![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 10, 2019, 9:23 AM IST
ಬೆಳಗಾವಿ: ಬೇಸಿಗೆ ಮುಗಿದು ಮಳೆಗಾಲಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಸಸ್ಯಗಳಿಗೆ ಭಾರೀ ಬೇಡಿಕೆ. 21 ದಿನಗಳ ಕಾಲ ನಗರದ ಹ್ಯೂಂ ಪಾರ್ಕ್‌ನಲ್ಲಿ ನಡೆಯಲಿರುವ ಸಸ್ಯ ಸಂತೆಗೆ ರವಿವಾರ ಚಾಲನೆ ಸಿಕ್ಕಿದ್ದು, ವಿವಿಧ ಸಸ್ಯಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.
ತೋಟಗಾರಿಕೆ ಇಲಾಖೆ ಹಾಗೂ ಜಿಪಂ ವತಿಯಿಂದ ರವಿವಾರದಿಂದ ಆರಂಭಗೊಂಡಿರುವ ಸಸ್ಯ ಸಂತೆ ಹಾಗೂ ತೋಟಗಾರಿಕಾ ಅಭಿಯಾನ ಜೂ. 30ರ ವರೆಗೆ ನಡೆಯಲಿದೆ. ವಿವಿಧ ಬಗೆಯ ಸಸ್ಯಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಮೊದಲ ದಿನ ಅಷ್ಟೊಂದು ಬೇಡಿಕೆ ಇರದಿದ್ದರೂ ಮಳೆಗಾಲ ಆರಂಬವಾಗುತ್ತಿದ್ದಂತೆ ಈ ಸಸ್ಯಗಳಿಗೆ ಬೇಡಿಕೆ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.
ಜಿಲ್ಲೆಯ 28 ತೋಟಗಾರಿಕಾ ಕ್ಷೇತ್ರಗಳಲ್ಲಿ ಸುಮಾರು 3.73 ಲಕ್ಷಕ್ಕೂ ಹೆಚ್ಚು ಸಸ್ಯಗಳು ಇಲ್ಲಿ ಸಿದ್ಧಗೊಂಡಿವೆ. ಸದ್ಯ 8 ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ಹ್ಯೂಂ ಪಾರ್ಕ್‌ನಲ್ಲಿ ಇಡಲಾಗಿದೆ. ಮಾವು, ತೆಂಗು, ಪಾಮ್, ಕರಿ ಬೇವು, ಮೆಣಸಿನಕಾಯಿ, ಬದನೆಕಾಯಿ, ನೇರಳೆ, ನಿಂಬೆ , ಹುಣಸೆ, ಸೀತಾಫಲ ಸೇರಿದಂತೆ ವಿವಿಧ ಬಗೆಯ ಸಸ್ಯಗಳು ಇಲ್ಲಿ ಲಭ್ಯ ಇವೆ ಎಂದು ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ ಮಾಹಿತಿ ನೀಡಿದರು.
ಇನ್ನು ಮುಂದಿನ 2-3 ದಿನಗಳಲ್ಲಿ ಜನರಿಗೆ ಹತ್ತಿರವಾಗಲಿ ಎಂಬ ಉದ್ದೇಶದಿಂದ ಬಸ್ ನಿಲ್ದಾಣ ಹಾಗೂ ದಕ್ಷಿಣ ಕ್ಷೇತ್ರದ ಆರ್‌ಪಿಡಿ ಕ್ರಾಸ್ ಬಳಿ ಸಸ್ಯ ಸಂತೆ ನಡೆಸಲಾಗುವುದು. ಇದರಿಂದ ಜನರಿಗೆ ಸಸ್ಯ ಖರೀದಿಸಲು ಅನುಕೂಲವಾಗುತ್ತದೆ ಎಂದು ರವೀಂದ್ರ ಹಕಾಟಿ ತಿಳಿಸಿದರು.
ತೋಟಗಾರಿಕೆ ಇಲಾಖೆಯಡಿ ಅಲಂಕಾರಿಕ ಹಾಗೂ ತರಕಾರಿ ಸಸ್ಯಗಳೂ ಇವೆ. ಸದ್ಯ 3,73,189 ಸಸ್ಯಗಳನ್ನು ಸಿದ್ಧ ಮಾಡಿಕೊಳ್ಳಲಾಗಿದ್ದು, ಈ ಪೈಕಿ 1.18 ಲಕ್ಷ ನುಗ್ಗೆ ಹಾಗೂ ಇತರೆ ತರಕಾರಿ ಸಸ್ಯಗಳು ಲಭ್ಯ ಇವೆ. 62,088 ಮಾವು ಸಸ್ಯ, 69,794 ಅಲಂಕಾರಿಕ ಹಾಗೂ ಹಲಸು ಸಸ್ಯಗಳು, 33161 ಸಪೋಟ ಸಸ್ಯ, 20,954 ಸೀಬೆ ಸಸ್ಯ, 33,505 ನಿಂಬೆ ಸಸ್ಯ, 22,439 ಕರಿಬೇವು ಸಸ್ಯಗಳನ್ನು ಜಿಲ್ಲೆಯಾದ್ಯಂತ ತೋಟಗಾರಿಕೆ ಇಲಾಖೆಯ ವಿವಿಧ ಕ್ಷೇತ್ರಗಳಲ್ಲಿ ಲಭ್ಯ ಇವೆ ಎಂದು ಹಕಾಟೆ ಅವರು ವಿವರ ನೀಡಿದರು.
ಆಪೂಸ್ ಮಾವು ಸಸ್ಯಕ್ಕೆ 32 ರೂ., ಮೆಣಸಿನಕಾಯಿ ಹಾಗೂ ಬದನೆಕಾಯಿ ಸಸ್ಯಕ್ಕೆ ತಲಾ ಒಂದು ರೂ., ಪೇರಲ ಸಸ್ಯ 35 ರೂ., ಕರಿಬೇವು ಸಸ್ಯ 12 ರೂ., ಮಾವು ಮಲ್ಲಿಕಾ ತಳಿ 32 ರೂ., ನೇರಳೆ ಸಸ್ಯ 30 ರೂ., ಸೀತಾಫಲ ಸಸ್ಯ 28 ರೂ., ಪಾಮ್ 28 ರೂ., ಬಾಟಲ್ ಪಾಮ್ 150 ರೂ., ಅಲಂಕಾರಿಕ ಸಸ್ಯಗಳಿಗೆ 20, 30, 40, 50 ರೂ. ಹೀಗೆ ದರ ನಿಗದಿ ಪಡಿಸಲಾಗಿದೆ.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.