ಬುಡರಕಟ್ಟಿಯಲ್ಲಿ ಬಸವೇಶ್ವರ ಮೂರ್ತಿ ಲೋಕಾರ್ಪಣೆ
Team Udayavani, Aug 14, 2020, 12:19 PM IST
ಬೈಲಹೊಂಗಲ: ಬುಡರಕಟ್ಟಿ ಗ್ರಾಮದಲ್ಲಿ ಗುರುವಾರ ಜಗಜ್ಯೋತಿ ಬಸವೇಶ್ವರರ ಆಶ್ವಾರೂಢ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಶ್ವಾರೂಢ ಬಸವೇಶ್ವರರ ಮೂರ್ತಿ ಮೆರವಣಿಗೆ ಮಾಡಿ ಗ್ರಾಮದ ಬಸವ ವೃತ್ತದಲ್ಲಿ ನಾಡಿನ ಹಲವು ಶ್ರೀಗಳು, ಗಣ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಗದಗ-ಡಂಬಳದ ತೋಂಟದಾರ್ಯ ಮಠದ ತೋಂಟದ ಡಾ. ಸಿದ್ಧರಾಮ ಶ್ರೀಗಳು ಮಾತನಾಡಿ, ಅಸಮಾನತೆ, ಮೌಡ್ಯತೆ, ಶೋಷಣೆಯಿಂದ ನಲುಗಿದ್ದ ಸಮಾಜಕ್ಕೆ ಬೆಳಕಾಗಿ ಬಂದವರು ಬಸವೇಶ್ವರರು. 12ನೇ ಶತಮಾನದಲ್ಲಿ ಜಾತಿ, ವರ್ಣ, ವರ್ಗ ರಹಿತ ಹೊಸ ಸಮಾಜ ಕಟ್ಟುವ ಮೂಲಕ ಸಮಾಜೋಧಾರ್ಮಿಕ ಚಳವಳಿಗೆ ಮುನ್ನುಡಿ ಬರೆದವರು ಎಂದರು.
ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವಣ್ಣ, ರಾಷ್ಟ್ರ ಮಾತೆ ಚನ್ನಮ್ಮ, ವೀರರಾಣಿ ಬೆಳವಡಿ ಮಲ್ಲಮ್ಮ ಪ್ರತಿಮೆಗಳು ಕಡ್ಡಾಯವಾಗಿ ಕಿತ್ತೂರು ನಾಡಿನಾದ್ಯಂತ ಸ್ಥಾಪನೆಗೊಳ್ಳಲಿ ಎಂದರು. ಇದೇ ವೇಳೆ ಶ್ರೀಗಳು ಪಂಚಮಸಾಲಿ ಪೀಠದಿಂದ ಬಸವಣ್ಣನವರ ಕಂಚಿನ ಪ್ರತಿಮೆಗೆ 25 ಸಾವಿರ ರೂ. ದೇಣಿಗೆ ನೀಡಿದರು.
ಬೈಲೂರಿನ ನಿಷ್ಕಲಮಂಟಪದ ನಿಜಗುಣಾನಂದ ಶ್ರೀ, ನಾಗನೂರ ಮಠದ ಅಲ್ಲಮಪ್ರಭು ಶ್ರೀ, ಬೈಲಹೊಂಗಲ ಮೂರುಸಾವಿರ ಮಠದ ಪ್ರಭುನೀಲಕಂಠ ಶ್ರೀ, ಬೈಲಹೊಂಗಲ ಬೆಳೇರಿಯ ಬಸವಾನಂದ ಶ್ರೀಗಳು ಮಾತನಾಡಿದರು. ಬುಡರಕಟ್ಟಿ ಗ್ರಾಮದ ಮಡಿವಾಳೇಶ್ವರ ಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಈ ವೇಳೆ ಬೆಳಗಾವಿಯ ರಾಷ್ಟ್ರೀಯ ಬಸವಸೇನಾ ಜಿಲ್ಲಾಧ್ಯಕ್ಷ ಶಂಕರ ಗುಡಸ, ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್. ಸಿದ್ಧನಗೌಡರ, ಬೈಲಹೊಂಗಲ ರಾಷ್ಟ್ರೀಯ ಬಸವದಳದ ಮುಖಂಡ ವೀರೇಶ ಹಲಕಿ, ಬಸವರಾಜ ಜಿಗಜಿನ್ನಿ, ಗಂಗಾಧರ ಹುಲಕುಂದ, ಮಹೇಶ ಬಾರಿಗಿಡದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ಔಷಧವನ್ನೇ ಡ್ರಗ್ ಆಗಿ ಬಳಸುವ ಯುವಕರು: ಅಶೋಕ್
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.