ಸಂತೋಷ ಕುಟುಂಬಕ್ಕೆ ನ್ಯಾಯ ಸಿಗೋದು ಅನುಮಾನ
ಗಂಭೀರವಾಗಿ ತನಿಖೆ ನಡೆಸುವುದಾಗಿ ಯಾರೂ ಹೇಳುತ್ತಿಲ್ಲ
Team Udayavani, Apr 17, 2022, 12:57 PM IST
ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಸಾವಿನ ಪ್ರಕರಣದಲ್ಲಿ ಅವರ ಕುಟುಂಬಸ್ಥರಿಗೆ ನ್ಯಾಯ ಸಿಗುವುದು ಅನುಮಾನ ಎಂದು ಮಾಜಿ ಪೊಲೀಸ್ ಅಧಿಕಾರಿ, ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರರಾವ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರು ಮಾಡಿರುವ ಖರ್ಚು, ಸಾಲದ ಬಗ್ಗೆ ಗಂಭೀರವಾಗಿ ತನಿಖೆ ನಡೆಸುವುದಾಗಿ ಯಾರೊಬ್ಬರೂ ಹೇಳಿಲ್ಲ. ಸಿಐಡಿ ತನಿಖೆಗೆ ಒಪ್ಪಿಸಿದರೆ ಏನಾಗುತ್ತದೆ ಎಂಬುದು ನಿಮಗೆ ಗೊತ್ತಲ್ಲವೇ ಎಂದರು.
ಸಂತೋಷ ವಿಶ್ವಾಸದ ಮೇಲೆ ಕೆಲಸ ಮಾಡಿದ್ದರು. ಅವರನ್ನು ಅವಮಾನ ಮಾಡಿ, ಕಾಯಿಸಿರುವುದು ಆತ್ಮಹತ್ಯೆಗೆ ಕಾರಣವಾಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಮಗಾರಿ ಆರಂಭವಾದ ಬಳಿಕವಾದರೂ ಹಣ ಬಿಡುಗಡೆ ಮಾಡಿಸಬೇಕಿತ್ತು. ಎರಡೂ ಪಕ್ಷಗಳು ಮೊಸಳೆ ಕಣ್ಣೀರು ಹಾಕುವುದನ್ನು ಬಿಡಬೇಕು ಎಂದು ಕಿಡಿಕಾರಿದರು.
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆ.ಎಸ್. ಈಶ್ವರಪ್ಪ ಮೇಲೆ ಪ್ರಕರಣ ದಾಖಲಾಗಿದೆ. ಅವರನ್ನು ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಇಂತಹ ಪ್ರಕರಣದಲ್ಲಿ ಸರ್ಕಾರವೇ ತನಿಖಾ ಅಧಿಕಾರಿ ಆಗುತ್ತದೆ. ಪೊಲೀಸರು ತನಿಖಾಧಿಕಾರಿ ಆಗಲ್ಲ. ಕೋರ್ಟ್ ಮಧ್ಯಸ್ಥಿಕೆಯಲ್ಲಿ ಇದರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಎರಡೂ ಪಕ್ಷಗಳ ದುರಾಡಳಿತ, ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದೇನೆ. ಭ್ರಷ್ಟಾಚಾರ ನೇರವಾಗಿ ಜನರ ಮೇಲೆ ಪರಿಣಾಮ ಬೀರಲಿದೆ. ಸಂತೋಷ ಪಾಟೀಲ್ ಮನವಿ ಕೊಟ್ಟಿದ್ದ ವೇಳೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಸಂತೋಷ ಪಾಟೀಲ್ ಕೊಟ್ಟಿದ್ದ ಮನವಿ ಇನ್ನೂ ವಿಚಾರಣೆ ಆಗಿಲ್ಲ. ನಾವು ನೀವು ಯಾರಾದರೂ ಅಪರಾಧ ಮಾಡಿದ್ದರೆ ಇಷ್ಟೊತ್ತಿಗೆ ಹಿಂಡಲಗಾ ಜೈಲಿಗೋ, ಪರಪ್ಪನ ಅಗ್ರಹಾರದಲ್ಲಿ ಇರುತ್ತಿದ್ದೇವು ಎಂದರು.
