Assembly Session: ನೀವೊಬ್ಬರೇ ಗೆದ್ದು ಬಂದವರಾ: ಆಶೋಕ್‌ಗೆ ಸಿಎಂ ತಿರುಗೇಟು
ನಿಮ್ಮಂತೆ ನಾವೂ ನಡೆಸಿಕೊಳ್ಳ ಬೇಕಾಗುತ್ತದೆ: ಅಶೋಕ್
Team Udayavani, Dec 14, 2024, 12:24 AM IST
ಬೆಳಗಾವಿ: ವಕ್ಫ್ ಆಸ್ತಿ ವಿಚಾರ ಕುರಿತು ನಿಯಮ 69ರ ಅಡಿ ವಿಷಯ ಮಂಡಿಸಲು ವಿಪಕ್ಷ ನಾಯಕ ಆರ್. ಅಶೋಕ್ ಮುಂದಾದರೆ, ಆಡಳಿತ ಪಕ್ಷದ ಸದಸ್ಯರು ನೆರೆಹಾವಳಿ ಸಂಬಂಧ ಸ್ಪಷ್ಟೀಕರಣ ಕೇಳಲು ಮುಂದಾದರು. ಆಗ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯಿತು.
ತುರ್ತು ವಿಚಾರ ವಾಗಿದ್ದು 4 ದಿನವಾದರೂ ಅವಕಾಶ ನೀಡುತ್ತಿಲ್ಲ. ವಕ್ಫ್ ವಿಚಾರದ ಬಗ್ಗೆ ಚರ್ಚಿಸಲು ಪದೇ ಪದೆ ಅಡ್ಡಿಪಡಿಸುತ್ತಿದ್ದೀರಿ. ನೀವು ಅಲ್ಲಿ ಶಾಶ್ವತವಾಗಿ ಇರುವುದಿಲ್ಲ. ಮತ್ತೆ ವಿಪಕ್ಷ ಸ್ಥಾನಕ್ಕೆ ಬರಲೇಬೇಕು. ಆಗ ನಿಮ್ಮನ್ನು ನಾವೂ ಇದೇ ರೀತಿ ನಡೆಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಗ ಸಿದ್ದರಾಮಯ್ಯ, ನೀವೊಬ್ಬರೇನಾ ಇಲ್ಲಿ ಗೆದ್ದು ಬಂದಿದ್ದು? ಕಾಂಗ್ರೆಸ್ ಸದಸ್ಯರೂ ನಿಮ್ಮಂತೆ ಗೆದ್ದುಬಂದಿದ್ದಾರೆ. ನೀವು ಹೇಳಿದಂತೆ ಕೇಳಲು ಆಗುವುದಿಲ್ಲ ಎಂದು ಗುಡುಗಿದರು. ಇದಕ್ಕೆ ಅಶೋಕ್ ತಿರುಗೇಟು ನೀಡಿ, ನೀವು ಹೇಳಿದ್ದನ್ನು ಕೇಳಿಕೊಂಡು ಹೋಗಲು ನಾವು ಇಲ್ಲಿಗೆ ಬಂದಿಲ್ಲ. ನಿಮ್ಮಂತೆಯೇ ನಾವೂ ಬಾಗಿಲು ಮುರಿದು ಚರ್ಚೆಗೆ ಅವಕಾಶ ಕೊಡಿ ಅಂತ ಕೇಳಬೇಕಾ? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Santosh Lad: ಒನ್ ನೇಶನ್ ಒನ್ ಎಲೆಕ್ಷನ್, ನೆಹರೂ ಕಾಲದಲ್ಲೇ ವಿಫಲ
Priyank Kharge: ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ ಸಿಎಂ ಗಮನಕ್ಕೆ
Assembly Session: ಭೂ ಕುಸಿತ ತಡೆಯಲು ಶಾಶ್ವತ ಯೋಜನೆ; 6 ಜಿಲ್ಲೆಗಳ 863 ಗ್ರಾ.ಪಂ. ಗುರುತು
Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್
Priyank Kharge: ಮಾಣಿಪ್ಪಾಡಿ ಬಾಯಿ ಮುಚ್ಚಿಸಲು 150 ಕೋಟಿ ರೂ. ಆಮಿಷ ಒಡ್ಡಿದ್ದ ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.