ಚನ್ನಮ್ಮನ ನಾಡಿನಲ್ಲಿ ಮೈತ್ರಿಯೇ ಮುಳುವು
Team Udayavani, May 5, 2019, 12:38 PM IST
ಬೆಳಗಾವಿ: ಕಿತ್ತೂರು ಕೋಟೆಯಲ್ಲಿ ಸಾಮ್ರಾಜ್ಯ ಸ್ಥಾಪಿಸಿ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿಗೆ ಈ ಸಲದ ಲೋಕಸಭೆ ಚುನಾವಣೆಗೂ ಯಾವುದೇ ಅಡೆತಡೆ ಇಲ್ಲವಾಗಿದೆ. ಬಿಜೆಪಿಯ ಪ್ರತಿಸ್ಪ್ಫರ್ಧಿ ಮೈತ್ರಿ ಅಭ್ಯರ್ಥಿಯ ಪರಿಚಯವೇ ಜನರಿಗಿಲ್ಲ. ಇದರ ಲಾಭ ಪಡೆದುಕೊಳ್ಳಲು ಮುದಾಗಿರುವ ಬಿಜೆಪಿ ಹೆಚ್ಚಿನ ಲೀಡ್ ಸಿಗುತ್ತದೆ ಎಂಬ ಆಶಾಭಾವನೆ ಹೊಂದಿದ್ದರೆ, ಈ ಅಂತರಕ್ಕೆ ಲಗಾಮು ಹಾಕಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸಿದೆ.
ಕೆನರಾ ಲೋಕಸಭೆಯ ಚನ್ನಮ್ಮನ ಕಿತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಈಗ ಮತದಾನ ಬಳಿಕ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಹಳ್ಳಿ ಹಳ್ಳಿಗಳ ಜನರು ತಮ್ಮ ಸ್ವ ಕ್ಷೇತ್ರದ ಸಮಸ್ಯೆಗಳಿಗಿಂತ ದಿಲ್ಲಿ ಆಡಳಿತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಯಾರಿಗೆ ಎಷ್ಟು ಮತ ಸಿಗಬಹುದು ಎಂಬ ಲೆಕ್ಕಾಚಾರಕ್ಕಿಂತ ಅಂತರ ಎಷ್ಟಾಗಬಹುದೆನ್ನುವುದೇ ಚರ್ಚೆಯ ವಿಷಯವಾಗಿದೆ.
ಐದು ಬಾರಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಬಗ್ಗೆ ವೈಯಕ್ತಿಕವಾಗಿ ಜನರಿಗೆ ಅಸಮಾಧಾನವಿದ್ದರೂ ಮತದಾನ ಮಾಡುವಾಗ ಈ ಬೇಸರ ಹೊರ ಹಾಕಿಲ್ಲ. ಬಿಜೆಪಿಗೆ ಪ್ರತಿಸ್ಪರ್ಧಿ ಆಗಿರುವ ಕಾಂಗ್ರೆಸ್‌ನ ಚಿಹ್ನೆಯ ಅಭ್ಯರ್ಥಿ ಈ ಬಾರಿ ಇಲ್ಲದಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ನೋವು ಅನುಭವಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಆನಂದ ಅಸ್ನೋಟಿಕರ ಕಣದಲ್ಲಿದ್ದರೂ ಮತದಾರರಿಗೆ ಮಾತ್ರ ಇವರು ಅಪರಿಚಿತರು. ಹೀಗಾಗಿ ಜೆಡಿಎಸ್‌ಗೆ ಇಲ್ಲಿ ಮತ ಸಿಗುವುದು ಅನುಮಾನ.
ಹೆಗಡೆ ಬಗ್ಗೆ ಅಸಮಾಧಾನ: ಸಂಸದ ಹೆಗಡೆ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಬೆಳಗಾವಿಯಿಂದ ಧಾರವಾಡಕ್ಕೆ ಕಿತ್ತೂರು ಮೂಲಕ ರೈಲು ಮಾರ್ಗ, ಕೇಂದ್ರದಿಂದ ಕಿತ್ತೂರು ಅಭಿವೃದ್ಧಿಗೆ ಅನುದಾನ ತಂದಿಲ್ಲ ಎಂಬ ಬೇಸರ ಇದೆ. ಕೇವಲ ಹಿಂದುತ್ವ ಅಜೆಂಡಾ ಇಟ್ಟುಕೊಂಡು ಮತಗಳಿಗಾಗಿ ಸ್ಪರ್ಧಿಸಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡುತ್ತಿದ್ದಾರೆ.
ಮೈತ್ರಿ ಧರ್ಮ ಪಾಲಿಸಬೇಕೆಂದು ಕಾಂಗ್ರೆಸ್‌ನ ಕಟ್ಟಾ ಕಾರ್ಯಕರ್ತರು ಅಸ್ನೋಟಿಕರ ಪರವಾಗಿದ್ದರೆ, ಇನ್ನೂ ಕೆಲವು ಕಡೆಗೆ ಇದನ್ನು ವಿರೋಧಿಸಿ ಮತದಾನದಿಂದಲೇ ತಟಸ್ಥರಾಗಿ ಉಳಿದುಕೊಂಡಿದ್ದರು. ಪ್ರಚಾರದ ವೇಳೆಯಂತೂ ಕಾಂಗ್ರೆಸ್‌ನವರು ಅಷ್ಟೊಂದು ಕ್ರಿಯಾಶೀಲರಾಗಿರಲಿಲ್ಲ. ಇದರ ಲಾಭವನ್ನು ಬಿಜೆಪಿ ಸರಿಯಾಗಿ ಬಳಸಿಕೊಂಡಿದೆ. ಜೆಡಿಎಸ್ ಇಲ್ಲಿ ಭದ್ರವಾಗಿಲ್ಲದಿರುವುದೇ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ.
