ಅಲೆಮಾರಿಗಳಿಗೆ ಅಡವಿಸಿದ್ದೇಶ್ವರಮಠ “ಆಸರೆ’’
ಕೋವಿಡ್ ಸಂಕಷ್ಟಕ್ಕೆ ತುತ್ತಾಗಿರುವ ಅಲೆಮಾರಿಗಳಿಗೆ ಊಟ-ವಸತಿ ಕಲ್ಪಿಸಿದ ಮಠ
Team Udayavani, May 12, 2021, 11:54 AM IST
ಬೆಳಗಾವಿ: ಕೊರೊನಾದ ಈ ಗಂಭೀರ ಸ್ಥಿತಿಯಲ್ಲಿ ಸಮಾಜ ಸೇವೆಗೆ ಮುಂದಾಗಿರುವ ಗೋಕಾಕ ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠವು ಕೊರೊನಾದಿಂದ ಸಂಕಷ್ಟಕ್ಕೆ ತುತ್ತಾಗಿರುವ ಅಲೆಮಾರಿ ಕುಟುಂಬಗಳ ಊಟ-ವಸತಿಯ ಜವಾಬ್ದಾರಿ ಹೊತ್ತುಕೊಂಡಿದೆ.
ಕೊರೊನಾದ ಎರಡನೇ ಅಲೆ ನಗರ ಪ್ರದೇಶಗಳಿಗಿಂತ ಈಗ ಹೆಚ್ಚು ಆತಂಕ ಉಂಟು ಮಾಡಿದ್ದು ಗ್ರಾಮೀಣ ಪ್ರದೇಶದಲ್ಲಿ. ಇಲ್ಲಿ ಕೊರೊನಾ ಬಗ್ಗೆ ಸ್ವಲ್ಪ ಜಾಗೃತಿ ಕಡಿಮೆ. ಉದಾಸೀನ ಮನೋಭಾವ ಹೆಚ್ಚು. ಇದು ಸೋಂಕಿನ ಪ್ರಮಾಣ ಇನ್ನೂ ಹೆಚ್ಚಾಗುವಂತೆ ಮಾಡಿದೆ. ಇಂತಹ ಸ್ಥಿತಿಯಲ್ಲಿ ಈ ಹಳ್ಳಿಯ ಜನರಿಗೆ ಮಠಾಧೀಶರ ಸಂದೇಶ ಬಹಳ ಅತ್ಯಗತ್ಯ. ಈ ಮಹತ್ಕಾರ್ಯವನ್ನು ನಾಲ್ಕು ವರ್ಷಗಳ ಹಿಂದೆ ಸ್ಥಾಪಿಸಿದ “ಧರ್ಮವಾಹಿನಿ’ ಮುಖಾಂತರ ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿ ಮಾಡುತ್ತಿದ್ದಾರೆ.
ಸೋಂಕಿಗೆ ತುತ್ತಾಗಿರುವ ಸಮಾಜಕ್ಕೆ ಆತ್ಮವಿಶ್ವಾಸ-ಧೈರ್ಯ ತುಂಬುವ ಕೆಲಸ ಬಹಳ ಪರಿಣಾಮಕಾರಿ ಆಗಬೇಕಿದೆ. ಎಚ್ಚರಿಕೆ ಜತೆ ಸಮಾಜದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಬೇಕಿದೆ. ಅಮರಸಿದ್ದೇಶ್ವರ ಸ್ವಾಮೀಜಿ ತಮ್ಮ ಮಠದ ವ್ಯಾಪ್ತಿಯಲ್ಲಿ ಬರುವ ಗೋಕಾಕ-ಹುಕ್ಕೇರಿ ತಾಲೂಕಿನ 42 ಹಳ್ಳಿಗಳಲ್ಲಿ ಸಂಚರಿಸಿ ಈ ಕಾರ್ಯವನ್ನು ಸಮರ್ಥವಾಗಿ ಮಾಡುತ್ತಿದ್ದಾರೆ. ಸಮಾಜದ ನೆರವಿಗೆ ಬರಲೆಂಬ ಉದ್ದೇಶದಿಂದ ನಿರ್ಮಿಸಿದ ಈ ಮಠದ ಕೊಠಡಿಗಳನ್ನು ಈಗ ಕೊರೊನಾ ಸಂಕಷ್ಟದಲ್ಲಿದ್ದವರಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಯಾರೇ ಅಲೆಮಾರಿಗಳು-ಕಾರ್ಮಿಕರು ಬಂದರೆ ಅವರಿಗೆ ಮಠದಲ್ಲಿ ಊಟ-ವಸತಿ ಸೌಕರ್ಯ ನೀಡಲಾಗುವುದು. ಹಸಿದವರು ಯಾರೇ ಬಂದರೂ ಅವರೇ ನಮಗೆ ದೇವರು. ಅವರನ್ನು ನೋಡಿಕೊಳ್ಳುವುದು ನಮ್ಮ ಧರ್ಮ ಎಂದು ಅಮರಸಿದ್ದೇಶ್ವರ ಸ್ವಾಮೀಜಿ ತಮ್ಮ ಉದ್ದೇಶವನ್ನು “ಉದಯವಾಣಿ’ ಜತೆ ಬಿಚ್ಚಿಟ್ಟರು.
ಕೋವಿಡ್ ಕೇರ್ ಸೆಂಟರ್ ಉದ್ದೇಶ: ಆರೋಗ್ಯ ಇಲಾಖೆ ಸಮ್ಮತಿ ಸಿಕ್ಕರೆ ನಮ್ಮ ಮಠದಲ್ಲಿ 20 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಮಾಡುವ ಉದ್ದೇಶ ಇದೆ. ಸುಮ್ಮನೆ ಮಾಡಿ ಅಸ್ತವ್ಯಸ್ತವಾಗಬಾರದು. ಹೀಗಾಗಿ ಇದರ ಬಗ್ಗೆ ಹೆಚ್ಚು ಆಲೋಚನೆ ಮಾಡಿಲ್ಲ. ಆದರೆ ಅಲೆಮಾರಿಗಳ ಯೋಗಕ್ಷೇಮಕ್ಕೆ ಮಠ ಬದ್ಧವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.