ಮುಸ್ಲಿಂ ನಾಯಕರ ಬೆಳವಣಿಗೆ ಬಯಸದ ಕಾಂಗ್ರೆಸ್ : ಅಸಾದುದ್ದೀನ್ ಓವೈಸಿ
Team Udayavani, Aug 31, 2021, 1:30 PM IST
ಬೆಳಗಾವಿ: ಮುಸ್ಲಿಂ ನಾಯಕರು ಬೆಳೆಯಬಾರದು ಅಂತ ಕಾಂಗ್ರೆಸ್ ಬಯಸುತ್ತಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಮುಸ್ಲಿಂರಿಗೆ ಅಧಿಕಾರದ ಹಕ್ಕು ಸಿಗಬೇಕು. ಅದಕ್ಕಾಗಿ ಚುನಾವಣೆ ಎದುರಿಸಿ ಗೆಲ್ಲಬೇಕು ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಂಸತ್‌ನಲ್ಲಿ ಬಹಳಷ್ಟು ಕಾನೂನುಗಳಿಗೆ ಕಾಂಗ್ರೆಸ್ ಬೆಂಬಲಿಸುತ್ತದೆ. ಬಿಜೆಪಿಗೆ ಪ್ರತಿಯೊಂದು ಕಾನೂನು ರಚಿಸಲು ಕಾಂಗ್ರೆಸ್ ಪರೋಕ್ಷವಾಗಿ ಸಾಥ್ ಕೊಡುತ್ತಿದೆ. ಸಂಸತ್‌ನಲ್ಲಿ ಅನೇಕ ಸಲ ವಿರೋಧಿಸಿದ್ದೇನೆ. ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಹಕ್ಕಿದೆ. ಬೆಲೆ ಏರಿಕೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂರು ರಾಜಕೀಯ ಹಕ್ಕು ಪಡೆದಾಗ ದೇಶ ಶಕ್ತಿಶಾಲಿಯಾಗಲಿದೆ. ದೇಶದಲ್ಲಿ ಮುಸ್ಲಿಂ ನಾಯಕರು ಯಾರಿದ್ದಾರೆ ಹೇಳಲಿ, ನಾನಂತೂ ಗಲ್ಲಿ ಲೀಡರ್. ನಾನು ಬೇಡ, ನನ್ನ ಬಿಟ್ಟು ಬೇರೆ ಯಾರು ಇದ್ದಾರೆ ಹೇಳಲಿ. ಮುಸ್ಲಿಂರನ್ನು ಹೊರತು ಪಡಿಸಿ ಎಲ್ಲ ಜಾತಿಯ ನಾಯಕರು ಇದ್ದಾರೆ. ಸಿದ್ದರಾಮಯ್ಯ ಕುರುಬ, ಯಡಿಯೂರಪ್ಪ ಲಿಂಗಾಯತ, ಡಿ.ಕೆ. ಶಿಕುಮಾರ ಒಕ್ಕಲಿಗ ಸಮುದಾಯದ ನಾಯಕರು ಇದ್ದಾರೆ. ಯಾಕೆ ಮುಸ್ಲಿಂ ಸಮುದಾಯದವರು ಇಲ್ಲ ಎಂದರು.
ಅಜಮ್ ಖಾನ್ ಆದಷ್ಟು ಬೇಗ ಬಿಡುಗಡೆ ಆಗಲಿ. ಅವರ ಎಲ್ಲಾ ಸಂಕಷ್ಟಗಳು ಬೇಗ ಪರಿಹಾರವಾಗಲಿ. ದೇಶದಲ್ಲಿ ಮುಸ್ಲಿಂರ ಪರಿಸ್ಥಿತಿ ಬ್ಯಾಂಡ್ ಬಾಜಾ ಅವರಂತೆ ಆಗಿದೆ. ಮದುಮಗ ಒಳಗೆ ಹೋಗುವವರೆಗೆ ಬ್ಯಾಂಡ್ ಬಾಜಾದವರು ಬರುತ್ತಾರೆ. ಮದುಮಗ ಒಳಗೆ ಹೋದರೆ ಬ್ಯಾಂಡ್ ಬಾಜಾದವರು ಹೊರಗೆ ಸೆ„ಡ್‌ನಲ್ಲಿ ಉಳಿದು ಬಿಡುತ್ತಾರೆ ಎಂದರು.
