ಗೋಕಾಕದಲ್ಲಿ ಸೋದರರ ಸದ್ದು!
•ಜಾರಕಿಹೊಳಿ ಸೋದರರ ಜಗಳಬಂದಿ•ಒಂದಾದರೆ ರಾಜ್ಯವನ್ನೇ ಆಳಬಹುದು: ಬಾಲಚಂದ್ರ
Team Udayavani, Apr 24, 2019, 3:28 PM IST
ಗೋಕಾಕ: ನಗರದ ಕೆಬಿಎಸ್ ನಂ.3 ಶಾಲೆಯ ಮತಗಟ್ಟೆ ಸಂಖ್ಯೆ 131ರಲ್ಲಿ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಮತ ಚಲಾಯಿಸಿದರು.ಚಿತ್ರ (೧), ಗೋಕಾಕ: ನಗರದ ಕೆಬಿಎಸ್ ನಂ.3 ಶಾಲೆಯ ಮತಗಟ್ಟೆ ಸಂಖ್ಯೆ 131ರಲ್ಲಿ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ ಚಲಾಯಿಸಿದರು.ಚಿತ್ರ (೨)
ಗೋಕಾಕ: ಲೋಕಸಭೆ ಚುನಾವಣೆಯ ಮತದಾನಕ್ಕೆ ಜನರಲ್ಲಿ ಉತ್ಸಾಹ ಕಂಡು ಬರಲಿಲ್ಲ. ಜಾರಕಿಹೊಳಿ ಸಹೋದರರ ಹೇಳಿಕೆ, ಪ್ರತಿಹೇಳಿಕೆ ವಾಗ್ವಾದ, ಆರೋಪ-ಪ್ರತ್ಯಾರೋಪಗಳೇ ನಗರದಲ್ಲಿ ಸದ್ದು ಮಾಡಿದವು.
ನಗರದ ನ್ಯೂ ಇಂಗ್ಲೀಷ ಸ್ಕೂಲಿನ ಮತಗಟ್ಟೆ ನಂ. 136ರಲ್ಲಿ ಮತ ಚಲಾಯಿಸಲು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಪುತ್ರ ಅಮರನಾಥ ಜೊತೆ ಬೈಕ್ ಮೇಲೆ ಆಗಮಿಸಿ ಮತ ಚಲಾಯಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿ ನಾನು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಕಳೆದ ಐದು ಅವಧಿಯಲ್ಲಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಜವಾಬ್ದಾರಿ ನನಗೆ ಚೆನ್ನಾಗಿ ಗೊತ್ತಿದೆ. ನನಗೆ ಅನ್ಯಾಯವಾಗಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ನಾನು ಯಾವ ಅಭ್ಯರ್ಥಿಗೂ ಮತ ನೀಡುವಂತೆ ಜನರಿಗೆ ಒತ್ತಾಯ ಮಾಡುತ್ತಿಲ್ಲ. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದು ನಿಶ್ಚಿತ ಎಂದರು.
ಮನವೊಲಿಸಲಿಲ್ಲ: 1999ರಲ್ಲಿದ್ದ ಕಾಂಗ್ರೆಸ್ ಪಕ್ಷ ಈಗ ಉಳಿದಿಲ್ಲ. ನಂತರ ಕಾಂಗ್ರೆಸ್‌ನಲ್ಲಿ ಅಂತಃಕಲಹಗಳು ಹೆಚ್ಚಾಗಿವೆ. ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರು ತಮ್ಮಂಥ ನಿಷ್ಠಾವಂತರಿಗೆ ಬೆಲೆಯೇ ನೀಡುತ್ತಿಲ್ಲ. ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ರಮೇಶ ಕತ್ತಿ ಮುನಿಸಿಕೊಂಡಾಗ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಂದು ಅವರ ಮನವೊಲಿಸಿ ಪಕ್ಷದ ಕಾರ್ಯದಲ್ಲಿ ತೊಡಗಿಸಿದರು. ಆದರೆ ತಾವು ಮುನಿಸಿಕೊಂಡಿದ್ದರೂ ಕಾಂಗ್ರೆಸ ಪಕ್ಷದ ಯಾವ ನಾಯಕರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಲಖನ್ ಜಾರಕಿಹೊಳಿ ಶಾಸಕರಾದರೆ ಎಲ್ಲಕ್ಕಿಂತ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನು ಎಂದರು. ನನಗೆ ಸ್ಪರ್ಧಿಸಲು ರಾಜ್ಯದಲ್ಲಿ ಸಾಕಷ್ಟು ಕ್ಷೇತ್ರಗಳು ಇವೆ. ಈಗಾಗಲೇ ಓರ್ವ ಸಹೋದರನನ್ನು ಹಾಳು ಮಾಡಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಅವರ ತಲೆ ಕೆಟ್ಟಿದೆ ಎಂದು ಕಿಡಿ ಕಾರಿದರು.
