ್ಚಿ ಎಲೆಯಿಂದ ರಸಹೀರುತ್ತವೆ. ಇದು ಸಾಮಾನ್ಯವಾಗಿ ಮೃದುವಾದ ಹಾಗೂ ಬಲಿತ ಎಲೆಗಳ ಮೇಲೆ ಈ ಕೀಟ ಕಂಡುಬರುತ್ತದೆ. ಕೆಲವೊಂದು ಸಲ ಸುಳಿಯಲ್ಲಿಯೂ ತೆನೆಗಳ ಮೇಲೂ ಈ ಕೀಟದ ಭಾದೆ ಕಂಡುಬರುತ್ತದೆ. ಕೀಟವು ಅತಿಯಾದ ರಸಹೀರುವಿಕೆಯಿಂದ ಹಾಗೂ ಹೆಚ್ಚಾದ ಸಕ್ಕರೆಯಂತಹ ದ್ರವವನ್ನು ತನ್ನ ದೇಹದಿಂದ ಹೊರಹಾಕುತ್ತದೆ. ಇದು ಎಲೆಗಳ ಮೇಲೆ ಹಾಗೂ ಕೆಳಭಾಗದ ಎಲೆಗಳ ಮೇಲೆ ಬಿದ್ದು ಎಲೆಗಳು ಹಳದಿ ವರ್ಣಕ್ಕೆ ತಿರುಗಿ ನಂತರ ಒಣಗುವುದನ್ನು ಕಾಣುತ್ತೇವೆ. ಗಿಡದ ಬೆಳವಣಿಗೆ ಕುಂಠಿತವಾಗಿ ಎಲೆಗಳು ಕೆಂಪು ವರ್ಣಕ್ಕೆ ತಿರುಗುವುದನ್ನು ಕಾಣುತ್ತೇವೆ. ಎಲೆಯ ಮೇಲೆ ಕಪ್ಪು ಬೂಷ್ಟ್ ಬೆಳೆದು ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ವ್ಯತ್ಯಯ ಕ್ರಿಯೆ ಉಂಟಾಗಿ ಇಳುವರಿ ಕಡಿಮೆಯಾಗುತ್ತದೆ.
ನಿರ್ವಹಣೆ: ಶೇ.5ರ ಬೇವಿನ ಬೀಜದ ಕಶಾಯ ಅಥವಾ ಕೀಟ ನಿರ್ವಹಣೆಗಾಗಿ ಅಂತರ ಕೀಟನಾಶಕ ಡೈಮಿಥೊಯೇಟ್ 30 ಇಸಿ ಎ. 1.7 ಮಿ.ಲೀ. ಅಥವಾ ಮೊನೋಕ್ರೊಟೋಫಾಸ್ 36 ಎನ್.ಎಲ್.
ಎ 1 ಮಿ.ಲೀ. ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಗುಲ್ವಾಡಿ; ಗಾಯಾಳು ಸಾವು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.