ಕಿತ್ತೂರಿನಲ್ಲಿ ಒಟ್ಟು 1,89,719 ಮತದಾರರಿದ್ದು, ಈಗ ಶೇ. 72.56ರಷ್ಟು ಮತದಾನವಾಗಿದೆ. ಅಂದರೆ 1,37,658 ಜನ ಹಕ್ಕು ಚಲಾಯಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆ ವೇಳೆಗೆ 33 ಸಾವಿರ ಮತಗಳ ಅಂತರ ಹಾಗೂ 2013ರ ಲೋಕಸಭೆಗೆ 26 ಸಾವಿರ ಮತಗಳ ಅಂತರ ಬಿಜೆಪಿಗೆ ಸಿಕ್ಕಿತ್ತು. ಈಗ ಮತ್ತಷ್ಟು ಉಮೇದಿನಲ್ಲಿರುವ ಬಿಜೆಪಿ 45 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಸಿಗಲಿದೆ ಎಂಬ ಲೆಕ್ಕಾಚಾರ ಹಾಕುತ್ತಿದೆ.
ಬಿಜೆಪಿಯಿಂದ ಮೈತ್ರಿಗೆ ನಡುಕ: ಅತಿ ಹೆಚ್ಚಿನ ಲೀಡ್ ಬಿಜೆಪಿಗೆ ಸಿಗುವುದರಲ್ಲಿ ಅನುಮಾನವಿಲ್ಲ. 2013ರ ಲೋಕಸಭೆ ಹಾಗೂ 2018ರ ವಿಧಾನಸಭೆ ಚುನಾವಣೆಗಿಂತಲೂ ಹೆಚ್ಚಿನ ಅಂತರ ಸಿಗಲಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ನ ಡಿ.ಬಿ. ಇನಾಮದಾರ 33 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈಗ ಹಳ್ಳಿ ಹಳ್ಳಿಗಳಲ್ಲಿಯೂ ಪ್ರಧಾನಿ ಮೋದಿ ಅವರ ವರ್ಚಸ್ಸು ನಮ್ಮ ಕೈ ಹಿಡಿದಿದೆ. ಐದು ಬಾರಿ ಸಂಸದರಾಗಿರುವ ಹೆಗಡೆ ಅವರ ಕಾರ್ಯವೈಖರಿ ಹಾಗೂ ಪ್ರಖರ ಭಾಷಣದಿಂದ ಬಿಜೆಪಿ ಭದ್ರ ಕೋಟೆಗೆ ಧಕ್ಕೆ ಆಗುವುದಿಲ್ಲ. ಹೆಗಡೆ ಅವರು ನಿರಂತರ ಜನ ಸಂಪರ್ಕ ಇಟ್ಟುಕೊಂಡಿದ್ದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ನಡುಕ ಹುಟ್ಟಿಸಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು.
ಕಿತ್ತೂರಿನ 104 ಹಳ್ಳಿಗಳಲ್ಲಿಯೂ ಬಿಜೆಪಿ ಸಂಪರ್ಕ ಇಟ್ಟುಕೊಂಡಿತ್ತು. ಆದರೆ ಮೈತ್ರಿ ಅಭ್ಯರ್ಥಿ ಈ ಕ್ಷೇತ್ರಕ್ಕೆ ಬಂದಿದ್ದೇ ಅಪರೂಪ. ಇಲ್ಲಿ ಮೊದಲೇ ಜೆಡಿಎಸ್‌ಗೆ ಅಸ್ತಿತ್ವ ಇಲ್ಲ. ಕಾಂಗ್ರೆಸ್‌ನವರೇ ರ್ಯಾಲಿ, ಸಭೆ, ಪ್ರಚಾರಗಳನ್ನು ನಡೆಸಿದ್ದಾರೆ. ಹೆಚ್ಚಿನ ಸಂಖ್ಯೆಯ ಕೈ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್‌ಗೆ ಮತ ಹಾಕಿ ಎಂದು ಹೇಳಲೂ ಮುಜುಗರ ಪಡುತ್ತಿದ್ದರು. ಮೈತ್ರಿ ಧರ್ಮ ಪಾಲಿಸಬೇಕೆಂಬ ಕಟ್ಟುನಿಟ್ಟಿನ ಆದೇಶದಿಂದಲೇ ಕೆಲವರು ಮಾತ್ರ ಪ್ರಚಾರ ನಡೆಸಿದ್ದಾರೆ.
ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಗೆಲುವಿನ ಬೆಟ್ಟಿಂಗ್‌ಕ್ಕಿಂತ ಹೆಗಡೆಗೆ ಮತಗಳ ಅಂತರಕ್ಕಾಗಿ ಅಲ್ಲಲ್ಲಿ ಬೆಟ್ಟಿಂಗ್ ನಡೆದಿದೆ. ದೇಶದಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಎಷ್ಟು ಸೀಟುಗಳು ಎಂಬ ಬಗ್ಗೆಯೂ ಜನರು ಬಾಜಿ ಹಚ್ಚುತ್ತಿದ್ದಾರೆ. ಕ್ಷೇತ್ರದ ಜನರ ಲಕ್ಷ್ಯ ಹೆಚ್ಚಾಗಿ ದಿಲ್ಲಿಯತ್ತ ನೆಟ್ಟಿರುವುದಂತೂ ಸುಳ್ಳಲ್ಲ.
• ಮಹಾಂತೇಶ ದೊಡಗೌಡ್ರ, ಕಿತ್ತೂರು ಕ್ಷೇತ್ರದ ಶಾಸಕರು
•ಅರುಣಕುಮಾರ ಬಿಕ್ಕಣ್ಣವರ, ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.