ಕನ್ನಡ ಜಾಗೃತಿ ಮಾಲೆಯ 43ನೇ ಪುಸ್ತಕ ಲೋಕಾರ್ಪಣೆ ನಾಡಿದ್ದು
1997ರಿಂದ ಪುಸ್ತಕ ಪ್ರಕಾಶನ ಜಾಗೃತಿ ಮಾಲೆಯ ಕೆಲ ಪುಸ್ತಕಗಳನ್ನು ಸರ್ಕಾರವೇ ಖರೀದಿಸಿ ಓದಲು ಶಾಸಕರಿಗೆ ವಿತರಿಸಿದೆ
Team Udayavani, Oct 31, 2020, 12:58 PM IST
ಚಿಕ್ಕೋಡಿ: ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನಮಠ.
ಚಿಕ್ಕೋಡಿ: ಕನ್ನಡವನ್ನು ಉಳಿಸಿ-ಬೆಳೆಸಿ ಹಾಗೂ ಕನ್ನಡ ಸಾಹಿತ್ಯವನ್ನು ಗಡಿ ಭಾಗದ ಜನರಿಗೆ ಪರಿಚಯಿಸಿರುವ ಕೀರ್ತಿ ಕನ್ನಡ ಸ್ವಾಮೀಜಿ ಎಂದೇ ಕರೆಯಲ್ಪಡುವ ಅಲ್ಲಮಪ್ರಭು ಸ್ವಾಮೀಜಿಗೆಸಲ್ಲುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ಜನರ ಸಾಹಿತ್ಯ ಪ್ರೀತಿ ಹಾಗೂ ಸೌಹಾರ್ದತೆಗೆ ಚಿಂಚಣಿ ಶ್ರೀ ಅಲ್ಲಮಪ್ರಭುದೇವ ಸಿದ್ಧಸಂಸ್ಥಾನ ಮಠ ಹಾಗೂ ಗಡಿ ಕನ್ನಡಿಗರ ಬಳಗ ಸಾಕ್ಷಿಯಾಗಿ ನಿಂತಿದೆ.
ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸಲು ಕಂಕಣ ಬದ್ಧರಾಗಿರುವ ಚಿಂಚಣಿಯ ಸಿದ್ಧ ಸಂಸ್ಥಾನ ಮಠದ ಪೀಠಾಧಿ ಪತಿ, ಕನ್ನಡದ ಸ್ವಾಮೀಜಿ ಅಲ್ಲಮಪ್ರಭು ಸ್ವಾಮೀಜಿ ಸ್ಥಾಪಿಸಿರುವ ಗಡಿ ಕನ್ನಡಿಗರ ಬಳಗದ ಜನ ಕಲ್ಯಾಣ ಸಂಸ್ಥೆಯ ವತಿಯಿಂದ ನಡೆಯುವ ರಾಜ್ಯೋತ್ಸವ ಹಾಗೂ ಕನ್ನಡ ಜಾಗೃತಿ ಪುಸ್ತಕ ಮಾಲೆಯ 43ನೆಯಕೃತಿ ಬಿಡುಗಡೆ ನ.2 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
1997ರಲ್ಲಿ ಅಲ್ಲಮಪ್ರಭು ಜನ ಕಲ್ಯಾಣಸಂಸ್ಥೆಯ ಮೂಲಕ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿದ ಸ್ವಾಮೀಜಿಗಳು ಪ್ರತಿ ವರ್ಷ ಅತ್ಯಮೂಲ್ಯವಾದ ಕನ್ನಡ ಪರ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದ್ದಾರೆ. ಕನ್ನಡದ ಉಳಿವು, ಭಾಷೆ, ಸಂಸ್ಕೃತಿಯ ರಕ್ಷಣೆ ಜತೆಗೆ ಗಡಿ ಭಾಗದ ಮರಾಠಿ ಭಾಷಿಕರಿಗೆ ಕನ್ನಡ ಸಾಹಿತ್ಯದಪುಸ್ತಕಗಳನ್ನು ಮರಾಠಿ ಭಾಷೆಗೆ ಅನುವಾದಿಸಿ ಕನ್ನಡದ ಕುರಿತು ಜಾಗೃತಿ ಮೂಡಿಸುತ್ತ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬಂದಿರುವ ಪರಂಪರೆ ಶ್ರೀಮಠದ ಗಡಿ ಕನ್ನಡಿಗರ ಬಳಗಕ್ಕೆ ಇದೆ. ಕನ್ನಡ ಜಾಗೃತಿ ಪುಸ್ತಕ ಮಾಲೆಯ ಹಲವಾರು ಕೃತಿಗಳನ್ನು ಕರ್ನಾಟಕ ಸರಕಾರದ ಸಚಿವಾಲಯ ಖರೀದಿಸಿ ಶಾಸಕರಿಗೆ ಓದಲು ಒದಗಿಸಿದ್ದು ಈ ಕೃತಿಗಳ ಮೌಲಿಕತೆಗೆ ನಿದರ್ಶನವಾಗಿದೆ. ಗಡಿ ವಿವಾದ ಮತ್ತು ಮಹಾಜನ ಆಯೋಗದ ಕುರಿತು ಪ್ರಬುದ್ಧವಾಗಿ ಮಾತನಾಡಬಲ್ಲ ಶ್ರೀಗಳು ಕನ್ನಡ ಭಾಷೆಯ ಮಹತ್ವ ಮತ್ತು ಪ್ರಾಚೀನತೆ ಕುರಿತು ಅಪೂರ್ವ ಸಂಗ್ರಹ ಹೊಂದಿದ್ದಾರೆ.
ನ. 2ರಂದು ಬೆಳಗಾವಿಯ ಡಾ| ಎ.ಬಿ.ಘಾಟಗೆ ಬರೆದ ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ ಪುಸ್ತಕ ಬಿಡುಗಡೆ ಸಮಾರಂಭ ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನಮಠದಲ್ಲಿ ನಡೆಯಲಿದೆ. ಶ್ರೀ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಗಣೇಶ ಹುಕ್ಕೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ| ಸರಜೂ ಕಾಟ್ಕರ್ ಆಗಮಿಸಲಿದ್ದಾರೆ.
ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಪುಸ್ತಕಗಳು ಇವು. ಧಾರ್ಮಿಕ ಹಾಗೂ ಶ್ರೀಮಠಕ್ಕೆ ಸಂಬಂಧಿ ಸಿದವಲ್ಲ. ನಾಡು, ನುಡಿ, ಜಲ ಕಳಕಳಿ ಹೊಂದಬೇಕು ಎನ್ನುವ ದೃಷ್ಟಿಯಿಂದ ರಚಿತವಾದ ಕೃತಿಗಳು. ಕರ್ನಾಟಕ-ಮಹಾರಾಷ್ಟ್ರದ ಜನ ಸೌಹಾರ್ದಯುತವಾಗಿ ಇರಲು ಕೃತಿಗಳು ಅನುವಾದಗೊಂಡಿವೆ. -ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಸಿದ್ಧಸಂಸ್ಥಾನಮಠ, ಚಿಂಚಣಿ
-ಮಹಾದೇವ ಪೂಜೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.