ಮುಂದಿನ ತಿಂಗಳು ಕೃಷಿ ಕಾಲೇಜು ಅಡಿಗಲ್ಲಿಗೆ ಸಿಎಂ
Team Udayavani, Apr 25, 2022, 1:56 PM IST
ಅಡಹಳ್ಳಿ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಬಸ್ ನಿಲ್ದಾಣ ಉದ್ಘಾಟನೆ ಹಾಗೂ 27 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದ 3ನೇ ಹಂತದ ವಿವಿಧ ಕಟ್ಟಡ ಕಾಮಗಾರಿಗೆ ಇದೇ 26ರಂದು ಚಾಲನೆ ನೀಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಕೊಕಟನೂರ ಗ್ರಾಮದ ರಬಕವಿ ತೋಟದ ಅಪ್ಪಯ್ಯಸ್ವಾಮೀಜಿ ಜಾತ್ರಾ ಮಹೋತ್ಸವದಲ್ಲಿ ರವಿವಾರ ಮಾತನಾಡಿ, ಗ್ರಾಮದಲ್ಲಿ ಮಂಜೂರಾದ ಕೃಷಿ ಮಹಾವಿದ್ಯಾಲಯದ ಅಡಿಗಲ್ಲು ಹಾಗೂ 7 ಗ್ರಾಮಗಳ ಕೆರೆ ತುಂಬುವ ಯೋಜನೆಗೆ ಬರುವ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಗಮಿಸಿ ಚಾಲನೆ ನೀಡಲಿದ್ದು, ಕೆರೆ ತುಂಬುವ ಯೋಜನೆಯಡಿ ಯಲ್ಲಮ್ಮವಾಡಿ ಕೆರೆಯಲ್ಲಿ ನೀರು ಸಂಗ್ರಹ ಮಾಡಿ ನಂತರ ಉಳಿದ ಗ್ರಾಮಗಳಿಗೆ ಪೈಪಲೈನ್ ಮೂಲಕ ನೀರು ಒದಗಿಸಲಾಗುವುದು ಎಂದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಕೇಂದ್ರೀಯ ಮಹಾವಿದ್ಯಾಲಯ ಕಟ್ಟಡಕ್ಕೆ ಗ್ರಾಮದಲ್ಲಿ 10 ಎಕರೆ ಜಾಗ ಮೀಸಲಿಟ್ಟಿದ್ದಾರೆ. ಆದರೆ ಯೋಜನೆಗೆ ಚಾಲನೆ ನೀಡದ್ದರಿಂದ ಕೆಲವು ಜನರು ಜಾಗ ಅತಿಕ್ರಮಣ ಮಾಡುತ್ತಿದ್ದಾರೆ ಎಂದು ದೂರಿದಾಗ, ಅತಿಕ್ರಮಣ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಆದಷ್ಟು ಬೇಗ ಅನುಮತಿ ಪಡೆದು ಮುಂದಿನ ವರ್ಷ ವಿದ್ಯಾಲಯ ಲೋಕಾರ್ಪಣೆ ಮಾಡಲಾಗುವುದು ಎಂದರು.
ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಕೆಎಂಎಫ್ ನಿರ್ದೇಶಕ ಅಪ್ಪಾಸಾಬ ಅವತಾಡೆ ಮಾತನಾಡಿದರು. ಸುಭಾಷ ಸೋನಕರ, ಸದಾಶಿವ ರಬಕವಿ, ಹಣಮಂತ ಬಡಿಗೇರ, ಕಾಡಪ್ಪ ಬಿಳ್ಳೂರ, ಮುತ್ತಪ್ಪ ರಬಕವಿ, ಕಾಂತು ಮಾದರ, ರಂಗಣ್ಣ ಪೂಜಾರಿ, ಬಾಳು ಧಡಕೆ, ಸುರೇಶ ಪೂಜಾರಿ, ಮಾನಸಿಂಗ ಮಗರ ಇತರರಿದ್ದರು. ಆನಂದ ಕುಲಕರ್ಣಿ ಸ್ವಾಗತಿಸಿದರು. ಕುಮಾರ ನಾವಿ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.