2021-22: ತೆರಿಗೆ ಸಂಗ್ರಹ ಹೆಚ್ಚಳ
Team Udayavani, Dec 18, 2021, 5:55 AM IST
ಬೆಳಗಾವಿ: ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿ ದರೆ, 2021-22ನೇ ಸಾಲಿನ ಆದಾಯ ಸಂಗ್ರಹದಲ್ಲಿ ಶೇ 25.6ರಷ್ಟು ಹೆಚ್ಚಳವಾಗಿದೆ.
ವಿಧಾನಸಭೆಯಲ್ಲಿ ಸರಕಾರ 2021-22ನೇ ಸಾಲಿನ ಮಧ್ಯ ವಾರ್ಷಿಕ ವರದಿ ಮಂಡಿಸಿದ್ದು, ರಾಜ್ಯದ ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆಗಳು ಮತ್ತು ನೋಂದಣಿ ಮತ್ತು ಮುದ್ರಾಂಕ ಸೇರಿ ನಾಲ್ಕೂ ತೆರಿಗೆಗಳು ಸೆಪ್ಟಂಬರ್ ವರೆಗೆ ಶೇ. 46ರಷ್ಟು ಸಂಗ್ರಹವಾಗಿದೆ. ಕಳೆದ ವರ್ಷ ಅಂದರೆ 2020-21ನೇ ಸಾಲಿನಲ್ಲಿ ಸೆಪ್ಟಂಬರ್‌ವರೆಗೆ ಶೇ.37ರಷ್ಟು ಮಾತ್ರ ತೆರಿಗೆ ಸಂಗ್ರಹ ಮಾಡಲಾಗಿತ್ತು.
ಸೆಪ್ಟಂಬರ್ ಅಂತ್ಯದವರೆಗೂ ವಾಣಿಜ್ಯ ತೆರಿಗೆ 36,285 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 19.2ರಷ್ಟು ಹೆಚ್ಚಳವಾಗಿದೆ. ಅಬಕಾರಿ ತೆರಿಗೆ 12,396 ಕೋಟಿ ರೂ. ಸಂಗ್ರಹವಾಗಿದ್ದು, ಶೇ.50 ಸಂಗ್ರಹವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 26.9 ಹೆಚ್ಚಳವಾಗಿದೆ. ಮೋಟಾರು ವಾಹನ ತೆರಿಗೆ 2,836 ಕೋಟಿ ಸಂಗ್ರಹ ವಾಗಿದ್ದು, ಸೆಪ್ಟಂಬರ್ ವರೆಗೂ ಶೇ.38ರಷ್ಟು ಪ್ರಗತಿ ಸಾಧಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 54.1 ಹೆಚ್ಚಳವಾಗಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕ 5,942 ಕೋಟಿ ರೂ. ಸಂಗ್ರಹವಾಗಿದ್ದು, ಇದುವರೆಗೂ ಶೇ.47 ಸಂಗ್ರಹ ವಾಗಿದೆ. ಇತರ ಮೂಲಗಳಿಂದ 257 ಕೋಟಿ ರೂ. ಸಂಗ್ರಹವಾಗಿದೆ.
ಸರಕಾರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಯಾವುದೇ ಸಾಲ ಮಾಡಿಲ್ಲ. ಕೋವಿಡ್‌ನಿಂದಾಗಿ ಆರ್ಥಿಕ ನಷ್ಟ ಸರಿದೂರಿಸಲು ರಾಜ್ಯ ಸರಕಾರಗಳು ಜಿಎಸ್‌ಡಿಪಿಯ ಶೇ.1ರಷ್ಟು ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಸರಕಾರ ಆನುಮತಿ ನೀಡಿದೆ. 2021-22ನೇ ಸಾಲಿನಲ್ಲಿ ಜಿಎಸ್‌ಟಿ ಸಂಗ್ರಹದ ಕೊರತೆ ಸರಿದೂಗಿಸಲು ಕೇಂದ್ರ ಸರಕಾರದಿಂದ ಸ್ಪೆಷಲ್ ವಿಂಡೋ ಅಡಿಯಲ್ಲಿ ಸರಕಾರ 18,109 ಕೋಟಿ ಪಡೆಯುತ್ತದೆ ಎಂದು ಅಂದಾಜಿಸಲಾಗಿದೆ. ಸೆಪ್ಟಂಬರ್ ವರೆಗೆ ಕೇಂದ್ರದಿಂದ ರಾಜ್ಯಕ್ಕೆ 8,542 ಕೋಟಿ ರೂ. ಬಂದಿದೆ.