ಕತ್ತಲೆಯಲ್ಲಿ ಕಲ್ಲೆಸೆದಿದ್ದಾರೆ: ಈ ಮಧ್ಯೆ ತಾಲೂಕಿನ ಗುಜನಾಳ ಗ್ರಾಮದಲ್ಲಿ ಸತೀಶ ಜಾರಕಿಹೊಳಿ ಮಾತನಾಡಿ, ರಮೇಶ ಜಾರಕಿಹೊಳಿ ಅವರಿಗೆ ಪಕ್ಷ ಸಚಿವ ಸ್ಥಾನ ನೀಡಿ ಉಸ್ತುವಾರಿ ಸಹ ನೀಡಿದೆ. ಅದಕ್ಕಿಂತ ಬೇರೇನು ಕೊಡಬೇಕು. ಗೋಕಾಕ ತಾಲೂಕಿನ ರಾಜಕೀಯ ಇತಿಹಾಸ ನೋಡಿದರೆ ಯಾರನ್ನು ಯಾರು ಹಾಳು ಮಾಡಿದರು ಎನ್ನುವುದು ತಿಳಿಯುತ್ತದೆ. ಕಳೆದ ವರ್ಷದಿಂದ ಅನೇಕ ಬಾರಿ ಆಪರೇಷನ್ ಕಮಲಕ್ಕೆ ಕೈಹಾಕಿ ಸಕಾರ ಬೀಳಿಸುವ ಯತ್ನ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಲು ಹೇಳಿ ಕತ್ತಲೆಯಲ್ಲಿ ಕುಳಿತು ಕಲ್ಲೆಸೆಯುವ ಕಾರ್ಯ ಮಾಡಿದ್ದಾರೆ. ರಮೇಶ ಬಹಿರಂಗವಾಗಿ ಬಿಜೆಪಿ ಸೇರಿದರೆ ಗೋಕಾಕ ಕ್ಷೇತ್ರದಲ್ಲಿ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಈ ಬಗ್ಗೆ ಬೇಗನೆ ರಮೇಶ ನಿರ್ಧಾರ ಕೈಗೊಳ್ಳಬೇಕು. ಈ ಎಲ್ಲ ಗೊಂದಲಕ್ಕೆ ಅಂಬಿರಾವ್ ಪಾಟೀಲ ಅವರೇ ಕಾರಣ ಎಂದು ಆರೋಪಿಸಿದರು.
ಲಖನ್ ಜಾರಕಿಹೊಳಿ ನಗರದ ಮತಗಟ್ಟೆ ಹತ್ತಿರ ಮಾಧ್ಯಮದವರ ಜೊತೆ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದೇವೆ. ಸಹೋದರರ ಜೊತೆ ಚರ್ಚಿಸಿ ನಿರ್ಧಾರ ಕೈಕೊಂಡಿದ್ದೇವೆ. ನಮ್ಮ ನಾಯಕ ಸಿದ್ಧರಾಮಯ್ಯ. ಗೋಕಾಕ ಕಾಂಗ್ರೆಸ್‌ನ ಭದ್ರಕೋಟೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಪರ ನಿರ್ಧಾರ ಕೈಗೊಂಡರೆ ಮಾತ್ರ ನಮ್ಮ ಬೆಂಬಲ ಎಂದು ಸ್ಪಷ್ಟ ಪಡಿಸಿದರು.
ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಗರದ ಕೆಬಿಎಸ್ ನಂ 3 ಶಾಲೆಯ ಮತಗಟ್ಟೆ ಸಂಖ್ಯೆ 131 ರಲ್ಲಿ ತಮ್ಮ ಮತ ಚಲಾಯಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ಬಿಜೆಪಿ ಪರ ಅಲೆ ಇದ್ದು, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ. 4ನೇ ಬಾರಿಗೆ ಸುರೇಶ ಅಂಗಡಿ ಸಂಸದರಾಗಿ ಆಯ್ಕೆಯಾಗುವುದು ಖಚಿತ. ಲೋಕಸಭಾ ಚುನಾವಣೆಯ ಫಲಿಂತಾಶದ ನಂತರ ಕೇಂದ್ರದಲ್ಲಿ ಬಲಿಷ್ಠವಾಗಿ ಎನ್‌ಡಿಎ ಸರ್ಕಾರ ರಚಿಸಲಿದ್ದು ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ. ಮೈತ್ರಿ ಸರ್ಕಾರ ಉರುಳಲಿದೆ ಎಂದು ಒಗಟಾಗಿ ಮಾತನಾಡಿದರು.
ಸಹೋದರ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್‌ನಿಂದ ಒಂದು ಹೆಜ್ಜೆ ಹೊರಗೆ ಕಾಲಿಟ್ಟಿದ್ದು, ಒಲ್ಲದ ಮನಸ್ಸಿನಿಂದ ಕಾಂಗ್ರೆಸ್‌ನಲ್ಲಿ ಇದ್ದಾರೆ. ಅವರು ಮುಂದಾಳತ್ವ ವಹಿಸಿದರೆ ಅವರ ಮುಖಾಂತರ ಬಿಜೆಪಿಗೆ ಒಳ್ಳೆಯದಾಗಬಹುದು. ಕುಟುಂಬ ವಿಷಯದಲ್ಲಿ ನಾವೆಲ್ಲ ಸಹೋದರರು ಒಂದೇ ಇರಬೇಕೆನ್ನುವುದು ನನ್ನ ಅಭಿಲಾಷೆ. ರಾಜಕಾರಣದಲ್ಲಿ ಕೆಲ ಭಿನ್ನ ವಿಚಾರಗಳು ಇರುತ್ತವೆ. ಮಾಧ್ಯಮಗಳ ಮುಂದೆ ಕುಟುಂಬಕ್ಕೆ ಸಂಬಂಧಿಸಿದ ಹೇಳಿಕೆ ನೀಡಿದೇ ಎಲ್ಲರೂ ಕುಳಿತು ಮಾತನಾಡಿ ಇದ್ದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು. ಇದರ ಸಂಬಂಧವಾಗಿ ನಾನು ಚಿಕ್ಕವನಾದರೂ ಸಹೋದರರೊಂದಿಗೆ ಮಧ್ಯಸ್ಥಿಕೆ ವಹಿಸಲು ಸಿದ್ದವಿರುವುದಾಗಿ ಹೇಳಿದರು.
ರಮೇಶ ಹಾಗೂ ಸತೀಶ ಅವರು ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದೇ ಸಹೋದರರೆಲ್ಲರೂ ಒಂದೇಯಾದರೆ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯವನ್ನೇ ನಾವು ಆಳಬಹುದು ಎಂದರು.
ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಬಾಲಚಂದ್ರ ಸಹೋದರ ರಮೇಶ ಜಾರಕಿಹೊಳಿ ಅವರು ಬಿಜೆಪಿಯಿಂದ ಒಂದು ರೂಪಾಯಿಯನ್ನೂ ಪಡೆದಿಲ್ಲ, ದುಡ್ಡಿಗಾಗಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ, ಸ್ವಂತ ಹಣ ಹಾಗೂ ಸಾಲ ಮಾಡಿಯಾದರೂ ಚುನಾವಣೆಯಲ್ಲಿ ಬೇರೆಯೊಬ್ಬ ವ್ಯಕ್ತಿಯನ್ನು ಗೆಲ್ಲಿಸುವ ವ್ಯಕ್ತಿಯಾಗಿದ್ದು ಬೇರೆ ಕಾರಣಗಳಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಶಿವಶಂಕರಪ್ಪ ಆರೋಪ ಸತ್ಯಕ್ಕೆ ದೂರ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.