ಶಾಲೆಗಳ ಅಭಿವೃದ್ಧಿಗೆ 4 ಕೋಟಿ ರೂ. ಯೋಜನೆ
ಶಾಲಾ ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳ ಯೋಜನಾ ಪಟ್ಟಿಗೆ ಸರ್ಕಾರದ ಅನುಮೋದನೆ
Team Udayavani, Dec 19, 2020, 3:53 PM IST
ಬೆಳಗಾವಿ: ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಇಲ್ಲಿ ಸೌಲಭ್ಯಗಳ ಕೊರತೆ ಬಹಳ ಎಂಬುದುಮೊದಲಿಂದಲೂ ಇರುವ ದೂರು. ಆದರೆ ಸ್ಥಳೀಯ ಶಾಸಕರುಮನಸ್ಸು ಮಾಡಿದರೆ ಈ ಶಾಲೆಗಳ ಚಿತ್ರವೇ ಬದಲಾಗಬಹುದು. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ವಾತಾವರಣ ಅಲ್ಲಿ ಕಾಣಬಹುದು. ಈಗ ಅಂತಹ ಜನುಪಯೋಗಿ ಕಾರ್ಯಕ್ಕೆ ಶಾಸಕರು ಹಾಗೂ ಸರಕಾರ ಮುಂದಾಗಿದೆ.
ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳನ್ನು ಶಾಸಕರಪ್ರದೇಶಾಭಿವೃದ್ಧಿ ಯೋಜನೆಯಡಿದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಇದರಿಂದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರೂ ಹೊರತಾಗಿಲ್ಲ. ಮೊದಲಿಂದಲೂ ತಮ್ಮ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹಲವಾರು ಯೋಜನೆಗಳನ್ನು ರೂಪಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುವ ಅಭಯ ಪಾಟೀಲ ತಮ್ಮ ಕ್ಷೇತ್ರದಲ್ಲಿ ಸರಕಾರಿ ಪ್ರೌಢಶಾಲೆ ಹಾಗೂ ಕಾಲೇಜ್‌ಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ.
ಈಗ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಮೂರು ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಶಾಸಕ ಅಭಯ ಪಾಟೀಲ, ಇದಕ್ಕಾಗಿ ಸುಮಾರು ನಾಲ್ಕು ಕೋಟಿ ರೂಗಳ ಯೋಜನೆ ಸಿದ್ಧಪಡಿಸಿದ್ದಾರೆ. ಎರಡು ಶಾಲೆಗಳ ಅಭಿವೃದ್ಧಿ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ.ಬೆಳಗಾವಿ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರಸ್ವತಿ ಬಾಲಕಿಯರ ಪ್ರೌಢಶಾಲೆ, ವಡಗಾವಿಯ ಕನ್ನಡ ಶಾಲೆ ನಂ 14 ಹಾಗೂ ಯಳ್ಳೂರು ಗ್ರಾಮದ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದಿರುವ ಶಾಸಕ ಅಭಯ ಪಾಟೀಲ ಈ ಶಾಲೆಗಳಿಗೆ ಅಗತ್ಯವಾಗಿ ಬೇಕಾಗಿರುವ ಶಾಲಾ ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳ ಯೋಜನಾ ಪಟ್ಟಿ ತಯಾರಿಸಿದ್ದಾರೆ. ಇದಕ್ಕೆ ಸರ್ಕಾರದ ಅನುಮೋದನೆ ಸಹ ಸಿಕ್ಕಿದೆ.
ಸರಸ್ವತಿ ಶಾಲೆ- 1.25 ಕೋಟಿ ರೂ. : ಬೆಳಗಾವಿಯ ಪ್ರಮುಖ ಬಾಲಕಿಯರ ಪ್ರೌಢಶಾಲೆ ಇದು. ಇದಕ್ಕೆ ನೂರು ವರ್ಷಗಳ ಇತಿಹಾಸ ಇದೆ. ಇಲ್ಲಿ ಸುಮಾರು 600 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈಗ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಲೆಯನ್ನು ದತ್ತು ಪಡೆದಿರುವ ಶಾಸಕ ಅಭಯ ಪಾಟೀಲ 1.25 ಕೋಟಿ ರೂ ವೆಚ್ಚದಲ್ಲಿ ಎಂಟು ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದಲ್ಲದೆ ಇನ್ನೂ ಹೆಚ್ಚಿನಕೊಠಡಿಗಳ ಅಗತ್ಯವಿದ್ದು ಅದಕ್ಕೆ ಮೂರು ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.
ಶಾಲೆಯ ಅಭಿವೃದ್ಧಿಗೆ ಶಾಸಕರು ಕ್ರಮಕೈಗೊಂಡಿದ್ದಾರೆ. ಹಳೆಯ ಕಟ್ಟಡ ಕೆಡವಿ ಈಗ ಎಂಟು ಕೊಠಡಿಗಳ ನಿರ್ಮಾಣ ಪ್ರಗತಿಯಲ್ಲಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವದರಿಂದ ಇನ್ನೂ ಹೆಚ್ಚು ಕೊಠಡಿಗಳು ಬೇಕುಎಂದು ಶಾಸಕರಿಗೆ ಬೇಡಿಕೆ ಸಲ್ಲಿಸಲಾಗಿದೆ. –ಮಹ್ಮದ ಮುಲ್ಲಾ, ಮುಖ್ಯ ಶಿಕ್ಷಕರು, ಸರಸ್ವತಿ ಶಾಲೆ.
