ಅಪಹೃತ ಮಗು ಪತ್ತೆ-ಐವರ ಸೆರೆ
Team Udayavani, Feb 12, 2021, 2:37 PM IST
ಅಥಣಿ: ಇತ್ತಿಚೇಗೆ ಸಂಕೊನಟ್ಟಿ ಗ್ರಾಮದಲ್ಲಿ ಮಗು ಕಳ್ಳತನವಾದ ಪ್ರಕರಣವನ್ನು ಅಥಣಿ ಪೊಲೀಸರು ಭೇದಿಸಿದ್ದು, ಗುರುವಾರ ಮಗುವನ್ನು ವಶಕ್ಕೆ ಪಡೆದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಮಗುವನ್ನು ಮಕ್ಕಳಿಲ್ಲದ ದಂಪತಿಗೆ ಎರಡು ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು. ಸಂಕೋನಟ್ಟಿ ಗ್ರಾಮದ ಸದಾಶಿವ ಪಾರ್ಕ ಹತ್ತಿರ ಜೋಪಡಿಯಲ್ಲಿ ವಾಸಿಸುವ ಎರಡು ವರ್ಷ ಯಲ್ಲಪ್ಪ ಬಹುರೂಪಿ ಎಂಬ ಮಗುವನ್ನು ಫೆ. 6 ರಂದು ಅಪಹರಿಸಲಾಗಿತ್ತು.
ಮಹಾರಾಷ್ಟ್ರದ ದಂಪತಿಯೊಬ್ಬರು ತಮಗೆ ಮಕ್ಕಳಿಲ್ಲವೆಂದು ಹೇಳಿದಾಗ ಆರೋಪಿಗಳಾದ ಪ್ರಶಾಂತ , ಜ್ಯೋತಿಬಾ, ಅನಿಲ, ಜಂಬುಸಾಗರ, ಕುಮಾರ ಎನ್ನುವ ಐವರು ಅನಾಥಾಶ್ರಮದಿಂದ ಮಗುವನ್ನು ತಂದುಕೊಡುವುದಾಗಿ ಹೇಳಿ 2 ಲಕ್ಷ ರೂ. ಪಡೆದು ಸಂಕೋನಟ್ಟಿ ಗ್ರಾಮದ ಮಗುವನ್ನು ಅಪಹರಿಸಿ ಆ ದಂಪತಿಗೆ ನೀಡಿದ್ದರು.
ಪೊಲೀಸರು ಆರೋಪಿಗಳಿಂದ 60 ಸಾವಿರ ರೂ. ನಗದು ಹಾಗೂ ಎರ್ಟಿಗಾ ಮತ್ತು ಸ್ವಿಫ್ಟ್ ಕಾರು ವಶಪಡಿಸಿಕೊಂಡಿದ್ದಾರೆ. ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ :ಶ್ರೀಗಂಧ ಸಾಗಾಟ: ಇಬ್ಬರ ಸೆರೆ
ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಅಧೀಕ್ಷಕ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ, ಡಿಎಸ್ಪಿ ಎಸ್.ವಿ.ಗಿರೀಶ ಹಾಗೂ ಸಿಪಿಐ ಶಂಕರಗೌಡ ಬಸನಗೌಡರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಕುಮಾರ ಹಾಡಕರ, ಶಿವರಾಜ ನಾಯೊRಡಿ, ಹಣಮಂತ ಧರ್ಮಟ್ಟಿ, ಸಿಬ್ಬಂದಿ ಎ.ಎ. ಈರಕರ, ಪಿ.ಬಿ. ನಾಯಕ , ಪಿ.ಎನ್.ಕುರಿ, ಬಿ.ವೈ. ಮನ್ನಾಪುರೆ, ಜಿ.ಎಚ್, ಹೊನವಾಡ, ಆರ್.ಸಿ ಹಾದಿಮನಿ, ಕೆ.ಬಿ. ಶಿರಗೂರ, ಶಿವಕುಮಾರ ದೊಡಮನಿ, ಎಸ್.ಬಿ. ಪಾಟೀಲ, ಸಂಜು ಮಾಳವಗೋಳ,ರೇಣುಕಾ ಮಾದರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.