ಅಂಬೇಡ್ಕರ್ ಕೂಡ ಹಿಂದು ಬಗ್ಗೆ ಮಾತಾಡಿಲ್ಲ
ಪಂಚಮಸಾಲಿ ಸಮಾವೇಶ; ಹಿಂದು ಮೂಲದ ಬೌದ್ಧ ಧರ್ಮ ಸೇರಿದ ಬಾಬಾಸಾಹೇಬ: ಯತ್ನಾಳ
Team Udayavani, Nov 14, 2022, 3:41 PM IST
ಗೋಕಾಕ: ಗೋಕಾಕ್ ಯಾವಾಗಲೂ ಮುಖ್ಯಮಂತ್ರಿಯವರಿಗೆ ರಾಜಕೀಯವಾಗಿ ಡಿಸ್ಟರ್ಬ್ ಮಾಡುತ್ತಿತ್ತು. ಈ ಬಾರಿ ಗೋಕಾಕ್ ನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ವಿಚಾರ ಸರ್ಕಾರಕ್ಕೆ ಡಿಸ್ಟರ್ಬ್ ಮಾಡುತ್ತಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ನ್ಯೂ ಇಂಗ್ಲೀಷ್ ಶಾಲೆ ಆವರಣದಲ್ಲಿ ನಡೆದ ಗೋಕಾಕ ಪಂಚಮಸಾಲಿ 2ಎ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಶ್ರೀಗಳು ಮಾತನಾಡಿ, ಹತ್ತು ಲಕ್ಷ ಜನರನ್ನ ಸೇರಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ರೂ ಸರ್ಕಾರದ ಕಿವಿ ಕೇಳಲಿಲ್ಲ. ಮುಖ್ಯಮಂತ್ರಿ ನಿವಾಸದ ಎದುರು ಹೋರಾಟ ಮಾಡಿದ್ರೂ ಮೀಸಲಾತಿ ಕೊಡಲಿಲ್ಲ. ಕೊನೆಯದಾಗಿ ಡಿ.12ರಂದು ಬೆಂಗಳೂರಿನಲ್ಲಿ ಇಪ್ಪತ್ತೈದು ಲಕ್ಷ ಜನರನ್ನ ಸೇರಿಸಿ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಮಾಡುತ್ತೇವೆ ಎಂದರು.
ಬಸವಗೌಡ ಪಾಟೀಲ ಯತ್ನಾಳ ಮಾತನಾಡಿ, ಡಾ| ಬಾಬಾಸಾಹೇಬ್ ಅಂಬೇಡ್ಕರ್ ಜಗತ್ತಿನ ಯಾವುದೇ ನಾಯಕ ಅನುಭವಿಸದಷ್ಟು ಕಷ್ಟ ಅನುಭವಿಸಿದ್ದಾರೆ. ಭಾರತದ ಸಂಸ್ಕೃತಿ ಹೇಗಿದೆ ಎಂದರೆ ಹಿಂದುಳಿದ ಸಮಾಜದ ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದರು. ಗಂಗಾಮತಸ್ಥ ವೇದವ್ಯಾಸರು ಮಹಾಭಾರತ ಬರೆದರು. ಡಾ| ಬಾಬಾಸಾಹೇಬ್ ಅಂಬೇಡ್ಕರ್ ರಂತಹ ಪರಮಾತ್ಮ ಹಿಂದೂ ಧರ್ಮದ ಬಗ್ಗೆ ಯಾವತ್ತೂ ಮಾತನಾಡಲಿಲ್ಲ ಎಂದರು.
