ಬೆಳಗಾವಿ : ಲಂಚ ಪಡೆಯುತ್ತಿದ್ದ ಬೆಳಗಾವಿಯ ಕೃಷಿ ಅಧಿಕಾರಿ ಎಸಿಬಿ ಬಲೆಗೆ
Team Udayavani, Jun 22, 2022, 10:23 PM IST
ಬೆಳಗಾವಿ : ಸಿಟಿ ಕಂಪೋಸ್ಟ್ ಮಾರ್ಕೆಟ್ ಲೈಸನ್ಸ್ ನೀಡಲು ಲಂಚ 20 ಸಾವಿರ ರೂ.ಲಂಚ ಪಡೆಯುತ್ತಿದ್ದ ಕೃಷಿ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಬೆಳಗಾವಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ಯೋಗೇಶ ಫಕೀರೇಶ ಅಗಡಿ ಎಸಿಬಿ ಬಲೆಗೆ ಬಿದ್ದಿದ್ದು, ಕಚೇರಿಯಲ್ಲಿ 44 ಸಾವಿರ ರೂ.ಹಾಗೂ ಮನೆಯಲ್ಲಿ ಶೋಧ ನಡೆಸಿದಾಗ 3.54 ಲಕ್ಷ ರೂ. ನಗದು ಹಣ ಪತ್ತೆಯಾಗಿದೆ.
ಅನಗೋಳದ ಮೋನೇಶ್ವರ ಕಮ್ಮಾರ ಎಂಬವರು ಸಿಟಿ ಕಂಪೋಸ್ಟ್ ಮಾರ್ಕೆಟ್ ಲೈಸನ್ಸ್ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಅಪ್ಲೋಡ್ ಮಾಡಲು ಕೃಷಿ ಅಧಿಕಾರಿ ಅಗಡಿ 30 ಸಾವಿರ ರೂ. ಲಂಚ ಕೇಳಿದ್ದರು. ಮುಂಗಡವಾಗಿ 20 ಸಾವಿರ ರೂ.ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಎಸಿಬಿ ಎಸ್ ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್ ಪಿ ಜೆ.ಎಂ. ಕರುಣಾಕರ ಶೆಟ್ಟಿ, ಇನ್ಸಪೆಕ್ಟರ್ ಗಳಾದ ಎ.ಎಸ್. ಗೂದಿಗೊಪ್ಪ, ನಿರಂಜನ ಪಾಟೀಲ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.
ಇದನ್ನೂ ಓದಿ : ಕೊಪ್ಪಲಂಗಡಿ : ಲಾರಿ ಢಿಕ್ಕಿ ; ಡಿವೈಡರ್ ಮೇಲೆ ಪಲ್ಟಿಯಾದ ಆಮ್ನಿ, ಪ್ರಯಾಣಿಕರು ಪಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.