ಗುರುವಿನ ಕೃಪೆಗಾಗಿ ಅಂತರಂಗ ಶುದ್ಧಿ ಅಗತ್ಯ: ಶ್ರೀ
ತಂತ್ರಜ್ಞಾನದ ಆಧುನಿಕ ದಿನಗಳಲ್ಲಿ ಆಧ್ಯಾತ್ಮಿಕ ಒಲವು ಹೊಂದಿರುವ ಇಲ್ಲಿಯ ಜನರು ಧನ್ಯರು
Team Udayavani, Aug 30, 2022, 6:37 PM IST
ಮೂಡಲಗಿ: ಅಂತರಂಗವನ್ನು ಶುದ್ಧವಾಗಿರಿಸಿಕೊಂಡು ಗುರುವಿನ ಜ್ಞಾನದ ಮಾರ್ಗದಲ್ಲಿ ಸಾಗಿದರೆ ಮಾತ್ರ ದೈವಿ ಕೃಪೆಯಾಗುವುದು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ| ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಕಲ್ಲೋಳಿಯ ಶ್ರೀ ಸಿದ್ಧಾರೂಢ ಮಠದ ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮನಸ್ಸು ಸ್ವತ್ಛವಾಗಿರಬೇಕು ಎಂದರು.ಜಗತ್ತಿನಲ್ಲಿ ಹೊರ ಕಾಣುವ ಲೌಕಿಕ ಸಂಗತಿಗಳನ್ನು ಪ್ರಾಪ್ತಗೊಳಿಸಿಕೊಳ್ಳುವುದು ಸುಲಭವಾಗಿದೆ.
ಆದರೆ ಮನುಷ್ಯನ ಆಂತರಿಕ ಶುದ್ಧಿಯು ಕೇವಲ ಗುರುವಿನಿಂದ ಆಗುವಂತದ್ದು. ಅಂತಹ ಸಾತ್ವಿಕ ಸ್ವರೂಪವನ್ನು ಮನಷ್ಯನು ತನ್ನೊಳಗೆ ಕಾಣಲು ಸತು³ರುಷರು, ಗುರುಗಳ ನುಡಿ ಬೇಕು ಎಂದರು. ಸಿದ್ಧಾರೂಢರಂತ ಮಹಾನ್ ದೈವಿ ಪುರುಷರು ಕಲ್ಲೋಳಿಯ ನೆಲವನ್ನು ಸ್ಪರ್ಷಿಸಿದ್ದರ ಕಾರಣಕ್ಕಾಗಿ 50 ವರ್ಷಗಳಿಂದ ವೇದಾಂತ ಪರಿಷತ್ತು ಸಾಗಿ ಬಂದಿರುವುದು ಇಲ್ಲಿಯ ಜನರ ದೈವ ಭಕ್ತಿ, ಸಂಸ್ಕಾರವನ್ನು ಬಿಂಬಿಸುತ್ತದೆ. ತಂತ್ರಜ್ಞಾನದ ಆಧುನಿಕ ದಿನಗಳಲ್ಲಿ ಆಧ್ಯಾತ್ಮಿಕ ಒಲವು ಹೊಂದಿರುವ ಇಲ್ಲಿಯ ಜನರು ಧನ್ಯರು ಎಂದು ಶ್ಲಾಘಿಸಿದರು.
ಇಂಚಲದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ|ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಜಗತ್ತಿನ ಮತ್ತು ದೇವಲೋಕದ ಎಲ್ಲವನ್ನು ಪಡೆದುಕೊಳ್ಳುವುದಕ್ಕೆ ಗುರುವಿನ ನಡೆಯಲ್ಲಿ ನಡೆಯುವುದಾಗಿದೆ.ಅಂಥ ಭಾಗ್ಯಕ್ಕಾಗಿ ಪಾವನ ಪುರುಷರ ಮಾರ್ಗದರ್ಶನ ಬೇಕು ಎಂದರು. ಹಂಪಿ ಹೇಮಕೂಟದ ಶಿವರಾಮಾವಧೂತ ಆಶ್ರಮದ ವಿದ್ಯಾನಂದ ಸ್ವಾಮೀಜಿ, ಮಹಾಲಿಂಗಪುರದ ಸಿದ್ಧಾರೂಢ ಆಶ್ರಮದ ಸಹಜಾನಂದ ಸ್ವಾಮೀಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಚಿತ್ರದುರ್ಗದ ಶಿವಲಿಂಗಾನಂದ ಸ್ವಾಮೀಜಿ, ಖುರ್ದಕಂಚನಳ್ಳಿಯ ಸುಬ್ರಹ್ಮಣ್ಯ ಸ್ವಾಮೀಜಿ, ದಾವಣವೇರಿಯ ಶಿವಾನಂದ ಸ್ವಮೀಜಿ, ಹರಿದ್ವಾರದ ಆಚಾರ್ಯ ದಿವ್ಯಚೈತನ್ಯಜೀ ಮಹಾರಾಜ, ಹುಬ್ಬಳ್ಳಿ ಸಿದ್ಧಾರೂಢಮಠದ ಸಚ್ಚಿದಾನಂದ ಸ್ವಾಮೀಜಿ, ಹರಳಕಟ್ಟಿಯ ನಿಜಗುಣ ಸ್ವಾಮೀಜಿ, ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ನಿಂಗಯ್ಯ ಸ್ವಾಮೀಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಮಲ್ಲೇಶ್ವರ ಶರಣರು, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಮುಕ್ತನಂದ ಸ್ವಾಮೀಜಿ, ಹನುಮದಾಸ ಸ್ವಾಮೀಜಿ ವೇದಿಕೆಯಲ್ಲಿದರು. ಬೀದರದ ಗುರುದೇವ ಆಶ್ರಮದ ಗಣಪತಿ ಮಹಾರಾಜರು ನಿರೂಪಿಸಿದರು. ಸಮಾರಂಭದ ಪೂರ್ವದಲ್ಲಿ ಸಿದ್ಧಾರೂಢರ ರಥೋತ್ಸವ, ಸಿದ್ಧಾರೂಢರ ಭಾವಚಿತ್ರ ಮೆರವಣಿಗೆ ಜರುಗಿತು. ಅನ್ನ ಸಂತರ್ಪಣೆ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Bailhongal: ಯುವಕನಿಗೆ ಚಾಕು ಇರಿದು ಬರ್ಬರವಾಗಿ ಕೊ*ಲೆ
Belgavi; ಕರಾಳ ದಿನಾಚರಣೆ ನಡೆಸಿದ ಎಂಇಎಸ್ ನವರ ವಿರುದ್ಧ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.