ನನ್ನ ಮೇಲೆ, ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ಹಾಕಬೇಕು. ಬೆಳಗಾವಿ ಪಾಲಿಕೆ ಗೆಲ್ಲುವುದೇ ನಮ್ಮ ರಣತಂತ್ರ ಜನರ ವಿಶ್ವಾಸ, ಪ್ರೀತಿ ಗಳಿಸುವುದಾಗಿದೆ. ತಳಮಟ್ಟದಲ್ಲಿ ಪಕ್ಷ ಗಟ್ಟಿ ಮಾಡುವುದೇ ನಮ್ಮ ಅಜೆಂಡಾ ಇದೆ ಎಂದರು.
ಜೆಡಿಎಸ್ ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವು. ಹೀಗಾಗಿ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ. ಜೆಡಿಎಸ್-ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ತಪ್ಪು ಮಾಡಿದ್ದು, ಆನಂತರ ನಮಗೆ ಮನವರಿಕೆ ಆಯಿತು. ಆಗ ಕುಮಾರಸ್ವಾಮಿ ನನಗೆ ಕರೆ ಮಾಡಿ ಪ್ರಮಾಣ ವಚನಕ್ಕೆ ಬರಲು ಆಹ್ವಾನಿಸಿದ್ದರು. ನೀವು ಬಹಳ ದೊಡ್ಡ ತಪ್ಪು ಮಾಡಿದ್ದೀರಿ ಅಂತ ಆಗಲೇ ತಿರುಗೇಟು ನೀಡಿದ್ದೇನೆ. ಹೀಗಾಗಿಯೇ ನಾವು ಪಾಲಿಕೆಯಲ್ಲಿ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದರು.
ಒವೈಸಿ ಬಿಜೆಪಿಯ ಬಿ ಟೀಮ್ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಓವೈಸಿ, ರಾಹುಲ್ ಗಾಂಧಿಯನ್ನು ಅಮೇಥಿ ಕ್ಷೇತ್ರದಲ್ಲಿ ನಾನೇ ಸೋಲಿಸಿದೆ. ಆ ಬಳಿಕ ರಾಹುಲ್ ಗಾಂಧಿ ವೈನಾಡಿನಲ್ಲಿ ಗೆದ್ದರು. ಕಾಂಗ್ರೆಸ್‌ನ ಶಾಸಕರು ಹೋಗಿ ಬಿಜೆಪಿ ತೊಡೆ ಮೇಲೆ ಕುಳಿತರೆ ಇದಕ್ಕೂ ನಾನೇ ಕಾರಣನಾ ಎಂದು ಪ್ರಶ್ನಿಸಿದರು. ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, ನನಗೂ ಅಫ್ಘಾನಿಸ್ತಾನಕ್ಕೆ ಸಂಬಂಧವೇ ಇಲ್ಲ. ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎನ್ನುವುದನ್ನು ಮೋದಿಯವರನ್ನು ಕೇಳಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
Bangladesh: ಹಿಂದೂ ಸನ್ಯಾಸಿ ಚಿನ್ಮಯಿ ದಾಸ್ ಜಾಮೀನು ಅರ್ಜಿ ವಜಾಗೊಳಿಸಿದ ಅರ್ಜಿ!
Delhi: ಕೇಜ್ರಿವಾಲ್ ಚುನಾವಣೆಯಲ್ಲಿ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಬಿಜೆಪಿ ವಾಗ್ದಾಳಿ
Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.