ಬಾಬಾಗೌಡ ಪಾಟೀಲರು ಸರಳ-ಸಜನಿಕೆ ಸಾಕಾರಮೂರ್ತಿ: ಸುತ್ತೂರು ಶ್ರೀ
ಸಾಮಾನ್ಯರಾಗಿದ್ದೂ ಸಮಾಜದಲ್ಲಿ ದೊಡ್ಡವರಾಗಲು ಸಾಧ್ಯ ಎಂಬುದನ್ನು ಪಾಟೀಲರು ತೋರಿಸಿಕೊಟ್ಟಿದ್ದಾರೆ
Team Udayavani, Jan 7, 2022, 4:23 PM IST
ಹಿರೇಬಾಗೇವಾಡಿ: ಸಾಮಾನ್ಯರಾಗಿದ್ದವರೇ ಯಾವತ್ತೂ ಸಮಾಜದಲ್ಲಿ ದೊಡ್ಡವರಾಗಲು ಸಾಧ್ಯ ಎಂಬುದಕ್ಕೆ ಬಾಬಾಗೌಡ ಪಾಟೀಲ ಉದಾಹರಣೆಯಾಗಿದ್ದಾರೆ ಎಂದು ಸುತ್ತೂರು ಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಗುರುವಾರ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ದಿ| ಬಾಬಾಗೌಡ ಪಾಟೀಲ ಅವರ ಪುತ್ಥಳಿ ಅನಾವರಣ ಮಾಡಿ ಅವರು ಮಾತನಾಡಿದರು. ವಿಧಾನಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿದ್ದ ಬಾಬಾಗೌಡ ಪಾಟೀಲರು ಹೇಗೆ ಸರಳ-ಸಜ್ಜನಿಕೆ ಜೀವನ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟವರು. ಬಹಳ ಜನರಿಗೆ ಇಂತಹ ವ್ಯಕ್ತಿಗಳು ಆದರ್ಶವಾಗುವುದಿಲ್ಲ. ಯಾಕೆಂದರೆ ಬಾಬಾಗೌಡ ಅಂತವರನ್ನು ಆದರ್ಶವಾಗಿ ಇಟ್ಟುಕೊಂಡರೆ ಜೀವನ ನಡೆಸುವುದು ಕಷ್ಟ ಎಂಬ ಭಾವನೆ ಇಟ್ಟುಕೊಂಡಿರುತ್ತಾರೆ.
ಆದರೆ ಸಾಮಾನ್ಯರಾಗಿದ್ದೂ ಸಮಾಜದಲ್ಲಿ ದೊಡ್ಡವರಾಗಲು ಸಾಧ್ಯ ಎಂಬುದನ್ನು ಪಾಟೀಲರು ತೋರಿಸಿಕೊಟ್ಟಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಗದಗ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ತೋಂಟದ ಡಾ| ಸಿದ್ದರಾಮ ಸ್ವಾಮೀಜಿ ಮಾತನಾಡಿ, ಬಾಬಾಗೌಡ ಪಾಟೀಲರಿಗೆ ರೈತರ ಕಲ್ಯಾಣವೇ ಮುಖ್ಯಧ್ಯೇಯವಾಗಿತ್ತು. ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಬಾಬಾಗೌಡರು ಬದುಕಿನುದ್ದಕ್ಕೂ ಮಾಡಿಕೊಂಡು ಬಂದಿದ್ದರು. ರೈತರನ್ನು ಸಂಘಟಿಸಿ, ರೈತರ ಪ್ರತಿನಿಧಿಯಾಗಿ ವಿಧಾನಸಭೆಯಲ್ಲಿ ರೈತರ ಧ್ವನಿಯಾಗಿದ್ದರು. ಕೇಂದ್ರ ಸಚಿವರಾಗಿ ಪ್ರಧಾನಮಂತ್ರಿ ಸಡಕ್ ಯೋಜನೆಯನ್ನು ತಂದು ರೈತರ ಹೊಲಗಳಿಗೆ
ಹೋಗಲು ರಸ್ತೆ ನಿರ್ಮಿಸಿಕೊಟ್ಟರು. ಬಾಬಾಗೌಡರನ್ನು ಸ್ಮರಿಸಿದರೆ ರೈತರಿಗೆ ಚೈತನ್ಯ ಬರುತ್ತದೆ ಎಂದರು.
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ರಾಜ್ಯದ ಎಲ್ಲ ಸ್ವಾಮೀಜಿಗಳು ಮುಂದಾಗಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ರಾಜ್ಯದಲ್ಲಿರುವ ಕೃಷಿ ವಿವಿಗಳ ಅಧ್ಯಯನ ಕೇಂದ್ರಗಳಿಗೆ ಬಾಬಾಗೌಡ ಪಾಟೀಲರ ಹೆಸರನ್ನಿಡಲು ಶಿಫಾರಸು ಮಾಡಬೇಕು ಎಂದು ಕರೆ ನೀಡಿದರು.
