ಜೆಜೆಎಂಗೆ 8.17 ಕೋಟಿ ಅನುದಾನ ಬಿಡುಗಡೆ
Team Udayavani, Feb 16, 2021, 3:51 PM IST
ಘಟಪ್ರಭಾ: ಜಲಜೀವನ ಮಿಷನ್ ಕಾಮಗಾರಿಗಾಗಿ ರಾಜಾಪುರ, ತುಕ್ಕಾನಟ್ಟಿ, ದಂಡಾಪುರ, ದುರದುಂಡಿ ಹಾಗೂ ಬಡಿಗವಾಡ ಗ್ರಾಪಂಗಳಿಗೆ 8.17 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಿಂದ ಸಾರ್ವಜನಿಕರಿಗೆ ಕುಡಿವ ನೀರಿನ ಸೌಲಭ್ಯಕ್ಕೆ ಮತ್ತಷ್ಟುಅನುಕೂಲವಾಗಲಿದೆ ಎಂದು ಅರಭಾವಿ ಶಾಸಕಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ರಾಜಾಪುರ ಗ್ರಾಮದಲ್ಲಿ 8.17 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆನೆರವೇರಿಸಿ ಅವರು ಮಾತನಾಡಿದರು. ರಾಜಾಪುರದಲ್ಲಿ 1.42 ಕೋಟಿ, ತುಕ್ಕಾನಟ್ಟಿ-1.46ಕೋಟಿ, ದಂಡಾಪುರ ಗ್ರಾಪಂ ವ್ಯಾಪ್ತಿಯಲ್ಲಿ 1.31 ಕೋಟಿ,ದುರದುಂಡಿ ಗ್ರಾಪಂ ವ್ಯಾಪ್ತಿಯಲ್ಲಿ 2.49 ಕೋಟಿ ಹಾಗೂಬಡಿಗವಾಡ ಗ್ರಾಮದಲ್ಲಿ 1.49 ಕೋಟಿ ರೂ. ವೆಚ್ಚದಜೆಜೆಎಂ ಕಾಮಗಾರಿಗೆ ಅನುದಾನ ಬಂದಿದೆ ಎಂದರು.ರಾಜಾಪುರದಲ್ಲಿ 891 ನಲ್ಲಿಗಳಿಗೆ 2.50 ಲಕ್ಷ ಲೀಟರ್‌ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಲಯ, ತುಕ್ಕಾನಟ್ಟಿಯಲ್ಲಿ 1478 ನಲ್ಲಿಗಳಿಗೆ 1 ಲಕ್ಷ ಲೀ.ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಲಯ,ದಂಡಾಪುರ ಗ್ರಾಪಂ ವ್ಯಾಪ್ತಿಯ 888 ನಲ್ಲಿಗಳಿಗೆ 1 ಲಕ್ಷ ಲೀ, ದುರದುಂಡಿ-ಮಹಾಂತೇಶ ನಗರ, ಸತ್ತಿಗೇರಿತೋಟದ 2021 ನಲ್ಲಿಗಳಿಗೆ 3 ಲಕ್ಷ ಲೀ, ಬಡಿಗವಾಡಗ್ರಾಮದಲ್ಲಿ 911 ನಲ್ಲಿಗಳಿಗೆ 2 ಲಕ್ಷ ಲೀ., ಸಾಮರ್ಥ್ಯಮೇಲ್ಮಟ್ಟದ ಜಲಸಂಗ್ರಹಾಲಯ ನಿರ್ಮಿಸಲಾಗುವುದು ಎಂದರು.
ರೈತರ ಜಮೀನುಗಳಿಗೆ ನೀರು ಹಾಯಿಸಲು ಈಗಾಗಲೇ ಘಟಪ್ರಭಾ ಕಾಲುವೆಗಳಿಂದ ನೀರು ಹರಿಯುತ್ತಿದೆ. ಏಪ್ರಿಲ್-ಮೇ ತಿಂಗಳಲ್ಲಿ ಬೇಸಿಗೆ ಬರುವುದರಿಂದರೈತರಿಗೆ ಮತ್ತೂಮ್ಮೆ ಹಿಡಕಲ್ ಜಲಾಶಯದಿಂದ ನೀರುಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು.ನಂತರ ರಾಜಾಪುರ ಹಾಗೂ ಸುತ್ತಲಿನ ಗ್ರಾಮಗಳ ವಿವಿಧ ಸಂಘ ಸಂಸ್ಥೆಗಳ ಪದಾಧಿ ಕಾರಿಗಳು ಶಾಸಕರನ್ನು ಸತ್ಕರಿಸಿದರು.
ತುಕ್ಕಾನಟ್ಟಿ ಜಿಪಂ ಸದಸ್ಯೆ ಕಸ್ತೂರಿ ಕಮತಿ, ತಾಪಂ ಸದಸ್ಯೆ ಸಂಗೀತಾ ಯಕ್ಕುಂಡಿ, ರಾಜ್ಯ ಕೃಷಿ ಮತ್ತುಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಾಜುಬೈರುಗೋಳ, ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಎಪಿಎಂಸಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಘಯೋನೀಬ ಮಹಾ ಮಂಡಳ ಅಧ್ಯಕ್ಷ ಅಶೋಕಖಂಡ್ರಟ್ಟಿ, ಪ್ರಭಾ ಶುಗರ್ ಮಾಜಿ ನಿರ್ದೇಶಕ ಬಸವಂತ ಕಮತಿ, ಗ್ರಾಪಂ ಅಧ್ಯಕ್ಷ ಸಿದ್ರಾಯಿ ಮರಿಸಿದ್ದಪ್ಪಗೋಳ, ಪ್ರಭಾ ಶುಗರ್ ನಿರ್ದೇಶಕರಾದ ಲಕ್ಷ್ಮಣ ಗಣಪ್ಪಗೋಳ,ಶಿವಲಿಂಗ ಪೂಜೇರಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷಶಿವಮೂರ್ತಿ ಹುಕ್ಕೇರಿ, ಬಸು ಸನದಿ, ತುಕ್ಕಾನಟ್ಟಿ ಗ್ರಾಪಂ ಅಧ್ಯಕ್ಷ ಕುಮಾರ ಮರ್ದಿ, ಬಸವರಾಜ ಪಂಡ್ರೋಳ್ಳಿ,ಮಹಾದೇವ ತುಕ್ಕಾನಟ್ಟಿ, ಭೈರು ಯಕ್ಕುಂಡಿ, ರಾಮಚಂದ್ರ ಪಾಟೀಲ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.