ಬೆಳಗಾವಿ ಎಪಿಎಂಸಿಗೆ ಕೊನೆಮೊಳೆ!

ನೂತನ ಕಾಯ್ದೆಯಿಂದ ತತ್ತರಿಸಿದ ಎಪಿಎಂಸಿ,ಸೆಸ್‌ ಇಲ್ಲದೇ ನಿರ್ವಹಣೆಗೆ ಸಂಕಷ್ಟ,ಕಂಗಾಲಾದ ದಲ್ಲಾಳಿಗಳು

Team Udayavani, Feb 22, 2021, 4:31 PM IST

ಬೆಳಗಾವಿ ಎಪಿಎಂಸಿಗೆ ಕೊನೆಮೊಳೆ!

ಬೆಳಗಾವಿ: ಒಂದು ಕಡೆ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ವಿರುದ್ಧ ರೈತರು ನಿರಂತರ ಹೋರಾಟನಡೆಸಿದ್ದರೆ ಇನ್ನೊಂದು ಕಡೆ ಎಪಿಎಂಸಿ ಆದಾಯದಲ್ಲಿ ಗಣನೀಯ ಕುಸಿತ ಕಂಡಿರುವದು ಕಳವಳ ಹುಟ್ಟಿಸಿದೆ.ಇದು ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಶಾಶ್ವತವಾಗಿ ಮುಚ್ಚುವ ಪ್ರಯತ್ನವೇ ಎಂಬ ಅನುಮಾನ ಬಲವಾಗಿ ಕಾಡತೊಡಗಿದೆ.

ರೈತರ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಕೃಷಿ ಉತ್ಪನ್ನಮಾರುಕಟ್ಟೆಗಳು ಇದ್ದೂ ಇಲ್ಲದಂತಾಗಿವೆ. ಇದೇ ಕಾರಣದಿಂದ ಎಪಿಎಂಸಿ ಸೆಸ್‌ ಸಂಗ್ರಹದಲ್ಲಿ ಸಾಕಷ್ಟುಇಳಿಕೆಯಾಗುತ್ತಿದ್ದು ಮಾರುಕಟ್ಟೆ ವ್ಯವಸ್ಥೆಯ ಮೇಲೆ ಬಹಳ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿದೆ.

ನೆರೆಯ ಗೋವಾ, ಮಹಾರಾಷ್ಟ್ರ, ಹಾಗೂ ಗುಜರಾತ್‌ ರಾಜ್ಯಗಳೊಂದಿಗೆ ವ್ಯಾಪಾರ ವಹಿವಾಟು ಸಂಪರ್ಕ ಹೊಂದಿರುವ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಕೋಟ್ಯಂತರ ರೂ. ವಹಿವಾಟು ನಡೆಸುತ್ತದೆ. ಸಿಹಿಗೆಣಸು,ಆಲೂಗಡ್ಡೆ, ಈರುಳ್ಳಿ ಹಾಗೂ ತಾಜಾ ತರಕಾರಿಗಳ ಮಾರಾಟಕ್ಕೆ ಬೆಳಗಾವಿಯ ಎಪಿಎಂಸಿ ಪ್ರಸಿದ್ಧಿಯಾಗಿದೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ ಜಿಲ್ಲೆಗಳಲ್ಲದೆ ನೆರೆಯ ಮಹಾರಾಷ್ಟ್ರದಿಂದ ಸಹಕೃಷಿ ಉತ್ಪನ್ನಗಳು ಈ ಮಾರುಕಟ್ಟೆಗೆ ಬರುತ್ತವೆ.ಪ್ರತಿ ಬುಧವಾರ ಹಾಗೂ ಶನಿವಾರ ನಡೆಯುವಹರಾಜು ಪ್ರಕ್ರಿಯೆಯಲ್ಲಿ ಕೋಟಿಗಟ್ಟಲೇ ವಹಿವಾಟುನಡೆಯುತ್ತದೆ. ಆದರೆ ಈಗ ಅದೇ ವಾತಾವರಣ ಇಲ್ಲ.ಈ ಹಿಂದೆಯೂ ರೈತರು ತಮ್ಮ ಕೃಷಿ ಉತ್ಪನ್ನಗಳನ್ನುಹೊರಗಡೆ ಮಾರಾಟ ಮಾಡಲು ಅವಕಾಶಕೊಡಲಾಗಿತ್ತು. ಆದರೆ ಅದಕ್ಕೆ ಕಡ್ಡಾಯವಾಗಿ ಪರವಾನಗಿಪಡೆಯಬೇಕಿತ್ತು. ಪರವಾನಗಿ ಇಲ್ಲದೆ ಮಾರಾಟ ಮಾಡಿದರೆ ದಂಡ ವಿಧಿಸಲಾಗುತ್ತಿತ್ತು. ಹೀಗಾಗಿಬಹುತೇಕ ರೈತರು ಎಪಿಎಂಸಿಗಳಿಗೆ ಬರುತ್ತಿದ್ದರು. ವ್ಯಾಪಾರ ವಹಿವಾಟು ಪರಿಣಾಮಕಾರಿಯಾಗಿ ನಡೆಯುತ್ತಿತ್ತು. ಆದರೆ ಈಗ ಪರವಾನಗಿ ಇಲ್ಲದಿದ್ದರೂಎಲ್ಲಿ ಬೇಕಾದಲ್ಲಿ ಮಾರಾಟ ಮಾಡಬಹುದು ಮತ್ತುಖರೀದಿ ಮಾಡಬಹುದು. ಇದರಿಂದ ಎಪಿಎಂಸಿ ಗಳು ಭಣಗುಡುತ್ತಿವೆ. ಕಾರ್ಮಿಕರು ಮತ್ತು ಹಮಾಲಿಗಳು ಕೆಲಸವಿಲ್ಲದೆ ನೆಮ್ಮದಿ ಕಳೆದುಕೊಂಡಿದ್ದಾರೆ.