ಮುಂಡರಗಿ-ಬೈಲೂರ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿ, ದೇಶದ ಬೆನ್ನೆಲುಬಾಗಿ ರೈತರು ನಿಂತಿದ್ದರೆ, ರೈತರ ಹೋರಾಟದ ಬೆನ್ನೆಲುಬಾಗಿ ಎಲ್ಲ ಮಠಾಧಿಶರು ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ದೇವದಾಸಿ ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ್ರು ಬೆಳಕುರ್ಕಿ, ಕಬ್ಬು ಬೆಳಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ, ಪಚ್ಚೆ ನಂಜುಂಡಸ್ವಾಮಿ, ಶಿವಮೊಗ್ಗದ ರೈತ ಮುಖಂಡ ಕೆ.ಟಿ. ಗಂಗಾಧರ, ಸಂಯುಕ್ತ ಜನತಾದಳದ ಅಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿದರು.
ದಿ| ಬಾಬಾಗೌಡ ಪಾಟೀಲ ಅವರ ಕುಟುಂಬಸ್ಥರನ್ನು ಹಾಗೂ ರೈತ ಮುಖಂಡರನ್ನು ಸತ್ಕರಿಸಲಾಯಿತು. ಸುಮಿತ್ರಾ ಬಾಬಾಗೌಡ ಪಾಟೀಲ, ನೀಲಾಂಬಿಕಾ ಪಾಟೀಲ, ಈಶಪ್ರಭು ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯಿಕ, ಮಲ್ಲಿಕಾರ್ಜುನ ವಾಲಿ, ಸಿದ್ದನಗೌಡ್ರು ಪಾಟೀಲ, ಚೂನಪ್ಪ ಪೂಜಾರಿ, ಜಗನ್ನಾಥ ಚಿಲ್ಲಾಬಟ್ಟಿ, ನಿರ್ಮಲಕಾಂತ ಪಾಟೀಲ, ಬಾಬಾಸಾಹೇಬ ಪಾಟೀಲ, ರೋಹಿನಿ ಪಾಟೀಲ, ರಮೇಶ ಪಾಟೀಲ, ಜಗದೀಶ ಹಾರೂಗೊಪ್ಪ, ಮೋಹನ ಸಂಬರಗಿ, ರವೀಂದ್ರ ಪಟ್ಟಣಶೆಟ್ಟಿ, ಕೇಶವ ಯಾದವ, ವೈ.ಎಚ್. ಪಾಟೀಲ ಇನ್ನಿತರರಿದ್ದರು. ವಿವೇಕ ಕುರುಗುಂದ ನಿರೂಪಿಸಿದರು. ಡಾ| ಗಜಾನಂದ ಸೊಗಲನ್ನವರ ಸ್ವಾಗತಿಸಿ, ವಂದಿಸಿದರು.
ಬಾಬಾಗೌಡ ಪಾಟೀಲರು ಕೇವಲ ರೈತ ಸಂಘಟನೆ, ರೈತ ಪರ ಹೋರಾಟವನ್ನಷ್ಟೇ ಮಾಡದೆ ಸಮಾಜದಲ್ಲಿರುವ ಅನಿಷ್ಟ ಪದ್ದತಿಗಳನ್ನು ತಿದ್ದುವ ಕೆಲಸವನ್ನೂ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಅಖಂಡವಾಗಿ ಉಳಿಯಲು ಬಾಬಾಗೌಡರ ನಿಲುವು ಪ್ರಮುಖ ಪಾತ್ರ ವಹಿಸಿದೆ.
ಡಾ| ಸಿದ್ದರಾಮ ಸ್ವಾಮೀಜಿ, ಗದಗ
ತೋಂಟದಾರ್ಯ ಸಂಸ್ಥಾನ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮಕ್ಕಳ ಮಾರಾಟ ಜಾಲ ಪತ್ತೆ; ಮಗುವಿನ ರಕ್ಷಣೆ
ಜ.21 ರಂದು ಬೆಳಗಾವಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ
Belagavi: ಪ್ರಭಾಕರ ಕೋರೆಯವರನ್ನು ಕಾಂಗ್ರೆಸ್ ಗೆ ಕರೆದಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ
Tourism: 800 ಅಡಿ ಎತ್ತರದ ಬೆಟ್ಟದಲ್ಲಿ ಭವ್ಯ ಇತಿಹಾಸ ಸಾರುವ ಗಜೇಂದ್ರಗಡ ಕೋಟೆ
Tourism: ಬೆಳಗಾವಿಯ ಹಿಡಕಲ್‌ನಲ್ಲಿ ರಾಜ್ಯದ ಮೊದಲ ಡೋಮ್ ಮಾದರಿ ಪಕ್ಷಿಧಾಮ
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.