ಅಥಣಿ ಜನತೆ ಜಾಗೃತರಾಗಿರಿ: ಸವದಿ
Team Udayavani, Apr 26, 2020, 5:10 PM IST
ಅಥಣಿ: ನಮ್ಮ ಅಥಣಿ ತಾಲೂಕು ಜನರು ಜಾಗ್ರತರಾಗಿರಬೇಕು. ಇಲ್ಲಿಯವರು ಹೊರಗೆ ಹೊಗಬೇಡಿ. ಹೊರಗಿನವರು ಯಾರಾದರೂ ಬಂದರೆ ತಕ್ಷಣ ತಾಲೂಕು ಆಡಳಿತಕ್ಕೆ ತಿಳಿಸಬೇಕೆಂದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಧ್ಯಮದ ಮೂಲಕ ಜನರಿಗೆ ಕೇಳಿಕೊಂಡಿದ್ದಾರೆ.
ಇಂದು ಆರೋಗ್ಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾಲೂಕು ಪಕ್ಕದಲ್ಲಿ ಮಹಾರಾಷ್ಟ್ರ ಇದೆ. ಅದರಂತೆ ರಾಯಭಾಗ ತಾಲೂಕು, ವಿಜಯಪೂರ, ಬಾಗಲಕೋಟಿ ಜಿಲ್ಲೆ ಎಲ್ಲ ಸೀಮೆಗಳು ತಮ್ಮ ತಾಲೂಕಿಗೆ ಹತ್ತಿರ ಇವೆ. ಅಲ್ಲೆಲ್ಲ ಕೋವಿಡ್ 19 ಸೋಂಕಿತರು ಇರುವದರಿಂದ ನಾವು ಜಾಗೃತರಾಗಿರಬೇಕಿದೆ. ಸುದೈವದಿಂದ ನಮ್ಮ ತಾಲೂಕಿನಲ್ಲಿ ಒಂದೂ ಕೋವಿಡ್ 19 ಸೋಂಕಿತರಿಲ್ಲ. ಈ ಪರಿಸ್ಥಿತಿ ಹೀಗೆಯೇ ಮುಂದುವರಿಯಬೇಕಾದರೆ ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು. ಸರಕಾರ ಮಾಡುವ ಕೆಲಸಕ್ಕೆ ಜನರು ಕೈಜೊಡಿಸಬೇಕು ಎಂದು ಹೇಳಿದರು.
ಸಂಚಾರಿ ದವಾಖಾನೆ ಉದ್ಘಾಟನೆ: ಸಾರಿಗೆ ಇಲಾಖೆಯಿಂದ 4 ಸಂಚಾರಿ ದವಾಖಾನೆ ಆರಂಭಿಸಲಾಗಿದೆ. ಸೀಲ್ ಡೌನ್, ಲಾಕ್ ಡೌನ್ ಪ್ರದೇಶಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಸಂಚಾರಿ ದವಾಖಾನೆ ಕೆಲಸ ಮಾಡುತ್ತದೆ. ಅವಶ್ಯ ಬಿದ್ದರೆ ಇನ್ನೂ ಹೆಚ್ಚು ಸಂಚಾರಿ ದವಾಖಾನೆ ಆರಂಭಿಸಲಾಗುವುದು ಎಂದು ಹೇಳಿದರು.
ಲಾಕಡೌನ್ ತೆರವು: ಸರಕಾರ ಮಾಡಿರುವ ಈಗಿನ ಸಡಲಿಕೆ ರೇಡ್ ಝೋನ್, ಸೀಲ್ ಡೌನ್ ಏರಿಯಾ, ಬಫರ್ ಜೋನ್‌ಗಳಿಗೆ ಅನ್ವಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಇಂದಿನಿಂದ “ಉತ್ತರ’ ಅಧಿವೇಶನ; 3 ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ
Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು
Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ
Belagavi: ಹೋರಾಟ ಅಸಂವಿಧಾನಿಕ ಎಂದು ಸಮಾಜಕ್ಕೆ ಅವಮಾನ ಮಾಡಿದ ಸಿಎಂ: ಕೂಡಲಸಂಗಮ ಶ್ರೀ
Santosh Lad: ಒನ್ ನೇಶನ್ ಒನ್ ಎಲೆಕ್ಷನ್, ನೆಹರೂ ಕಾಲದಲ್ಲೇ ವಿಫಲ
MUST WATCH
ಹೊಸ ಸೇರ್ಪಡೆ
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Sandalwood: ‘ಕುಲದಲ್ಲಿ ಕೀಳ್ಯಾವುದೋ’ ಆಡಿಯೋ ಮಾರಾಟ
Darshan: ಜಾಮೀನು ಹಿನ್ನೆಲೆ: ಮತ್ತೆ ಕೋರ್ಟ್‌ಗೆ ಹಾಜರಾದ ದರ್ಶನ್
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.