Konkan Railway ವಿಲೀನಕ್ಕೆ ಸಹಮತ: ಸಚಿವ ಕೆ.ಜೆ. ಜಾರ್ಜ್‌


Team Udayavani, Dec 13, 2024, 10:50 PM IST

Konkan Railway ವಿಲೀನಕ್ಕೆ ಸಹಮತ: ಸಚಿವ ಕೆ.ಜೆ. ಜಾರ್ಜ್‌

ಬೆಳಗಾವಿ: ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೆಧೀಯೊಂದಿಗೆ ವಿಲೀನಗೊಳಿಸಲು ನಮ್ಮ ಸಹಮತವಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರಕ್ಕೆ ನಮ್ಮ ನಿಲುವು ತಿಳಿಸಿದ್ದೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಗಮನಸೆಳೆಯುವ ಸೂಚನೆಗಳಡಿ ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ ಮತ್ತು ವಿ. ಸುನಿಲ್‌ ಕುಮಾರ್‌ ಅವರ ಗಮನಸೆಳೆಯುವ ಸೂಚನೆಗೆ ಸಚಿವ‌ ಕೆ.ಜೆ. ಜಾರ್ಜ್‌ ಉತ್ತರಿಸಿದರು.

ಸುನಿಲ್‌ ಕುಮಾರ್‌ ವಿಷಯ ಪ್ರಸ್ತಾವಿಸಿ, ಕೊಂಕಣ ರೈಲ್ವೇ ಈ ಹಿಂದೆಯೇ ಭಾರತೀಯ ರೈಲ್ವೇಯೊಂದಿಗೆ ವಿಲೀನವಾಗಬೇಕಿತ್ತು. ಆದರೆ ನಷ್ಟದಲ್ಲಿ ನಡೆಯುತ್ತಿರುವ ಕಾರಣ ಈ ಭಾಗದ ಯಾವುದೇ ರೈಲು ನಿಲ್ದಾಣಗಳು ಕೂಡ ಅಭಿವೃದ್ಧಿಯಾಗಲಿಲ್ಲ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಈಗಾಗಲೇ ತಮ್ಮ ಪಾಲನ್ನು ಬಿಟ್ಟು ಕೊಟ್ಟಿವೆ. ಹಾಗೆಯೇ ಕರ್ನಾಟಕ ತನ್ನ ಪಾಲಿನ 270 ಕೋಟಿ ರೂ.ಗಳ ಷೇರು ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಷೇರು ಮೊತ್ತ ಹೊಂದಾಣಿಕೆಯ ಬಗ್ಗೆ ಈಗಾಗಲೇ ನಾವು ರೈಲ್ವೇ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದೇವೆ. ಭಾರತೀಯ ರೈಲ್ವೇಯೊಂದಿಗೆ ವಿಲೀನವಾದಲ್ಲಿ ಹೊಸ ರೈಲುಗಳು ಕೂಡ ಬರಲಿದ್ದು, ರೈಲು ನಿಲ್ದಾಣಗಳು ಕೂಡ ಸುಧಾರಣೆ ಕಾಣಲಿವೆ ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ವಿಲೀನ ಪ್ರಕ್ರಿಯೆ ಬಗ್ಗೆ ರಾಜ್ಯ ಸರಕಾರ ಕೊಂಕಣ ರೈಲ್ವೇಗೆ ಪತ್ರ ವ್ಯವಹಾರ ಮಾಡಿದ್ದು, ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದರು.

ಈ ಬಗ್ಗೆ ಸ್ಪೀಕರ್‌ ಖಾದರ್‌ ನೇತೃತ್ವದಲ್ಲಿ ನಿಯೋಗ ರಚಿಸಿ ನಾವು ಕೇಂದ್ರ ಸರಕಾರದ ಅಧಿಕಾರಿಗಳನ್ನು ಭೇಟಿಯಾಗೋಣ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಜನಪ್ರತಿನಿಧಿಗಳೆಲ್ಲ ಸಭೆಗೆ ಬರಲು ಸಿದ್ಧರಿದ್ದೇವೆ ಎಂದು ಹೇಳಿದರು. ಈ ಸಲಹೆಗೆ ಸ್ಪೀಕರ್‌ ಮತ್ತು ಸರಕಾರದಿಂದ ಸಹಮತ ವ್ಯಕ್ತವಾಯಿತು.

ಟಾಪ್ ನ್ಯೂಸ್

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

1-kho-kho

Kho kho World Cup: ಭಾರತಕ್ಕೆ 71-34 ಅಂತರದ ಗೆಲುವು

Vinesh 2

ಶಾಸಕಿಯಾದ ಬಳಿಕ ವಿನೇಶ್‌ ಪೋಗಟ್‌ ಮತ್ತೆ ಕುಸ್ತಿ ಅಭ್ಯಾಸ?

PM ವಿಶ್ವಕರ್ಮ ಯೋಜನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ

PM ವಿಶ್ವಕರ್ಮ ಯೋಜನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ

Mangaluru ಸಹಿತ 5 ಕಡೆ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ

Mangaluru ಸಹಿತ 5 ಕಡೆ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramesh-BYV

BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್‌ ಜಾರಕಿಹೊಳಿ; ಬಿವೈವಿ ಆಕ್ರೋಶ

ಐನಾಪೂರ: ಶ್ರೀ ಕೆರಿಸಿದ್ದೇಶ್ವರ ದೇವರ ಭೇಟಿ -ಭಂಡಾರಮಯ

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

rasaleele

Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ

Ram Jarakiholi

Belagavi ಕಾಂಗ್ರೆಸ್ ಒಳಜಗಳ: ಸತೀಶ್ ಬೆಂಬಲಕ್ಕೆ ನಿಂತ ಅಣ್ಣ ರಮೇಶ್ ಜಾರಕಿಹೊಳಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

India US

US ;ಬಾರ್ಕ್‌ ಸೇರಿ 3 ಸಂಸ್ಥೆಗಳ ಮೇಲಿನ ನಿಷೇಧ ತೆರವು

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

1-PVS

India Open Super 750 Badminton: ಸಿಂಧು, ಕಿರಣ್‌ ಜಾರ್ಜ್‌ ಕ್ವಾರ್ಟರ್‌ಫೈನಲಿಗೆ

1-vh

Vijay Hazare Trophy: ವಿದರ್ಭಕ್ಕೆ 69 ರನ್‌ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.