ಯಳ್ಳೂರು ಮರಾಠಿ ಶಾಲೆ- 25 ಲಕ್ಷ ರೂ. : ಯಳ್ಳೂರು ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಗೆ 25 ಲಕ್ಷ ರೂ ವೆಚ್ಚದ ಯೋಜನೆ ಸಿದ್ದಪಡಿಸಿರುವ ಶಾಸಕರು ಈ ಹಣದಲ್ಲಿ ಶಾಲೆಗೆ ಡೆಸ್ಕ, ಕ್ಲಾಸ್ ಮಾನಿಟರ್ ಹಾಗೂ ಗ್ರೀನ್ ಬೋರ್ಡ ಒದಗಿಸಲು ಉದ್ದೇಶಿಸಿದ್ದಾರೆ.
ವಡಗಾವಿ ಶಾಲೆ ನಂ.14-66 ಲಕ್ಷ ರೂ. ಕೊಠಡಿ ಜಿಲ್ಲೆಯ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಇದೂ ಸಹ ಒಂದು. ಶಾಲೆಗೆ ದಶಕಗಳ ಇತಿಹಾಸವಿದೆ. ಎಲ್ ಕೆ ಜಿ ಯಿಂದ ಹಿಡಿದು ಎಂಟನೇ ತರಗತಿಯವರೆಗೆಇಲ್ಲಿ ಕಲಿಸಲಾಗುತ್ತಿದೆ. ಇದಲ್ಲದೆ ಆಂಗ್ಲಮಾಧ್ಯಮದಲ್ಲಿ ಒಂದರಿಂದ ಎರಡು ತರಗತಿಗಳಿವೆ. ಒಟ್ಟು 750 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯನ್ನು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ದತ್ತು ಪಡೆದಿರುವ ಶಾಸಕ ಅಭಯ ಪಾಟೀಲ 66 ಲಕ್ಷ ರೂ ವೆಚ್ಚದಲ್ಲಿ ಆರು ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಶಾಲಾ ಆವರಣದಲ್ಲಿ ಒಟ್ಟು 25 ಕೊಠಡಿಗಳಿದ್ದು ಅದರಲ್ಲಿ ಆರು ಕೊಠಡಿಗಳನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ಈಗಾಗಲೇ 60 ಲಕ್ಷ ರೂ ವೆಚ್ಚದಲ್ಲಿ ಸ್ಮಾರ್ಟ್‌ಕ್ಲಾಸ್ ರೂಮ್‌ಗಳನ್ನು ನಿರ್ಮಾಣ ಮಾಡಲಾಗಿದೆ
ವಡಗಾವಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಬಹಳ. ಹೀಗಾಗಿ ಇನ್ನೂ ಬಹಳ ಕೊಠಡಿಗಳು ಬೇಕು. ಇದಕ್ಕಾಗಿ ಶಾಸಕರಿಗೆ ಮನವಿ ಮಾಡಿದ್ದೇವೆ. ಈಗ ಆರು ಕೊಠಡಿಗಳು ಮಂಜೂರಾಗಿವೆ. ಇದಲ್ಲದೆ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ ಅಗತ್ಯವಾಗಿ ಬೇಕಾಗಿದೆ. ಇದನ್ನು ಶಾಸಕರ ಗಮನಕ್ಕೆ ತಂದಿದ್ದೇವೆ. –ವಿ ಟಿ ಅಪ್ಪಾಜಿಗೋಳ, ಮುಖ್ಯೋಪಾಧ್ಯಾಯರು.
ಸರಕಾರಿ ಶಾಲೆಗಳು ಯಾವುದರಲ್ಲೂ ಕಮ್ಮಿ ಇರಬಾರದು ಎಂಬುದು ನಮ್ಮ ಗುರಿ ಹಾಗು ಆಶಯ. ಶಾಲೆಗಳು ಸುಸಜ್ಜಿತವಾಗಿದ್ದರೆ ಮಕ್ಕಳು ಬರುತ್ತಾರೆ. ಉತ್ತಮ ವಿದ್ಯಾಭ್ಯಾಸ ಮತ್ತ ಫಲಿತಾಂಶನಿರೀಕ್ಷೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಖಾಸಗಿಶಾಲೆಗಳಿಗೆ ಏನೂ ಕಡಿಮೆ ಇಲ್ಲ ಎನ್ನುವಂತೆ ಕ್ಷೇತ್ರದ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವದು.-ಅಭಯ ಪಾಟೀಲ, ಶಾಸಕರು, ಬೆಳಗಾವ ದಕ್ಷಿಣ.
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.