ಹಸಿದವರ ಹೊಟ್ಟೆ ತುಂಬಿಸುತ್ತಿರುವ ಚಿತ್ರ ಕಲಾವಿದ
ಪ್ರಶಸ್ತಿ ಮೊತ್ತದಿಂದಲೇ ಜನರ ನೆರವಿಗೆ ನಿಂತ ಆಕಾಶ! ತಾನು ಬಡವನಾದರೂ ಕಣ್ಣೀರೊರೆಸುವ ಯುವ ಕಲಾವಿದ
Team Udayavani, Jun 22, 2021, 8:13 PM IST
ವರದಿ: ಭೈರೋಬಾ ಕಾಂಬಳೆ
ಬೆಳಗಾವಿ: ಸುಮಾರು 20 ದಿನಗಳಿಂದ ಇಲ್ಲಿಯ ಚಿತ್ರಕಲಾವಿದನೋರ್ವ ಲಾಕ್‌ಡೌನ್‌ದಿಂದ ಸಂಕಷ್ಟಕ್ಕೆ ಸಿಲುಕಿ ಹಸಿದವರಿಗೆ ಅನ್ನ, ಉಪಹಾರ ಹಾಗೂ ಜಾನುವಾರುಗಳಿಗೆ ಮೇವು-ನೀರು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ನಗರದ ಕಂಗ್ರಾಳ ಗಲ್ಲಿಯ ಆಕಾಶ ಹಲಗೇಕರ ಎಂಬ ಯುವ ಕಲಾವಿದ ಹಸಿದವರಿಗೆ ಅನ್ನ ನೀಡಿ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಿಂದ ತನಗೆ ಬಂದಿರುವ ಪ್ರಶಸ್ತಿ ಹಣದಿಂದಲೇ ಜನರಿಗೆ ಊಟ, ಉಪಹಾರ, ಚಹಾ, ಕಾಫಿ ನೀಡುತ್ತಿದ್ದಾರೆ.
ಚಿತ್ರ ಕಲೆ ಹಾಗೂ ಸ್ತಬ್ಧಚಿತ್ರಗಳ ಮೂಲಕ ಬೆಳಗಾವಿಯಲ್ಲಿ ಖ್ಯಾತರಾಗಿರುವ ಆಕಾಶ ಹಲಗೇಕರಗೆ ಜ್ಞಾನ ಯೋಗ ಟ್ರಸ್ಟ್ ವತಿಯಿಂದ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಮೊತ್ತ 25 ಸಾವಿರ ರೂ. ಬಂದಿತ್ತು. ಇದೇ ಹಣದಿಂದಲೇ ಆಕಾಶ 20 ದಿನಗಳಿಂದ ಜನರ ನೆರವಿಗೆ ನಿಂತಿದ್ದಾರೆ. ಗಾಂಧಿ ನಗರ ಜೋಪಡಪಟ್ಟಿ, ಟೆಂಟ್‌ನಲ್ಲಿ ಇರುವವರು, ರಸ್ತೆ ಬದಿಯ ಭಿಕ್ಷುಕರು, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೋಟೆ ಪ್ರದೇಶಗಳಲ್ಲಿ ಆಕಾಶ ಊಟ ಹಂಚುತ್ತಿದ್ದಾರೆ.
ಕೆಲವರಿಗೆ ಕಾಯಿಪಲ್ಲೆ, ಹಣ್ಣು ಹಂಪಲಗಳನ್ನು ವಿತರಿಸುತ್ತಿದ್ದಾರೆ. ಸ್ಲಂ ಪ್ರದೇಶದಲ್ಲಿ ಇರುವವರಿಗೆ ಅಲ್ಲಿಗೇ ಹೋಗಿ ಊಟದ ಪೊಟ್ಟಣ, ಹಣ್ಣುಗಳನ್ನು ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.
ದಿನಾಲು 50 ಆಹಾರದ ಪೊಟ್ಟಣ: ತನ್ನ ಬಳಿ ಇರುವ ಹಣದಿಂದಲೇ ಸಹಾಯಕ್ಕೆ ನಿಂತಿರುವ ಆಕಾಶ ಹಲಗೇಕರ ಬೆಳಗ್ಗೆ ಉಪಹಾರ, ಟೀ-ಕಾಫಿ, ಮಧ್ಯಾಹ್ನ ಅಥವಾ ರಾತ್ರಿ ಹೊತ್ತಿನಲ್ಲಿ ದಿನಾಲೂ 50 ಉಟದ ಪೊಟ್ಟಣಗಳನ್ನು ಹಂಚುವ ಕಾರ್ಯ ಮಾಡುತ್ತಿದ್ದಾರೆ. ಬೆಳಗಿನ ಹೊತ್ತು ಜಾನುವಾರುಗಳಿಗೆ ಹಸಿರು ಮೇವು, ನೀರು ಕೊಡುತ್ತಾರೆ. ಸಣ್ಣ ನಾಯಿ ಮರಿಗಳಿಗೆ ಹಾಲು, ಬೀದಿ ನಾಯಿಗಳಿಗೆ ಬಿಸ್ಕೀಟ್, ಬ್ರೇಡ್, ಊಟ ನೀಡುತ್ತಿದ್ದಾರೆ. ಕುರಿ-ಮೇಕೆಗಳಿಗೆ ಚುರುಮುರಿ ತಿನ್ನಿಸುತ್ತಿದ್ದಾರೆ.
