ಭಕ್ತಿ ಭಾವದ ಪ್ರತೀಕ ಬೂದಿಹಾಳ ಅಡಿವೆಪ್ಪ ಮಹಾರಾಜರು
ದ್ದಪುರುಷ ಅಡಿವೆಪ್ಪ ಮಹಾರಾಜ ಪಾದಪೂಜೆ, ತುಲಾಭಾರ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಿತು.
Team Udayavani, Aug 1, 2022, 6:12 PM IST
ಹೂವಿನಹಿಪ್ಪರಗಿ: ಭಕ್ತಿಯಿಂದ ನಡೆದು ಗುರುವಿನ ದಾಸನಾಗಿ ದುಡಿದು ಗುರು ಮಿರಿಸಿ ತನ್ನ ಭಕ್ತ ಬಳಗಕ್ಕೆ ಬೇಡಿದ ವರವನ್ನು ನೀಡಿ ಭಕ್ತಿ ಭಾವದ ಪ್ರತೀಕವಾಗಿ ಇಂದು ಸಾವಿರಾರು ಜನರಿಗೆ ದಾರಿ ದೀಪವಾಗಿರುವ ಬೂದಿಹಾಳ ಕರಿಸಿದ್ದೇಶ್ವರ ಮಠದ ಸಿದ್ದಪುರುಷ ಅಡಿವೆಪ್ಪ ಮಹಾರಾಜರು ಎಂದು ಸರೂರ ರೇವಣಸಿದ್ದೇಶ್ವರ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಬೂದಿಹಾಳ ಕರಿಸಿದ್ದೇಶ್ವರ ಮಠದ ಸಿದ್ದಪುರುಷ ಅಡಿವೆಪ್ಪ ಮಹಾರಾಜರ ಶ್ರಾವಣ ಮಾಸದ ಜಾತ್ರೆಯಲ್ಲಿ ಮಾತನಾಡಿದ ಅವರು, ಭಕ್ತರನ್ನು ಸಮನಾದ ದೃಷ್ಟಿಯಿಂದ ಕಂಡು ನಂಬಿ ಬಂದವರಿಗೆ ಬಾ ಎಂದು ಕರೆದು ಕೃಪೆ ತೋರುವ ಗುರುವಿನ ನಂಬಿ ನಡೆಯಿರಿ ಎಂದರು.
15ಕ್ಕೂ ಹೆಚ್ಚು ಗ್ರಾಮಗಳ ವಿವಿಧ ದೇವಾನು ದೇವತೆಗಳ ಪಲ್ಲಕ್ಕಿಗಳ ಸಂಗಮವಾಗಿ ಬೆಳಗ್ಗೆ 5ಕ್ಕೆ ಕರಿಸಿದ್ದೇಶ್ವರ ಕತೃì ಗದ್ದುಗೆಗೆ ರುದ್ರಾಭಿಷೇಕ ಮಾಡಲಾಯಿತು. 9ಕ್ಕೆ ಸಕಲ ಪಲ್ಲಕ್ಕಿಗಳ ಸಂಗಮವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸ, ವಾದ್ಯ ವೈಭಗಳೊಂದಿಗೆ ಮೆರೆವಣಿಗೆ ಮೂಲಕ ಹಾಯ್ದು ಗಂಗಸ್ಥಳಕ್ಕೆ ಹೋಗಿ, ನಂತರ ಮತ್ತೆ ಮಠಕ್ಕೆ ಬಂದವು. ನಂತರ 11ಕ್ಕೆ ಸಮಸ್ತ ಭಕ್ತಾದಿಗಳಿಂದ ಸಿದ್ದಪುರುಷ ಅಡಿವೆಪ್ಪ ಮಹಾರಾಜ ಪಾದಪೂಜೆ, ತುಲಾಭಾರ ಹಾಗೂ
ಗುರುವಂದನಾ ಕಾರ್ಯಕ್ರಮ ನಡೆಯಿತು.
ನಂತರ ಅಡಿವೆಪ್ಪ ಮಹಾರಾಜರು ಸೇರಿ ವಿವಿಧ ಸತು³ರುಷರಿಂದ ನುಡಿ ಮುತ್ತುಗಳು ನಡೆದವು. ಜಾತ್ರೆಯಲ್ಲಿ ಸರೂರು ಗ್ರಾಮದ ಖೆಂಡಯ್ಯ ಸ್ವಾಮೀಜಿ, ಶಿವಣಗಿಯ ಖೆಂಡಯ್ಯ ಸ್ವಾಮೀಜಿ, ಶಿವಾನಂದ ಈರಕಾರ ಮುತ್ಯಾ, ಜಿಪಂ ಮಾಜಿ ಸದಸ್ಯ ಬೀರಪ್ಪ ಸಾಸನೂರ, ಗೌರಮ್ಮ ಮುತ್ತತ್ತಿ, ಸೋಮನಾಥ ಕಳ್ಳಿಮನಿ, ಸಂಗಮೇಶ ಓಲೇಕಾರ, ಜಕ್ಕಣ್ಣ ಮಾಸ್ತಾರ, ವಿಕಾಸ ಜೋಗಿ ಸೇರಿದಂತೆ ಬಾಗಲಕೋಟೆ, ಗದಗ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಜಾತ್ರೆಗೆ ಸಾಕ್ಷಿಯಾದರು.
ಸತ್ಪುರುಷರ ನುಡಿಗಳು: ಜಾತ್ರೆಯಲ್ಲಿ ಹಲವು ಪೂಜಾರಿಗಳು ತಮ್ಮ ನುಡಿನಮನ ಸಲ್ಲಿಸಿದರು. ದೇವರಲ್ಲಿ ಭಕ್ತಿ ಇಟ್ಟಿಕೊಂಡು ನಂಬುಗೆಯಿಂದ ನಡೆದರೆ ಬೇಕಾದ ವರವನ್ನು ಆ ಭಗವಂತ ಕರುಣಿಸುತ್ತಾನೆ. ಮುಂದೆ ಬರುವ ಮಳೆಗಳು ಉತ್ತಮವಾಗಿ ಸುರಿಯಲಿವೆ.
ಮುಂಗಾರಿ ಸಾಧಾರಣ ಬೆಳೆದರೆ ಹಿಂಗಾರಿ ಉತ್ತಮ ರೀತಿಯಲ್ಲಿ ಬೆಳಯಲಿವೆ ಹಾಗೂ ಹತ್ತಿ ಸಾಲಾಗ ಬಂಗಾರ ಕಡೆ ಇದೆ, ಯಾವ ಭಕ್ತರು ಧೈರ್ಯ ಬೀಡಬೇಡಿ, ನಿಮ್ಮ ಹಿಂದೆ ನಾ ಅದೀನಿ ಅಂತ ಮುತ್ಯಾ ಹೇಳುತ್ತಾನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.