ಪಠ್ಯದಲ್ಲಿನ ಲೋಪದೋಷ ಸರಿಪಡಿಸಿ
ಲಿಂಗಾಯತ ಧರ್ಮ-ಬಸವಣ್ಣನವರಿಗೆ ಅಪಚಾರ ; ಮಠಾಧೀಶರು-ಲಿಂಗಾಯತ ಸಂಘಟನೆಗಳ ಮನವಿ
Team Udayavani, Jun 7, 2022, 11:20 AM IST
ಹುಕ್ಕೇರಿ: ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣಾ ಸಮಿತಿ ಲೋಪದೋಷಗಳನ್ನು ಸರಿಪಡಿಸದೇ ಮತ್ತಷ್ಟು ತಪ್ಪು ಸಂಗತಿಗಳನ್ನು ಸೇರಿಸಿರುವುದು ಶೋಚನೀಯ. ಕಾರಣ ಆ ತಪ್ಪುಗಳನ್ನು ಸರಿಪಡಿಸಬೇಕು ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ತಾಲೂಕಿನ ಎಲ್ಲ ಲಿಂಗಾಯತ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು.
ಪಟ್ಟಣದ ಹಳೇ ತಹಶೀಲ್ದಾರ್ ಕಾರ್ಯಾಲಯದ ಬಳಿ ಶ್ರೀಗಳು ಹಾಗೂ ಲಿಂಗಾಯತ ಸಂಘಟನೆಗಳ ಕಾರ್ಯಕರ್ತರು ಸೇರಿ ಮಿನಿ ವಿಧಾನಸೌಧ ಕಚೇರಿಗೆ ತೆರಳಿ ತಹಶೀಲ್ದಾರ್ ಡಾ| ಡಿ.ಎಚ್ ಹೂಗಾರ ಅವರಿಗೆ ಮನವಿ ಸಲ್ಲಿಸಿದರು.
ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ನೀಡುತ್ತಿರುವ ನೂತನ ಪಠ್ಯಗಳಲ್ಲಿ ಬಸವಣ್ಣನವರ ಕುರಿತು ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು ಎಂದು ಹೇಳಲಾಗಿದೆ. ಆದರೆ ಇಂತಹ ಅನಿಷ್ಠ ಆಚಾರಗಳನ್ನು ವಿರೋಧಿ ಸಿದ್ದ ಬಸವಣ್ಣನವರು ಉಪನಯನ ಧಿಕ್ಕರಿಸಿದ್ದರು. ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದರು ಎಂಬುದು ಸಹ ತಪ್ಪು. ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ಸೇರಿಸಲಾಗಿದೆ. ನಿಜವಾಗಿಯೂ ಬಸವಣ್ಣನವರು ಲಿಂಗಾಯತ ಧರ್ಮದ ಸ್ಥಾಪಕರು. ಇದನ್ನೆಲ್ಲ ಮರೆಮಾಚಿ ತಪ್ಪು ವಿಷಯಗಳನ್ನು ಮಕ್ಕಳಿಗೆ ದೋಷಪೂರಿತ ಪಠ್ಯ ಬೋಧಸಿದರೆ ಲಿಂಗಾಯತ ಧರ್ಮಕ್ಕೆ ಹಾಗೂ ಬಸವಣ್ಣನವರಿಗೆ ದೊಡ್ಡ ಅಪಚಾರವಾಗುತ್ತದೆ. ಅದಕ್ಕಾಗಿ ತಕ್ಷಣ ಆಗಿರುವ ದೋಷಗಳನ್ನು ಸರಿಪಡಿಸಿ ನೂತನ ಪಠ್ಯ ಪೂರೈಸಬೇಕು. ರಾಷ್ಟ್ರಕವಿ ಕುವೆಂಪು ಅವರ ಕುರಿತು ಮತ್ತು ನಾಡಗೀತೆ ಬಗ್ಗೆ ಅವಹೇಳನಕಾರಿಯಾಗಿ ವಿಷಯ ಸೇರಿಸಿರುವುದು ನಿಜಕ್ಕೂ ಅಕ್ಷಮ್ಯ ಮತ್ತು ಖಂಡನೀಯ. ಸತ್ಯಕ್ಕೆ ದೂರವಾದ ವಿಷಯಗಳನ್ನು ತೆಗೆದು ಹಾಕಿ ನೈಜ ಸಂಗತಿಗಳನ್ನು ಸೇರಿಸಿ ಪಠ್ಯಗಳ ಮರು ಮುದ್ರಣ ಗೊಳಸಬೇಕೆಂದು ಆಗ್ರಹಿಸಿದರು.
ಹತ್ತರಗಿ ಕಾರಿಮಠದ ಗುರುಸಿದ್ದೇಶ್ವರ ಸ್ವಾಮಿಗಳು, ಪ್ರೋ|ಎಸ್.ವೈ.ಹಂಜಿ ಮಾತನಾಡಿದರು. ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮಿಗಳು, ಘೋಡಗೇರಿಯ ಕಾಶೀನಾಥ ಶ್ರೀಗಳು, ಉ.ಖಾನಾಪೂರ ಸಿದ್ದೇಶ್ವರ ಶಿವಾಚಾರ್ಯರು, ಬೆಲ್ಲದ ಬಾಗೇವಾಡಿಯ ಶಿವಾನಂದ ಸ್ವಾಮಿಗಳು, ಯಮಕನಮರ್ಡಿ ಹುಣಸಿಕೊಳ್ಳಮಠ ಗುರುರಾಚೋಟಿ ಸ್ವಾಮಿಗಳು, ಯರನಾಳದ ಗುರುಬ್ರಹ್ಮಾನಂದ ಶ್ರೀಗಳು, ವಿಜಯ ರವದಿ, ವೃಷಭ ಪಾಟೀಲ, ಸದಾನಂದ ಕರಾಳೆ, ಗುರು ಪಾಟೀಲ, ಚಂದು ಗಂಗನ್ನವರ, ದಿಲೀಪ ಹೊಸಮನಿ, ಸುನೀಲ ಪರ್ವತರಾವ, ಮಲ್ಲಿಕಾರ್ಜುನ ತೇರಣಿ, ಸುರೇಶ ಗಿಡಕತ್ತಿ, ಅಶೋಕ ಬೆಲ್ಲದ, ಕೆಂಪಣ್ಣಾ ಉರಬಿನಟ್ಟಿ, ಮಹಾಂತೇಶ ಮಗದುಮ್ಮ, ಮಹೇಶ ಕಾಡಗಿ, ಸಂತೋಷ ಮುಡಸಿ, ತಮ್ಮಣಗೌಡ ಪಾಟೀಲ, ಭೀಮಗೌಡ ಪಾಟೀಲ, ರಾಜು ಮುಗಳಿ ಸೇರಿದಂತೆ ತಾಲೂಕಿನ ಎಲ್ಲ ಲಿಂಗಾಯತ ಸಂಘಟನೆಗಳ ಕಾರ್ಯಕರ್ತರು, ಬಸವ ಅಭಿಮಾನಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.