ಮಳೆಯನ್ನೂ ಲೆಕ್ಕಿಸದೇ ಸೇವೆ: ಆಕಾಶ ಹಲಗೇಕರ ಅವರು ತಮ್ಮ ಮನೆಯಲ್ಲಿಯೇ ಅಡುಗೆ ತಯಾರಿಸಿ ಆಹಾರ ಪೊಟ್ಟಣಗಳನ್ನು ಪ್ಯಾಕ್ ಮಾಡಿಕೊಂಡು ಅಗತ್ಯ ಇರುವವರಿಗೆ ಕೊಡುತ್ತಿದ್ದಾರೆ. ಹಿಂದಿನ ದಿನವೇ ಆ ಪ್ರದೇಶಕ್ಕೆ ಹೋಗಿ ಎಷ್ಟು ಜನರಿಗೆ ಊಟದ ಅಗತ್ಯ ಇದೆ ಎಂಬುದನ್ನು ನೊಡಿಕೊಂಡು ಬರುತ್ತಾರೆ. ಮರುದಿನ ತನ್ನ ಸ್ನೇಹಿತರನ್ನು ಕರೆದುಕೊಂಡು ಮಳೆಯನ್ನೂ ಲೆಕ್ಕಿಸದೇ ದ್ವಿಚಕ್ರ ವಾಹನದ ಮೇಲೆ ಜನರು ಇದ್ದಲ್ಲಿಗೇ ಹೋಗಿ ಊಟ ನೀಡುತ್ತಿದ್ದಾರೆ. ಬಹುತೇಕ ಮಂದಿಗೆ ಊಟದ ವ್ಯವಸ್ಥೆ ಆಗುತ್ತಿದೆ. ಹೀಗಾಗಿ ಕೆಲವರು ಹಾಸಿಗೆ, ಬಟ್ಟೆ ನೀಡುವಂತೆ ಕೇಳುತ್ತಿದ್ದಾರೆ. ಹೀಗಾಗಿ ನಾಳೆಯಿಂದ ಅಗತ್ಯ ಇರುವವರಿಗೆ ಬ್ಲ್ಯಾಂಕೆಟ್, ಬಟ್ಟೆ ನೀಡಲು ತಯಾರಿ ನಡೆಸುತ್ತಿದ್ದೇವೆ.
20 ದಿನಗಳಿಂದ ಸ್ವಂತ ಖರ್ಚಿನಲ್ಲಿಯೇ ಆಹಾರ ತಯಾರಿಸಿದ್ದು, ಇನ್ನು ಕೆಲವು ಸ್ನೇಹಿತರ ಸಹಾಯದಿಂದ ಬಟ್ಟೆ ವಿತರಿಸುವ ಕಾರ್ಯ ಮಾಡಲಾಗುವುದು ಎನ್ನುತ್ತಾರೆ ಆಕಾಶ ಹಲಗೇಕರ. ಆಕಾಶ ಅವರ ಸೇವೆಯನ್ನು ಮೆಚ್ಚಿ ಸ್ನೇಹಿತರಾದ ಶಂಕರ ಪಿರಗಾಣಿ, ಸಂತೋಷ ಹಲಗೇಕರ, ಅಮೂಲ್ ಚೌಗುಲೆ, ವಿನಾಯಕ ಚಂಪಣ್ಣವರ, ಲಕ್ಷ್ಮಣ ಚೌಗುಲೆ, ಅನುರಾಗ ಕರಲಿಂಗ, ಅನುರಾಗ ದೇವರಮಣಿ, ಸುನೀಲ ಕೋಲಕಾರ, ಅಭಿಷೇಕ ದೇವರಮನಿ ಸಹಾಯಕ್ಕೆ ನಿಂತಿದ್ದಾರೆ. ಕಂಗ್ರಾಳ ಗಲ್ಲಿ, ಗವಳಿ ಗಲ್ಲಿ, ಗಣಾಚಾರಿ ಗಲ್ಲಿ , ಗೋಂಧಳ್ಳಿ ಗಲ್ಲಿಯ ಅನೇಕರು ಸಹಾಯ ಮಾಡುತ್ತಿದ್ದಾರೆ. ಇವರ ಸಂಪರ್ಕ ಮೊ: 9739452214.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.