ರಸಗೊಬ್ಬರ ಕೊರತೆ ನೀಗಿಸಲು ಕ್ರಮ: ಮೊಕಾಶಿ
Team Udayavani, Jul 22, 2020, 8:49 AM IST
ಮೂಡಲಗಿ: ರೈತರು ರಾಸಾಯನಿಕ ಗೊಬ್ಬರ ಬಳಸದೆ ಯೂರಿಯಾ ರಸಗೊಬ್ಬರ ಬಳಸುತ್ತಿದ್ದು, ಇದರಿಂದ ತಾತ್ಕಾಲಿಕವಾಗಿ ರಸಗೊಬ್ಬರ ಕೊರತೆಯಾಗಿದೆ. ಅವಶ್ಯ ಕ್ರಮ ತೆಗೆದುಕೊಂಡು ಕೊರತೆ ನಿವಾರಿಸಲಾಗುವುದು ಎಂದು ಕೃಷಿ ಇಲಾಖೆ ನಿರ್ದೇಶಕ ಜಿಲಾನಿ ಮೊಕಾಶಿ ಹೇಳಿದರು.
ಬುಧವಾರ ಸ್ಥಳೀಯ ರಾಸಾಯನಿಕ ಗೊಬ್ಬರ ವ್ಯವಸ್ಥಾಪಕ ಎಸ್.ಆರ್. ಹೆಗಡೆ ಅವರ ಅಂಗಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಈಗಾಗಲೇ ಗೋಕಾಕ ಮತ್ತು ಮೂಡಲಗಿ ತಾಲೂಕಿಗೆ ಬೇಕಾದ 9 ಸಾವಿರ ಟನ್ ಯೂರಿಯಾ ಬಂದಿದ್ದು, ರೈತರು ಬೇರೆ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಬರಿ ಯೂರಿಯಾ ಬಳಸುವುದರಿಂದ ತಾತ್ಕಾಲಿಕ ಅಭಾವ ನಿರ್ಮಾಣವಾಗಿದೆ. ಇನ್ನು 2-3 ದಿನಗಳಲ್ಲಿ ಮತ್ತೆ ಮೂಡಲಗಿ ತಾಲೂಕಿಗೆ 2 ಸಾವಿರ ಟನ್ ಯೂರಿಯಾ ತರಿಸಲು ಅವಶ್ಯಕ ಕ್ರಮ ತಗೆದುಕೊಳ್ಳಲಾಗಿದೆ. ಇನ್ನೂ ಅಭಾವವಾದರೆ ಆಗಸ್ಟ್ ತಿಂಗಳಲ್ಲಿ ಮತ್ತೆ 2ಸಾವಿರ ಟನ್ ತರಿಸಲಾಗುವುದು. ಯೂರಿಯಾ ಮಾತ್ರ ಬಳಸುವುದರಿಂದ ಜಮೀನು ಸವಳು-ಜವಳು ಆಗುತ್ತದೆ. ವ್ಯಾಪಾರಸ್ಥರು ಸ್ಟಾಕ್ ಇಟ್ಟುಕೊಂಡು ಇಲ್ಲ ಎಂದರೆ ಮತ್ತು ಇಂತಹದೇ ಗೊಬ್ಬರ ಖರೀದಿ ಮಾಡಬೇಕು ಎಂದು ರೈತರನ್ನು ಒತ್ತಾಯಿಸಿದರೆ ಅಂತಹವರ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಆರ್.ಐ. ರೂಡಗಿ, ಮೂಡಲಗಿ-ಗೋಕಾಕ ತಾಲೂಕ ಸಹಾಯಕ ಕೃಷಿ ನಿರ್ದೇಶಕ ಎಮ್. ಎಮ್ . ನದಾಫ, ಮೂಡಲಗಿ ತಾಲೂಕು ಕೃಷಿಅಧಿಕಾರಿ ಬಿ.ಎಚ್. ಹುಲಗಬಾಳಿ, ಯುವ ಜೀವನ ಸಂಸ್ಥೆ ಅಧ್ಯಕ್ಷ ಈರಪ್ಪ ಢವಳೇಶ್ವರ, ಪ್ರಗತಿಪರ ರೈತರು, ಗೊಬ್ಬರ ವ್ಯಾಪಾರಸ್ಥರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.