ಅಥಣಿ: ಪಶು ಮಹಾವಿದ್ಯಾಲಯಕ್ಕೆ ಉದ್ಘಾಟನೆ ಭಾಗ್ಯ
Team Udayavani, Aug 7, 2023, 6:38 PM IST
ಅಥಣಿ: ಈ ಭಾಗದ ರೈತರ ಮಕ್ಕಳಿಗೂ ಒಳ್ಳೆ ವಿದ್ಯಾಭ್ಯಾಸ ದೋರಕಲಿ ಎಂಬ ಉದ್ದೇಶದಿಂದ ಮಾಜಿ ಉಪಮುಖ್ಯಮಂತ್ರಿ ಶಾಸಕ ಲಕ್ಷ್ಮಣ ಸವದಿಯವರ ಕನಸಿನ ಕೂಸಾದ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಒಲಿದು ಬಂದ ಉದ್ಘಾಟನಾ ಭಾಗ್ಯ. ಆಗಸ್ಟ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಆಗಬೇಕಾದ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಗ್ರಾಮೀಣ ಪ್ರದೇಶಕ್ಕೆ ತರುವ ಮೂಲಕ ಹೊಸ
ಇತಿಹಾಸವನ್ನು ಬರೆದ ಲಕ್ಷ ¾ಣ ಸವದಿಯವರು ಈ ಮಹಾವಿದ್ಯಾಲಯ ನಿರ್ಮಾಣವಾದರೆ ಈ ಭಾಗದ ರೈತರ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಕಲೆಯಬಹುದೆಂದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಮೇಲೆ ಒತ್ತಡ ತಂದು ಅಥಣಿ ತಾಲೂಕಿನಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಕ್ಕೆ ಕಾರಣೀಭೂತರಾದರು.
ಮೂರು ಹಂತದಲ್ಲಿ 80 ಕೋಟಿ ರೂಗಳ ಅನುದಾನದಲ್ಲಿ ಸೆಪ್ಟೆಂಬರ್ 2015ರಲ್ಲಿ ಮೂದಲ ಹಂತ, 2019 ಎರಡನೇ ಹಂತ, ಮೂರನೇ ಹಂತ 2022, ನಾಲ್ಕನೇ ಹಂತ 24ರಲ್ಲಿ ನಿರ್ಮಾಣಗೊಂಡ ಪಶುವೈದ್ಯಕೀಯ ಮಹಾವಿದ್ಯಾಲಯ ಪೂರ್ಣಗೊಳ್ಳಲಿದೆ. ಸುಮಾರು ಒಂಬತ್ತು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿರುವ ಪಶು
ವೈದ್ಯಕೀಯ ಮಹಾವಿದ್ಯಾಲಯಕ್ಕೆ 9 ವರ್ಷಗಳ ನಂತರ ಉದ್ಘಾಟನೆಗೆ ಸಿದ್ಧವಾಗಿದೆ. ಇದರಿಂದ ತಾಲೂಕಿನ ರೈತರ ಮೋಗದಲ್ಲಿ ಮಂದಹಾಸ ಮೂಡಿದೆ.
ಆಗಿನ ಬಿಜೆಪಿ ಪಕ್ಷದ ಶಾಸಕ ಹಾಗೂ ಸಚಿವರಾಗಿದ್ದ ಲಕ್ಷ್ಮಣ ಸವದಿಯವರ ಪ್ರಯತ್ನದಿಂದಾಗಿ ಕೋಕಟನೂರ ಗ್ರಾಮದ ಹೋರವಲಯದಲ್ಲಿ ಸುಮಾರು 250 ಎಕರೆ ಜಾಗದಲ್ಲಿ 80 ಕೋಟಿ ರೂಗೂ ಮೇಲ್ಪಟ್ಟು ಅನುದಾನದಲ್ಲಿ ಪಶು ವೈದ್ಯಕೀಯ
ಮಹಾವಿದ್ಯಾಲಯದ ನಿಮಾರ್ಣಗೊಂಡಿತು.
ಆದರೆ ಅನಿವಾರ್ಯ ಕಾರಣಗಳಿಂದ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಉದ್ಘಾಟನಾ ಭಾಗ್ಯವೇ ಬರಲಿಲ್ಲ, ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಸರಿಯಾಗಿ ಸ್ಪಂದಿಸದೇ ಉದ್ಘಾಟನೆಯನ್ನು ತಡೆ ಹಿಡಿಯಿತು ಎಂದು ಆರೋಪಗಳು ಕೇಳಿ ಬಂದವು. ನಂತರ ಲಕ್ಷ್ಮಣ ಸವದಿಯವರು 2018ರಲ್ಲಿ ಚುನಾವಣೆಯಲ್ಲಿ ಸೋಲನ್ನು ಕಂಡ ನಂತರ ಕಾಮಗಾರಿ ನನೆಗುದಿಗೆ ಬಿದ್ದಿತು.
ಈ ಭಾಗದ ರೈತರ ಮಕ್ಕಳ ಭವಿಷ್ಯದ ಕನಾಸಾದ ಪಶುವೈದ್ಯಕೀಯ ಮಹಾ ವಿದ್ಯಾಲಯ, ಬಹಳ ದಿನಗಳಿಂದ ಉದ್ಘಾಟನೆಗೊಳ್ಳದೆ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿತ್ತು. ಆದರೆ ಈಗ ಉದ್ಘಾಟನೆಗೆ ಸಿದ್ಧವಾಗಿದೆ.
ಲಕ್ಷ್ಮಣ ಸವದಿ, ಶಾಸಕ
ವಿಜಯಕುಮಾರ ಅಡಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
Belagavi: ಎಂಇಎಸ್ ಕಾರ್ಯಕರ್ತರ ಪುಂಡಾಟ
Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ
Belagavi; ಎಂಇಎಸ್ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್ ಜಾರಕಿಹೊಳಿ
ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
MUST WATCH
ಹೊಸ ಸೇರ್ಪಡೆ
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
Jammu Kashmir: ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.