ಮತ್ತೆ 358 ಪಾಸಿಟಿವ್; 404 ಮಂದಿ ಗುಣಮುಖ
Team Udayavani, Aug 16, 2020, 4:01 PM IST
ಬೆಳಗಾವಿ: ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಶನಿವಾರ ಒಂದೇ ದಿನ 404 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 358 ಜನರಿಗೆ ಸೋಂಕು ತಗುಲಿದೆ.
ಬೆಳಗಾವಿಯ 72 ವರ್ಷದ ವೃದ್ಧ, ಗೋಕಾಕ ದ 48 ವರ್ಷದ ವ್ಯಕ್ತಿ, ಬೆಳಗಾವಿಯ ಯಳ್ಳೂರನ 92 ವರ್ಷದ ವೃದ್ಧ, ಬೆಳಗಾವಿಯ 32 ವರ್ಷದ ವ್ಯಕ್ತಿ ಹಾಗೂ ಬೆಳಗಾವಿಯ 73 ವರ್ಷದ ವೃದ್ಧ ಕೋವಿಡ್ ಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 118 ಮಂದಿ ಸೋಂಕಿನಿಂದ ಬಲಿಯಾದಂತಾಗಿದೆ. ಹೊಸ 358 ಹೊಸ ಪ್ರಕರಣಗಳಿಂದ ಒಟ್ಟು 7332 ಸೋಂಕಿತರು ಆಗಿದ್ದು, ಒಂದೇ ದಿನ 404 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ಇಲ್ಲಿಯವರೆಗೆ 3510 ಜನ ಬಿಡುಗಡೆ ಆದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್-19 ವಾರ್ಡ್‌ನಲ್ಲಿ ಸದ್ಯ 3704 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನವರೆಗೆ 61752 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 52779 ವರದಿ ನಕಾರಾತ್ಮಕವಾಗಿದೆ. ಇನ್ನೂ 818 ಜನರ ವರದಿ ಬರುವುದು ಬಾಕಿ ಇದೆ.
ಗೋಕಾಕ: ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ಶನಿವಾರ 59 ಪ್ರಕರಣಗಳು ದೃಢಪಟ್ಟಿವೆ ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ-38, ಕಲ್ಲೋಳ್ಳಿ-3, ಘಟಪ್ರಭಾ-3, ಪುಲಗಡ್ಡಿ-4, ಶಿಗಿಹಳ್ಳಿ-2, ಮಲ್ಲಾಪೂರ ಪಿ ಜಿ, ಕೊಣ್ಣೂರ, ಕೆಮ್ಮನಕೋಲ, ಮಮದಾಪೂರ, ಮುನ್ಯಾಳ, ದಂಡಾಪೂರ, ಕೌಜಲಗಿ, ಪಾಮಲದಿನ್ನಿ, ಮೂಡಲಗಿ ಗ್ರಾಮದಲ್ಲಿ ತಲಾ ಒಂದು ಸೋಂಕು ದೃಢಪಟ್ಟಿದೆ.
ಬೈಲಹೊಂಗಲದಲ್ಲಿ 12 ಪ್ರಕರಣ : ಪಟ್ಟಣದ ಮೂವರು ಸೇರಿದಂತೆ ತಾಲೂಕಿನಲ್ಲಿ 12 ಕೋವಿಡ್ ಪ್ರಕರಣ ಶನಿವಾರ ದೃಢಪಟ್ಟಿವೆ. ಪಟ್ಟಣದ ಬಸವ ನಗರದ 65 ವರುಷದ ಮಹಿಳೆ ಮೃತಳಾಗಿದ್ದಾಳೆ. ಕೆಸಿ ನಗರ 3ನೇ ಕ್ರಾಸ್‌ನ 16 ವರುಷದ ಹುಡುಗಿ, ಬಸವ ನಗರದ 7ನೇ ಕ್ರಾಸ್‌ನ 14 ವರುಷದ ಹುಡುಗ, ತಾಲೂಕಿನ ಕಿತ್ತೂರು 3, ಸಂಪಗಾವ 2, ಶೀಗಿಹಳ್ಳಿ, ಸೋಮನಟ್ಟಿ, ದಾಸ್ತಿಕೊಪ್ಪ, ಹುಣಶೀಕಟ್ಟಿಯಲ್ಲಿ ತಲಾ ಒಂದು ಪ್ರಕರಣಗಳಾಗಿದ್ದು, ಒಟ್ಟು 91 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಕೇರ್ ಸೆಂಟರ್‌ನಿಂದ ಶನಿವಾರ 6 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಎಸ್.ಎಸ್ ಸಿದ್ದನವರ ತಿಳಿಸಿದ್ದಾರೆ.
ಖಾನಾಪುರ: 7 ಜನರಿಗೆ ಸೋಂಕು : ತಾಲೂಕಿನ 7 ಜನರಿಗೆ ಶನಿವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಪಟ್ಟಣದ ಡೊರಗಲ್ಲಿಯ 68 ವರ್ಷದ ವೃದ್ಧ, ಬಿಇಒ ಕಚೇರಿಯ 53 ವರ್ಷದ ಸಿಬ್ಬಂದಿ, ಬಿಜಗರ್ಣಿ ಗ್ರಾಮದಲ್ಲಿ 21 ವರ್ಷದ ಯುವಕ, 21 ವರ್ಷದ ಯುವತಿ, 21 ವರ್ಷ ಯುವಕ, ಚಿಕ್ಕದಿನಕೋಪ್ಪ ಗ್ರಾಮದಲ್ಲಿ 36 ವರ್ಷದ ಪುರುಷ, 96 ವರ್ಷ ವೃದ್ಧನಿಗೆ ಸೋಂಕು ತಗುಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.