ಡಾ| ಬಾಬಾಸಾಹೇಬ್ ಅಂಬೇಡ್ಕರ್ ಗೆ ಮೇಲ್ವರ್ಗದವರು ಬಹಳ ಅನ್ಯಾಯ ಮಾಡಿದರು. ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೀನಿ, ಸಾಯುವಾಗ ಹಿಂದೂ ಧರ್ಮದಲ್ಲಿ ಇರಲ್ಲ ಎಂದು ಅಂಬೇಡ್ಕರ್ ಹೇಳಿದರು. ಅವರು ಅಪ್ಪಿತಪ್ಪಿಯೂ ಸಹ ಇಸ್ಲಾಂ, ಕ್ರೈಸ್ತ ಧರ್ಮಕ್ಕೆ ಹೋಗಲಿಲ್ಲ. 1956ರಲ್ಲಿ ನಾಗ್ಪುರದಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡ್ತಾರೆ. ಅದರ ಮೂಲ ಹಿಂದು ಎಂಬುದನ್ನು ಗಮನದಲ್ಲಿಡಿ ಎಂದು ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ ಅವರು, ನಾನು ಅಂಬೇಡ್ಕರ್ ಪುಸ್ತಕ ಓದಿದೀನಿ, ವಿಧಾನಸಭೆಯಲ್ಲಿ ಮಾತನಾಡಿದೀನಿ. ನೀವು ಮಾತನಾಡಿ. ಲಿಂಗಾಯತರು 11 ರೂಪಾಯಿ ಅಂದವರಿಗೆ ಎಲ್ಲರೂ ಉತ್ತರ ಕೊಡಿ ಎಂದು ಕರೆ ನೀಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ಪಾಕಿಸ್ತಾನ ಒಡೆದು ಕೊಡಬೇಡಿ ಎಂದು ನೆಹರು ಅವರಿಗೆ ಹೇಳಿದರು. ನೀವು ಹಿಂದೂ ಧರ್ಮದ ಬಗ್ಗೆ ಮಾತನಾಡ್ತಿರಾ? ಮೊಘಲರು ಬಂದರೂ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳಿಂದ ಏನೂ ಆಗಿಲ್ಲ. ಇನ್ನು ನಿವೇನು ಮಾಡೋದು? ಮುಗ್ಧ ಜನರನ್ನು ಬಳಸುವ ಬದಲು ತಾಕತ್ ಇದ್ದರೆ ನೇರವಾಗಿ ನನ್ನ ಜೊತೆ ಯುದ್ಧಕ್ಕೆ ಬರುವಂತೆ ಸತೀಶ ಅವರಿಗೆ ಸವಾಲು ಹಾಕಿದರು. ಮುಂಬರುವ ದಿನಗಳಲ್ಲಿ ಉಪ್ಪಾರ ಹಾಗೂ ಕುರುಬ ಸಮಾಜದವರಿಗೆ ಜಿಲ್ಲೆಯಲ್ಲಿ ರಾಜಕೀಯ ಸ್ಥಾನಮಾನ ದೊರಕಿಸಲು ನಮ್ಮ ಸಮಾಜದ ಎಲ್ಲ ನಾಯಕರು ಶ್ರಮಿಸುತ್ತೇವೆ ಎಂದರು.
ವಾಲ್ಮೀಕಿ ಸಮುದಾಯ, ಪರಿಶಿಷ್ಟ ಸಮಾಜಕ್ಕೆ ಮೀಸಲಾತಿ ಬೇಕು ಎಂದು ವಿಧಾನಸಭೆಯಲ್ಲಿ ಕೇಳಿದ್ದೆ. ನಾನು ಕೇವಲ ಪಂಚಮಸಾಲಿ ಸಮಾಜದ ಬಗ್ಗೆ ಮಾತನಾಡಿಲ್ಲ. ಎಲ್ಲ ಸಮಾಜದ ಜನರ ವಿಚಾರ ಮಾತನಾಡಿದೀನಿ. ನೀವೆಂದು ಮಾತನಾಡಿದ್ದೀರಿ ಎಂದು ಪ್ರಶ್ನಿಸಿ, ಯಮಕನಮರಡಿ ಮತಕ್ಷೇತ್ರದಲ್ಲಿ ಜನರಲ್ ಇದ್ದರೆ ನಾನೇ ಬಂದ್ ನಿಲ್ತಿàನಿ ಅಲ್ಲೇ ಎಂದು ಸವಾಲು ಹಾಕಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಗೋಕಾಕನಲ್ಲಿ ಸಮಾವೇಶ ಮಾಡುವಾಗ ಬಹಳಷ್ಟು ವಿಘ್ನ ಎದುರಾಯಿತು. ನಾವು ಸಂಘಟಿತರಾದ್ರೆ ಉಳಿದವರಿಗೆ ಹೊಟ್ಟೆ ಕಿಚ್ಚು ಏಕೆ? ನಾನು ರಾಜ್ಯಸಭಾ ಸದಸ್ಯ. ನನಗೇನು ಶಾಸಕನಾಗಬೇಕಿಲ್ಲ. ರಾಜಕಾರಣ ಯಾರ ಅಪ್ಪನ ಸ್ವತ್ತಲ್ಲ ಎಂದು ಜಾರಕಿಹೋಳಿ ಸಹೋದರರ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.
