ವೈಚಾರಿಕ ಪ್ರಜ್ಞೆ ಮೂಡಿಸಿದ್ದ ಶರಣರು: ಡಾ| ಗುರುದೇವಿ
ಅಮಾವಾಸ್ಯೆ ಅನುಭಾವ ಗೋಷ್ಠಿ-ಅಂಧಶ್ರದ್ಧೆ-ಅಂಧಾನುಕರಣೆ ಅಲ್ಲಗಳೆದ ವಿಚಾರವಾದಿಗಳು
Team Udayavani, Jun 2, 2022, 5:12 PM IST
ಬೆಳಗಾವಿ: ಹನ್ನೆರಡನೇ ಶತಮಾನದ ಶರಣರು ಸಮಾಜದಲ್ಲಿ ಬೇರು ಬಿಟ್ಟಿದ್ದ ಮೂಢನಂಬಿಕೆ ತೊಡೆದುಹಾಕಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದರು. ದುಡಿಮೆಯಲ್ಲಿಯೇ ಪರಮಾತ್ಮನನ್ನು ಕಂಡರು. ಅಂಧಾನುಕರಣೆ ಕಠೊರವಾಗಿ ಖಂಡಿಸಿದರು ಎಂದು ಹಿರಿಯ ಮಹಿಳಾ ಸಾಹಿತಿ ಡಾ| ಗುರುದೇವಿ ಹುಲೆಪ್ಪನವರಮಠ ಹೇಳಿದರು.
ನಗರದ ಲಿಂಗಾಯತ ಭವನದಲ್ಲಿ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ “ಶರಣರ ವಚನಗಳಲ್ಲಿ ಮೂಢನಂಬಿಕೆಯ ವಿರೋಧ’ ವಿಷಯ ಕುರಿತು ಮಾತನಾಡಿದರು.
ಪ್ರಖರ ವಿಚಾರವಾದಿಗಳಾದ ಶರಣರು ಮನುಕುಲದ ಮಾನ ಕಳೆವ, ಶೋಷಣೆ-ಹಿಂಸೆಗೆ ದಾರಿ ಮಾಡಿಕೊಡುವ ಅಂಧಶ್ರದ್ಧೆ ಮತ್ತು ಅಂಧಾನುಕರಣೆ ವಿರುದ್ಧ ಪ್ರತಿಭಟಿಸಿದರು. ಯಾವುದೇ ವ್ಯಕ್ತಿ, ಸ್ಥಳ, ಮತ್ತು ಸಮಯದ ಬಗೆಗೆ ಧನಾತ್ಮಕಭಾವ ತಳೆಯುವುದು ವಿಚಾರವಾದಿಗಳ ನಡೆ. ಅಂತಹ ನಡೆಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿಯ ಉದ್ಧಾರ ಅಡಗಿದೆ ಎಂದರು.
ಸಂವಾದದಲ್ಲಿ ಪಾಲ್ಗೊಂಡಿದ್ದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪನ್ಯಾಸಕ ಡಾ| ಸಾಹುಕಾರ ಕಾಂಬಳೆ ಮಾತನಾಡಿ, ಶರಣ ತತ್ವಗಳು ವೈಜ್ಞಾನಿಕ ಮತ್ತು ವೈಚಾರಿಕ ತಳಹದಿ ಮೇಲೆ ರೂಪುಗೊಂಡಿರುವಂತವು. ಮನುಕುಲದ ಸರ್ವಾಂಗೀಣ ಕಲ್ಯಾಣಕ್ಕಾಗಿ ಬಸವಣ್ಣನವರ ನೇತೃತ್ವದಲ್ಲಿ ಹೋರಾಡಿದ ಶರಣರು ಭಯ, ಬಡತನ ಮತ್ತು ಅಜ್ಞಾನ ಮೂಲವಾದ ಮೂಢನಂಬಿಕೆ ನಿರ್ಮೂಲನೆ ಮಾಡಲು ಶ್ರಮಿಸಿದ್ದು ಮಾನವ ಇತಿಹಾಸದಲ್ಲಿ ಅಪರೂಪದ ಘಟನೆ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಗಮೇಶ ತೆಲಸಂಗ್ ಮಾತನಾಡಿ, ಶರಣರು ಜಂಗಮ ತತ್ವ ಸಾಧಿಸಿ ಬೋಧಿಸಿದರು. ಜಂಗಮ ಎಂದರೆ ಚಲನಶೀಲ, ಕ್ರಿಯಾಶೀಲವಾದ ಸಮಾಜವಾಗಿದೆ. ಅದನ್ನು ತೃಪ್ತಿ ಪಡಿಸುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ| ಹನುಮಂತಪ್ಪ ಸಂಜೀವನ್ನವರ ಮಾತನಾಡಿ, ಶರಣರು ಸದಾಚಾರ ಸಂಪನ್ನತೆಯಿಂದ ವಿಜೃಂಭಿಸುವ ಸಮಾಜ ನಿರ್ಮಿತಿಗೆ ಶ್ರಮಿಸಿದ ಮಹಾಮಾನವತಾವಾದಿಗಳು. ಬಹಿರಂಗದ ವ್ಯವಹಾರ ಸಾರಾಸಗಟಾಗಿ ಅಲ್ಲಗಳೆದು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದರು. ಮೂಢನಂಬಿಕೆಗಳ ಅರ್ಥಹೀನತೆ, ಅಪಾಯ ಮನಗಂಡಿದ್ದ ಅವರು ಜನರು ಅಂತಹ ಅಂಧಾನುಕರಣೆ ಕೈಬಿಡುವಂತೆ ಕರೆ ನೀಡಿದ್ದರು ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿನಿ ಮಹೇಶ್ವರಿ ತೇಗೂರ ಮಾತನಾಡಿದರು. ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಆಶೀರ್ವಚನ ನೀಡಿ, ನಮ್ಮ ಜೀವನ ಬೆಳಗಿಸಿಕೊಳ್ಳಲು ಶರಣರು ಹಲವು ಮೌಲ್ಯಗಳೆಂಬ ದೀಪಗಳನ್ನು ವಚನಮುಖೇನ ದಯಪಾಲಿಸಿದ್ದಾರೆ. ಅವುಗಳಲ್ಲಿ ವೈಚಾರಿಕತೆಯೂ ಒಂದು. ಮಾಡುವ ಮಾಟದ ಸತ್ಯಾಸತ್ಯತೆ ಪರಿಶೀಲಿಸಿ ಮುನ್ನಡೆಯುವವನು ಎಡವಲಾರ. ಅಂಧಶ್ರದ್ಧೆಯಿಂದ ದೂರವಿರಲು ಶ್ರಮಿಸಿದವನು ಜೀವನದಲ್ಲಿ ಸುಖೀಯಾಗಿರುತ್ತಾನೆ ಎಂದರು.
ಅಖೀಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ಶರಣೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶುಭಾ ಎಸ್. ತೆಲಸಂಗ ವಚನ ವಿಶ್ಲೇಷಣೆ ಮಾಡಿದರು. ಆಶಾ ಯಮಕನಮರಡಿ ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ಎಂ.ವೈ. ಮೆಣಸಿನಕಾಯಿ ವಂದಿಸಿದರು. ಚನ್ನಬಸಪ್ಪ ಚೊಣ್ಣದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.