ಶತಾಯುಷಿ ಬಸಲಿಂಗಪ್ಪ ಕೊಡುಗೆ ಅಪಾರ
ಭಕ್ತಿ ಪಂಥವನ್ನು ತನ್ನ ಜೀವನದ್ದಕ್ಕೂ ಅಳವಡಿಸಿಕೊಂಡು ಸಾವಿರಾರು ಜನರಿಗೆ ದಾರಿದೀಪರಾಗಿದ್ದಾರೆ.
Team Udayavani, Oct 18, 2021, 5:49 PM IST
ಚಿಕ್ಕೋಡಿ: ಶಾಲಾ ಶಿಕ್ಷಕನಾಗಿದ್ದುಕೊಂಡು ಸಮಾಜದ ಅಂಕು ಡೊಂಕು ತಿದ್ದಿ ಸಮಾಜವನ್ನು ಆದರ್ಶದತ್ತ ಕೊಂಡೊಯ್ದ ಬಸಲಿಂಗಪ್ಪ ಜೀವನ ಸಮಾಜಕ್ಕೆ ದೊಡ್ಡ ಶಕ್ತಿ ಎಂದು ನಿಡಸೋಸಿ ಸಿದ್ಧ ಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು. ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದ ವಿಶ್ರಾಂತ ಶಿಕ್ಷಕ ಬಸಲಿಂಗಪ್ಪ ಕುಂಬಾರ ಜನ್ಮ ಶತಮಾನೋತ್ಸವ ಹಾಗೂ ತುಲಾಭಾರ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.
ಬಸಲಿಂಗಪ್ಪ ಕುಂಬಾರ ತಮ್ಮ ಮಕ್ಕಳನ್ನು ವೈದ್ಯರಾಗಿಸಿ, ಹಳ್ಳಿಯಲ್ಲಿ ಆಸ್ಪತ್ರೆ ಪ್ರಾರಂಭ ಮಾಡಿಸಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ ಎಂದರು. ತಿಮ್ಮಾಪೂರ ಮುದಗಲ್ ಮಹಾಂತ ಸ್ವಾಮೀಜಿ ಮಾತನಾಡಿ, ಇಂದಿನ ದಿನಮಾನದಲ್ಲಿ ಆಯುಷ್ಯದ ಕೊರತೆ ಇರುವಾಗ ಶತಾಯುಷಿಯನ್ನು ಕಣ್ಣು ತುಂಬ ನೋಡುವುದೇ ಭಾಗ್ಯ. ಭಕ್ತಿ ಪಂಥವನ್ನು ತನ್ನ ಜೀವನದ್ದಕ್ಕೂ ಅಳವಡಿಸಿಕೊಂಡು ಸಾವಿರಾರು ಜನರಿಗೆ ದಾರಿದೀಪರಾಗಿದ್ದಾರೆ. ಶಿಕ್ಷಕರಾಗಿ ಸಮಾಜದ ಪ್ರತಿಯೊಬ್ಬರಿಗೆ ಅಕ್ಷರಭ್ಯಾಸ ಕಲಿಸಿದ ಬಸಲಿಂಗಪ್ಪ ಕುಂಬಾರ ಕೊಡುಗೆ ಅಪಾರ.
ಸಮಾಜದಲ್ಲಿ ಆದರ್ಶ ಜೀವನ ನಡೆಸಿದ ಬಸಲಿಂಗಪ್ಪನವರ ಜೀವನ ಚರಿತ್ರೆ ಪುಸ್ತಕ ಹೊರಬರಬೇಕು ಎಂದರು. ಇದೇ ಸಂದರ್ಭದಲ್ಲಿ ಬಸಲಿಂಗಪ್ಪ ಕುಂಬಾರ ದಂಪತಿಯನ್ನು ಸ್ವಾಮೀಜಿಗಳು ಸನ್ಮಾನಿಸಿ, ಗೌರವಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ್ಯಾಯಿ ಮಾತನಾಡಿ, ಬಸಲಿಂಗಪ್ಪ ಕುಂಬಾರ ಮನೆತನದಿಂದ ನಾಗರಮುನ್ನೋಳ್ಳಿ ಗ್ರಾಮ ರಾಜ್ಯದ ಗಮನ ಸೆಳೆದಿದೆ. ಅವರು ಆರೋಗ್ಯವಾಗಿದ್ದುಕೊಂಡು ಮಾರ್ಗದರ್ಶನ ಮಾಡುವುದು ಅವಶ್ಯಕವಾಗಿದೆ ಎಂದರು. ಖ್ಯಾತ ಲಕ್ವಾ ತಜ್ಞ ಡಾ.ಎಂ.ಬಿ.ಕುಂಬಾರ ಅಧ್ಯಕ್ಷತೆ ವಹಿಸಿದ್ದರು.
ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಕಬ್ಬೂರ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರಿಯ ಸಹಕಾರಿ ಧುರೀಣ ಡಿ.ಟಿ.ಪಾಟೀಲ, ಬಸವಪ್ರಭು ಮನಗೂಳಿ, ಬಾಳಾಪ್ಪ ಮಗದುಮ್ಮ, ಕಾಡಾಪ್ಪ ಹಮ್ಮನ್ನವರ, ಮಹಾದೇವ ಕಲ್ಲಪ್ಪ ಕುಂಬಾರ, ಬಾಬುಗೌಡ ಬಸಗೌಡನ್ನವರ, ಶಿವಲಿಂಗ ಈಟಿ, ಮಾರುತಿ ಕೊಟಬಾಗಿ, ಸಿದ್ದಪ್ಪ ಪಾಶ್ಚಾಪೂರೆ, ರಾಮಪ್ಪ ಚೌಗಲೆ, ಚನಮಲ್ಲ ನಾಯಿಕ, ಶಿವಪ್ಪ ಈಟಿ, ದಾನಪ್ಪ ಕೊಟಬಾಗಿ, ಲಕ್ಷ್ಮಣ ಪೂಜೇರಿ, ವಿನಾಯಕ ಕುಂಬಾರ, ಬಸವರಾಜ ಕುಂಬಾರ, ಶಿವು ಮರ್ಯಾಯಿ ಮುಂತಾದವರು ಇದ್ದರು. ಶಿಕ್ಷಕ ಚಂದ್ರಶೇಖರ ಅರಭಾವಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.