ಪ್ರಾಧಿಕಾರಗಳು ಹಣ ಕಬಳಿಸುವ ಕೇಂದ್ರ: ಅನಂತಕುಮಾರ ಹೆಗಡೆ
Team Udayavani, Oct 23, 2019, 10:58 PM IST
ಚನ್ನಮ್ಮನ ಕಿತ್ತೂರು:ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಬಹುತೇಕ ಎಲ್ಲ ಪ್ರಾಧಿಕಾರಗಳೂ ಹಣ ಕಬಳಿಸುವ ಹಾಗೂ ಲೂಟಿ ಹೊಡೆಯುವ ಕೇಂದ್ರಗಳು ಎಂದು ಕೇಂದ್ರ ಮಾಜಿ ಸಚಿವ, ಕೆನರಾ ಸಂಸದ ಅನಂತಕುಮಾರ ಹೆಗಡೆ ಗಂಭೀರ ಆರೋಪ ಮಾಡಿದರು.
ಕಿತ್ತೂರು ಉತ್ಸವದಲ್ಲಿ ಮಾತನಾಡಿದ ಅವರು, ಪ್ರಾ ಧಿಕಾರಗಳನ್ನು ಉದ್ಯಮದ ರೀತಿಯಲ್ಲಿ ಪರಿಗಣಿಸಿದರೆ ಹಣವನ್ನು ಸರ್ಕಾರದ ಬಳಿ ಕೇಳುವ ಪ್ರಮೇಯವೇ ಬರುವುದಿಲ್ಲ. ಸರ್ಕಾರ ನೀಡುವ ಹಣದಿಂದ ಮಾತ್ರ ಅಭಿವೃದ್ಧಿ ಆಗುವುದಿಲ್ಲ. ಇಂಥ ಅಭಿವೃದ್ಧಿ ಪ್ರಾ ಧಿಕಾರಗಳನ್ನು ಉದ್ಯಮವನ್ನಾಗಿ ಮಾರ್ಪಾಡು ಮಾಡಬೇಕು. ಹಾಗೆ ಮಾಡಿದರೆ ತಾನಾಗಿಯೇ ಹಣ ಹರಿದು ಬರುತ್ತದೆ ಎಂದರು.
ಉದ್ಯಮವಾಗಿ ಬದಲಾಯಿಸಲು ನೀತಿ ನಿಯಮಗಳ ಬದಲಾವಣೆ ಆಗಬೇಕು. ಪ್ರಾಧಿಕಾರಗಳನ್ನು ಸ್ವಾವಲಂಬಿಯಾಗಿಸಬೇಕು.ಇಷ್ಟೊಂದು ಅವಕಾಶಗಳು ಇಲ್ಲಿವೆ. ಕಿತ್ತೂರಿನಲ್ಲಿ ಪ್ರಾಧಿಕಾರಕ್ಕೆ ಉದ್ಯಮದ ಸ್ವರೂಪ ನೀಡಬೇಕಾಗಿದೆ. ಇದು ಕಿತ್ತೂರು ಕರ್ನಾಟಕದ ಕೇಂದ್ರ. ಉದ್ಯಮದ ಕಲ್ಪನೆ ಇದ್ದರೆ ಸಾಕಷ್ಟು ಅನುದಾನ ಬರುತ್ತದೆ ಎಂದರು.
ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರಕ್ಕೆ ಉದ್ಯಮದ ಸ್ವರೂಪ ನೀಡಿದರೆ ಬೆಳೆಯುವುದರಲ್ಲಿ ಸಂದೇಹವೇ ಇಲ್ಲ. ಹೊಸ ಉದ್ಯಮದ ಕಲ್ಪನೆಗೆ ಕಿತ್ತೂರು ಬಳಸಿಕೊಳ್ಳಬಹುದೇ ಎಂಬುದನ್ನು ಯೋಚಿಸಬೇಕಾಗಿದೆ. ಹೊಸ ಉದ್ಯಮಗಳನ್ನು ತಂದರೆ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಸರ್ಕಾರ ಕ್ರಿಯಾಶೀಲವಾಗಿ ಯೋಚನೆ ಮಾಡಿದರೆ ನಾವು ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ. ಕಿತ್ತೂರು ಇತಿಹಾಸದ ಅನಾವರಣ ಜನರ ಸಂಕಲ್ಪ, ಕನಸಿನೊಂದಿಗೆ ಆಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.