4.51 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆಗೆ ಕ್ರಮ
Team Udayavani, Nov 11, 2019, 12:46 PM IST
ಕಾಗವಾಡ: ಜುಗೂಳ ಗ್ರಾಮದಲ್ಲಿ ಉಗಾರ, ಶಿರಗುಪ್ಪಿ, ಮಂಗಾವತಿ, ಜುಗೂಳ ಮಧ್ಯದ ಮಂಗಾವತಿ-ಜುಗೂಳ 2.5 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ರವಿವಾರ ಅನರ್ಹ ಶಾಸಕ ಶ್ರೀಮಂತ ಪಾಟೀಲ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕೃಷ್ಣಾ ನದಿ ತೀರದ ಜುಗೂಳ, ಮಂಗಾವತಿ, ಶಹಾಪುರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಈ ಮೊದಲು ನೀಡಿರುವ ಭರವಸೆಯಂತೆ 4.51 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು.
ಇದೇ ರೀತಿ ಮರಗುಬಾಯಿ ದೇವಸ್ಥಾನ ಹತ್ತಿರ 5 ಲಕ್ಷ ರೂ. ವೆಚ್ಚದ ಸಮುದಾಯ ಭವನ,1008 ಆದಿನಾಥ ದಿಗಂಬರ ಜೈನ ಮಂದಿರ ಹತ್ತಿರ 20 ಲಕ್ಷ ರೂ. ವೆಚ್ಚದ ಸಮುದಾಯ ಭವನ, ಜುಗೂಳ ಗ್ರಾಮದ ಜಾಮಾ ಮಸೀದಿ ಹತ್ತಿರ ಸಮುದಾಯ ಮಂಟಪಕ್ಕೆ 25 ಕೋಟಿ, ದಲಿತರ ಓಣಿಯಲ್ಲಿ ಚರಂಡಿ ನಿರ್ಮಾಣಕ್ಕೆ 40 ಲಕ್ಷ, ಜುಗೂಳ-ಶೇಡಬಾಳ, ಜುಗೂಳ-ಕಾಗವಾಡ ಮಧ್ಯದ ರಸ್ತೆ ನಿರ್ಮಾಣಕ್ಕೆ 50 ಲಕ್ಷ ಹೀಗೆ 4.51 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ಸಂಜಯ ಮಿಣಚೆ, ಮಾಜಿ ಅಧ್ಯಕ್ಷ ಬಾಬಾಸಾಹೇಬ ಪಾಟೀಲ, ಸದಸ್ಯ ಸುರೇಶ ಆದುಕೆ, ಅರುಣ ಗಣೇಶವಾಡಿ, ಮಹಾವೀರ ಗಣೇಶವಾಡಿ, ದಾದಾ ಅಂಬಿ, ರವಿ ವಾಂಟೆ, ಜಿಪಂ ಅಭಿಯಂತರ್ ಅಪ್ಪಾಸಾಹೇಬ ಅವತಾಡೆ, ಗುತ್ತಿಗೆದಾರ ಭಾವುಸಾಹೇಬ ಜಾಧವ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.