ಇದನ್ನೂ ಓದಿ:ಪೆಗಾಸಸ್ ವಿವಾದ: ಪ.ಬಂಗಾಳಕ್ಕೆ ಮುಖಭಂಗ; ಸಮಿತಿಯ ತನಿಖೆಗೆ ಸುಪ್ರೀಂ ಕೋರ್ಟ್ ತಡೆ
ಎನ್‌ಡಿಆರ್‌ಎಫ್ ನಿಯಮ ಪ್ರಕಾರ ಪರಿಹಾರ
ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆ ಪರಿಹಾರ ನೀಡಲು ರಾಜ್ಯ ಸರಕಾರಕ್ಕೆ ಹೆಚ್ಚಿನ ಹಣಕಾಸಿನ ಹೊರೆಯಾಗುತ್ತಿದ್ದು. ಇನ್ನು ಮುಂದೆ ಸರಕಾರ ಕೇಂದ್ರದ ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರವಷ್ಟೇ ಪರಿಹಾರ ನೀಡಬೇಕೆಂದು ಮುಖ್ಯ ಕಾರ್ಯ ದರ್ಶಿ ನೇತೃತ್ವದ ವಿತ್ತೀಯ ನಿರ್ವಹಣೆ ಪರಿಶೀಲನ ಸಮಿತಿ ಶಿಫಾರಸು ಮಾಡಿದೆ.
ಕೋವಿಡ್ ಕಾರಣದಿಂದ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿದ್ದು, ನೆರೆ ಪರಿಹಾರ ನೀಡಲು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಅರ್‌ಎಫ್ ಷರತ್ತುಗಳಿಗಿಂತ ಹೆಚ್ಚುವರಿ ಪರಿಹಾರ ನೀಡುತ್ತಿರುವುದು ಸರಕಾರಕ್ಕೆ ಹೊರೆಯಾಗಿದೆ ಎಂದು ಸಮಿತಿ ತಿಳಿಸಿದೆ.
ಸಹಾಯಾನುದಾನ ಇಳಿಮುಖ
ಕೇಂದ್ರ ತೆರಿಗೆ ಪಾಲು ರಾಜ್ಯಕ್ಕೆ ಹಂಚಿಕೆ ಮಾಡಿದ್ದ 24,272 ಕೋಟಿ ರೂ. ಪೈಕಿ ಸೆಪ್ಟಂಬರ್‌ವರೆಗೆ 9.488 ಕೋಟಿ ರೂ.ಮೊತ್ತವಷ್ಟೇ ಬಿಡುಗಡೆಯಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ರಾಜ್ಯಕ್ಕೆ ಕೇಂದ್ರ ಹಂಚಿಕೆ ಮಾಡಿದ್ದ ತೆರಿಗೆ ಪಾಲಿನಲ್ಲಿ ಶೇ.39 ರಷ್ಟು ಮಾತ್ರ ಬಂದಿದೆ. ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ಮತ್ತು ಸಹಾಯಾನುದಾನ ಇಳಿಮುಖವಾಗಿದೆ. ಕೊರೊನಾ ಎರಡನೇ ಅಲೆ ಪರಿಣಾಮವಾಗಿ ತೆರಿಗೆ ಸಂಗ್ರಹದಲ್ಲಿ 3,105 ಕೋಟಿ ರೂ. ಕೊರತೆಯಾಗಿರುವ ಬಗ್ಗೆಯೂ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆ ವರದಿಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್ ರಾಜೀನಾಮೆಗೆ ಬಿಜೆಪಿ ಆಗ್ರಹ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.