ನಮ್ಮ ನಮ್ಮಲ್ಲಿ ಒಳ ಜಗಳ ಸರಿಯೇ? ಎನ್ನುವುದನ್ನು ಪರಾಮರ್ಶೆ ಮಾಡಿಕೊಳ್ಳಬೇಕಿದೆ. ನಾವು ಯಾರ ಗುಲಾಮರಲ್ಲ. ನಾನು ರಾಜ್ಯಸಭಾ ಸದಸ್ಯನಾದ ನಂತರ ನನ್ನ ಹತ್ತಿರ ಜನ ಹೆದರಿ ಬರುತ್ತಿಲ್ಲ. ನಮ್ಮ ಜನರು ಮುಂದಿನ ದಿನದಲ್ಲಿ ರಾಜಕೀಯ ನಿರ್ಣಯ ಮಾಡಿ, ನನ್ನ ಜೊತೆಗೆ ನಿಲ್ಲಬೇಕು ಎಂದರು.
ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಾತನಾಡಿ, ಮೀಸಲಾತಿ ಸಿಗುವವರೆಗೂ ನಾವು ಶ್ರಮಿಸುವುದಿಲ್ಲ. ನಮ್ಮನ್ನ ಅಶಕ್ತರು, ದುರ್ಬಲರೆಂದು ಭಾವಿಸಿ ನಮ್ಮ ಸಹನೆ ಪರೀಕ್ಷೆ ಮಾಡಬೇಡಿ. ಮೀಸಲಾತಿಗಾಗಿ ಎಷ್ಟಂತಾ ಹೋರಾಟ ಮಾಡಬೇಕು. ನಿಸ್ವಾರ್ಥತೆಯಿಂದ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಬೇರೆ ಯಾರಿಗಾದರೂ ನಾವು ತೊಂದರೆ ಕೊಟ್ಟಿದ್ದೇವಾ. ಬೇರೆ ಸಮಾಜದವರನ್ನೇ ನಾವು ನಮ್ಮವರು ಅಂತಾ ಹೇಳೆ¤ವಿ. ಮುಖ್ಯಮಂತ್ರಿಗಳೇ ಸರ್ ನೀವು ಕೂಡ ನಮ್ಮ ಸಮಾಜದವರು. ನೀವೇ ಮೀಸಲಾತಿ ಕೊಡದಿದ್ರೆ ಇನ್ಯಾರು ಬಂದು ಕೊಡ್ತಾರೆ ಎಂದು ಕೇಳಿದರು.
ಇದಕ್ಕೂ ಮುಂಚೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ನ್ಯೂ ಇಂಗ್ಲೀಷ ಶಾಲೆ ಆವರಣದಲ್ಲಿ ನಿರ್ಮಿಸಿದ ವೇದಿಕೆಯವರೆಗೆ ಪಂಚಮಸಾಲಿ ಸಮಾಜ ಬಾಂಧವರಿಂದ ಮೆರವಣಿಗೆ ಮಾಡಲಾಯಿತು.
ವೇದಿಕೆಯ ಮೇಲೆ ಮಾಜಿ ಸಚಿವ ವಿನಯ ಕುಲಕರ್ಣಿ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಎಚ್ ಎಸ್ ಶಿವಶಂಕರ. ಶಶಿಕಾಂತ ನಾಯಿಕ, ಆರ್ ಕೆ ಪಾಟೀಲ, ನಿಂಗಪ್ಪ ಪಿರೋಜಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.