ಆದಾಯಕ್ಕೆ ಚಿಂತಾಜನಕ ಸ್ಥಿತಿ: ರೈತರು ತಮಗೆ ಬೇಕಾದಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟಮಾಡಲು ಮುಕ್ತ ಅವಕಾಶ ಕಲ್ಪಿಸಿರುವುದರಿಂದ ಇದರ ನೇರ ಹೊಡೆತ ಎಪಿಎಂಸಿ ಗಳ ಮೇಲೆ ಬಿದ್ದಿದೆ. ಆದಾಯ ಶೂನ್ಯದ ಹಂತಕ್ಕೆ ಬಂದು ತಲುಪಿದೆ. ಒಂದುಸಮಯದಲ್ಲಿ ಸದಾ ಕೃಷಿ ಉತ್ಪನ್ನಗಳಿಂದ ತುಂಬಿರುತ್ತಿದ್ದ ಬೆಳಗಾವಿ ಎಪಿಎಂಸಿಯಲ್ಲಿ ಗೆಣಸು, ಈರುಳ್ಳಿ ಹಾಗೂ ಆಲೂಗಡ್ಡೆ ಮಾತ್ರ ಕಾಣುತ್ತಿದೆ. ರೈತರು ತಮಗೆ ಬೇಕಾದಲ್ಲಿ ಮಾರಾಟ ಮಾಡುತ್ತಿದ್ದರೆ ದಲ್ಲಾಳಿಗಳುನೇರವಾಗಿ ರೈತರ ಮನೆ ಬಾಗಿಲಿಗೆ ಹೋಗಿ ಖರೀದಿ ಮಾಡುತ್ತಿದ್ದಾರೆ.

ಇದು ಎಪಿಎಂಸಿ ಸೆಸ್‌ ಸಂಗ್ರಹದ ಮೇಲೆ ಹೊಡೆತ ಕೊಟ್ಟಿದೆ. 2019-20 ರ ಅಗಸ್ಟ್‌ದಿಂದ ಜನವರಿಯವರೆಗೆ1.86 ಕೋಟಿ ರೂ. ಮಾರುಕಟ್ಟೆಶುಲ್ಕ ಸೇರಿ ಒಟ್ಟು 3.98 ಕೋಟಿರೂ. ಶುಲ್ಕ ಸಂಗ್ರಹವಾಗಿತ್ತು. ಆದರೆ2020-21 ರ ಇದೇ ಅವಧಿಯಲ್ಲಿ ಕೇವಲ 85.49ಲಕ್ಷ ರೂ. ಸಂಗ್ರಹವಾಗಿದೆ. ಇದರಲ್ಲಿ 35.16ಲಕ್ಷ ರೂ. ಮಾರುಕಟ್ಟೆ ಶುಲ್ಕ ಒಳಗೊಂಡಿದೆ. ಈ ಮೊದಲು ಮಾರುಕಟ್ಟೆ ಶುಲ್ಕ ಪ್ರತಿ ನೂರು ರೂ.ಗಳಿಗೆ 1.50 ರೂ. ಇತ್ತು. ಆದರೆ ಈಗ ಇದರ ಪ್ರಮಾಣ ಕೇವಲ 60 ಪೈಸೆ ಮಾತ್ರ ಇದೆ. ಎಪಿಎಂಸಿ ಹೊರಗಡೆವಹಿವಾಟು ಮಾಡುವವರು ಶುಲ್ಕ ಕಟ್ಟುತ್ತಿಲ್ಲ. ಮೇಲಾಗಿಗೋಧಿ, ಅಕ್ಕಿ ಮೊದಲಾದ ಆಹಾರ ಧಾನ್ಯ ತರಿಸುತ್ತಿದ್ದ ಭಾರತೀಯ ಆಹಾರ ನಿಗಮದಿಂದ ನಮಗೆ ಪ್ರತಿ ವರ್ಷ ಒಂದು ಕೋಟಿ ಶುಲ್ಕ ಬರುತ್ತಿತ್ತು. ಈಗ ಹೊಸ ಕಾಯ್ದೆ ಪರಿಣಾಮ ಅದೂ ಸಹ ತಪ್ಪಿದೆ. ಹೀಗಾಗಿನಿರ್ವಹಣೆಗೆ ಬಹಳ ತೊಂದರೆಯಾಗುತ್ತಿದೆ ಎಂಬುದು ಎಪಿಎಂಸಿ ಅಧಿಕಾರಿಗಳ ಹೇಳಿಕೆ.