ಜನರು ಬದಲಾವಣೆಗೆ ಸಿದ್ಧರಾಗಿದ್ದಾರೆ. ಪಂಜಾಬ್ ನಲ್ಲಿ ನಮ್ಮ ಸಂಘಟನೆ, ನೈತಿಕ ಶಕ್ತಿಯಿಂದ ಗೆಲುವು ಸಾಧಿಸಿದ್ದು, ಇದು ಜನರ ಶಕ್ತಿಯಿಂದ ಸಾಧ್ಯವಾಗಿದೆ. ತ್ಯಾಗದ ಮನೋಭಾವದಿಂದ ದೇಶದ ಪ್ರಗತಿಗಾಗಿ ಆಪ್ ಪಕ್ಷ ಸ್ಥಾಪನೆ ಆಗಿದೆ. ರಾಜಕಾರಣಿಗಳು ಎಂದರೆ ಜನರು ಅಸಹ್ಯವಾಗಿ ನೋಡುವಂತಾಗಿದೆ. ಇದನ್ನು ಹೋಗಲಾಡಿಸಲು ಉತ್ತಮ ಆಡಳಿತ ನೀಡುವುದೇ ನಮ್ಮ ಉದ್ದೇಶ. ಕಾಂಗ್ರೆಸ್ ಇದ್ದಾಗ 10 ಪರ್ಸೆಂಟ್ ಇದ್ದ ಕಮೀಷನ್ ಈಗ 40 ಪರ್ಸೆಂಟ್ ಆಗಿದೆ ಎಂದು ಆರೋಪಿಸಿದರು.
ಮರಾಠಿ-ತೆಲುಗು ಭಾಷಿಕರೂ ನಮ್ಮ ದೇಶದವರೇ: ಬೆಳಗಾವಿಯಿಂದ ವಿಧಾನಸಭೆಗೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ನಾನು ಪಕ್ಷ ಕಟ್ಟಲು ಬಂದಿದ್ದೇನೆ. ಬೆಳಗಾವಿ ಜನರು ನಮ್ಮ ಮೇಲೆ ಪ್ರೀತಿ ಜಾಸ್ತಿ ಇಟ್ಟಿದ್ದಾರೆ. ಇನ್ನೂ ಸಮಯಾವಕಾಶ ಇದೆ. ಬೆಳಗಾವಿಯ ಎಂಇಎಸ್ ನಾಯಕ ದೀಪಕ ದಳವಿ ಸೇರಿದಂತೆ ಮರಾಠಿ ಭಾಷಿಕ ಜನರ ಸಂಪರ್ಕದಲ್ಲಿ ಇದ್ದೇನೆ. ವೈಯಕ್ತಿಕವಾಗಿ ಅವರೊಂದಿಗೆ ನನ್ನ ಸಂಬಂಧ ಇದೆ. ಮರಾಠಿ-ತೆಲುಗು ಮಾತನಾಡುವವರು ನಮ್ಮ ದೇಶದವರೇ ಅಲ್ವಾ ಎಂದು ಭಾಸ್ಕರರಾವ್ ಹೇಳಿದರು.
ಎರಡೂ ಪಕ್ಷಗಳಿಗಿಲ್ಲ ನೈತಿಕತೆ: ಆಶ್ವಾಸನೆ ಮೇರೆಗೆ 108 ಕಾಮಗಾರಿಗಳನ್ನು ಗುತ್ತಿಗೆದಾರ ಸಂತೋಷ ಪಾಟೀಲ ಮಾಡಿದ್ದಾರೆ. ಅವರ ಕೆಲಸಕ್ಕೆ ಅನುಮೋದನೆ ನೀಡದೆ ಸತಾಯಿಸಿದಾಗ ತನ್ನ ಜೀವ ನೀಡಿದ್ದಾರೆ. ಕಾಮಗಾರಿ ಆರಂಭ ಬಳಿಕ ಆ ಕ್ಷೇತ್ರದ ಪ್ರತಿಯೊಬ್ಬರಿಗೂ ಇದು ಗೊತ್ತಿರುತ್ತದೆ. ಎರಡೂ ಪಕ್ಷದವರಿಗೂ ಈ ವಿಷಯ ಗೊತ್ತಿರುತ್ತದೆ. ಆಮ್ ಆದ್ಮಿ ಪಕ್ಷಕ್ಕೆ ಮಾತ್ರ ಇದರ ಬಗ್ಗೆ ಮಾತ ನಾಡಲು ನೈತಿಕ ಹಕ್ಕಿದೆ. ಎರಡೂ ಪಕ್ಷಗಳಿಗೂ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ಹುಟ್ಟಿಸಿದೆ. ಅದರ ಫಲಾನುಭವಿ ಬಿಜೆಪಿ ಆಗಿದೆ ಎಂದರು ಭಾಸ್ಕರರಾವ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.