ಮೊದಲು ಎಪಿಎಂಸಿ ಬಿಟ್ಟು ಹೊರಗಡೆಮಾರಿದರೆ ಪ್ರಕರಣ ದಾಖಲು ಮಾಡಲಾಗುತ್ತಿತ್ತು. ಈಗ ಈ ನಿರ್ಬಂಧ ತೆರವುಮಾಡಲಾಗಿದೆ. ರೈತರಿಗೆ ಮುಕ್ತ ಮಾರಾಟದ ಸೌಲಭ್ಯ ಕಲ್ಪಿಸಲಾಗಿದೆ. ಇಷ್ಟಾದರೂ ರೈತರಶೋಷಣೆ ನಿಂತಿಲ್ಲ. ದಲ್ಲಾಳಿಗಳು ರೈತರಿಂದಪ್ರತಿಶತ 8ರಿಂದ 10ರಷ್ಟು ಕಮಿಷನ್‌ಪಡೆಯುತ್ತಲೇ ಇದ್ದಾರೆ. ಸರ್ಕಾರದ ಆದೇಶದಲ್ಲಾಳಿಗಳಿಗೆ ಅನುಕೂಲವಾಗಿದೆ. ಸರ್ಕಾರವೇ ಎಪಿಎಂಸಿಗಳನ್ನು ಮುಚ್ಚುವ ವಾತಾವರಣ ನಿರ್ಮಾಣ ಮಾಡಿದೆ. – ಸಿದಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ

ಹೊಸ ಕಾಯ್ದೆ ಇನ್ನೂ ಜಾರಿಗೆ ಬಂದಿಲ್ಲ. ಆಗಲೇ ಎಪಿಎಂಸಿ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಎಪಿಎಂಸಿ ಉಳಿಸಬೇಕು ಎಂಬ ಇಚ್ಛಾಶಕ್ತಿ ಸರ್ಕಾರಕ್ಕಾಗಲೀಅಥವಾ ಅಧಿಕಾರಿಗಳಿಗೆ ಇಲ್ಲ. ಪ್ರತಿ ವರ್ಷ ಅಂಗಡಿಗಳಿಂದ ಸರಿಯಾಗಿ ಬಾಡಿಗೆ ಹಾಗೂ ಮಾರುಕಟ್ಟೆ ಶುಲ್ಕ ವಸೂಲಿ ಆಗುತ್ತಿಲ್ಲ. ಇದರಿಂದ ಸಹಜವಾಗಿಯೇ ಎಪಿಎಂಸಿ ಆದಾಯ ಕಡಿಮೆಯಾಗಿದೆ. ಶಿವನಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ

ಮಾರುಕಟ್ಟೆ ಶುಲ್ಕ ಕಡಿಮೆಯಾಗಿರುವುದರಿಂದ ಎಪಿಎಂಸಿಆದಾಯದ ಮೇಲೆ ಬಹಳ ಕೆಟ್ಟ ಪರಿಣಾಮ ಆಗಿದೆ. ಇದರಿಂದ ನಿರ್ವಹಣೆ ಸಮಸ್ಯೆಯಾಗಿದ್ದು ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲುಸಮಸ್ಯೆಯಾಗುತ್ತಿದೆ. ಈ ಎಲ್ಲ ಅಂಶಗಳ ಬಗ್ಗೆಸರಕಾರದ ಗಮನಕ್ಕೆ ತರಲಾಗಿದೆ.  –ಡಾ| ಕೋಡಿಗೌಡ ಕೆ, ಕಾರ್ಯದರ್ಶಿ, ಎಪಿಎಂಸಿ

 

ಕೇಶವ ಆದಿ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ನ್ಯಾಯಾಧೀಶರ ಮುಂದೆ ಪೊಲೀಸ್‌ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.