Belagavi: ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ; ಮೈಸೂರು ದಸರಾ ಮಾದರಿ ಸಿಂಗಾರ!: ಡಿಕೆಶಿ
ಡಿ.26ಕ್ಕೆ ಕಾರ್ಯಕಾರಿ ಸಮಿತಿ ಸಭೆ, 27ರಂದು ಕಾರ್ಯಕರ್ತರ ಸಮಾವೇಶ: ಡಿಸಿಎಂ, ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರ ಮಾಹಿತಿ ಇಲ್ಲಿದೆ..
Team Udayavani, Dec 13, 2024, 10:16 PM IST
ಬೆಳಗಾವಿ: ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರವನ್ನು ಮೈಸೂರು ದಸರಾ ಮಾದರಿಯಲ್ಲಿ ವಿಜೃಂಭಿಸುವಂತೆ ಮಾಡಲಾಗುತ್ತದೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಐತಿಹಾಸಿಕ ಸ್ಥಳವಾಗಿರುವ ವೀರಸೌಧದಿಂದ 2028ರ ಚುನಾವಣಾ ರಣಕಹಳೆ ಮೊಳಗಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದರು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಂಕಾ ಗಾಂಧಿ ಆಗಮಿಸಲಿದ್ದು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಅಲ್ಲದೇ ದೇಶದ ವಿವಿಧ ಭಾಗಗಳಿಂದ 150 ಜನ ಸಂಸದರು, 40 ಮಂದಿ ಬಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ. ಡಿ.26 ರಂದು ಕಾರ್ಯಕಾರಿ ಸಮಿತಿಯ ಸಭೆ, 27ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಗರದ ಸಿಪಿಎಡ್ ಮೈದಾನದಲ್ಲಿ ನಡೆಯಲಿದೆ ಎಂದರು.
ನೂರು ಕಡೆ ಕಾಂಗ್ರೆಸ್ ಕಚೇರಿ ಉದ್ಘಾಟನೆ:
ಬೆಳಗಾವಿ ನಗರವನ್ನು ಅತ್ಯಂತ ವೈಭವೋಪೇತವಾಗಿ ಶೃಂಗರಿಸಲಾಗುವುದು. ನಗರದ ಬಹುತೇಕ ಪ್ರದೇಶಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗುವುದು. ಇದಕ್ಕೆ ಒಂದು ಕಡೆ ಸರ್ಕಾರ ಹಾಗೂ ಇನ್ನೊಂದು ಕಡೆ ಪಕ್ಷವೂ ಕೆಲಸ ಮಾಡುತ್ತದೆ. ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ನೆನಪಿನಲ್ಲಿ ನೂರು ಕಡೆ ಕಾಂಗ್ರೆಸ್ ಕಚೇರಿಯ ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬರುವ ಸೋಮವಾರ ಅಥವಾ ಮಂಗಳವಾರ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಬರುತ್ತಿದ್ದು ಎಐಸಿಸಿ ಅಧಿವೇಶನ ಮತ್ತು ಸಮಾವೇಶದ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. ಪಕ್ಷದ ಪ್ರತಿಯೊಬ್ಬ ಶಾಸಕರಿಗೂ ಒಬ್ಬೊಬ್ಬ ನಾಯಕರ ಕರೆದುಕೊಂಡು ಬರುವ ಜವಾಬ್ದಾರಿ ನೀಡಲಾಗಿದೆ ಎಂದರು.
2028ಕ್ಕೆ ಇಲ್ಲಿಂದಲೇ ಚುನಾವಣ ರಣಕಹಳೆ :
ಕಾಂಗ್ರೆಸ್ ಅಧಿವೇಶನದ ಮೆಲುಕು ಹಾಕಲು ಎರಡು ದಿನಗಳ ಕಾಲ ಬೆಳಗಾವಿ ನಗರದಲ್ಲಿ ಹಬ್ಬದ ವಾತಾವರಣ ಮೂಡಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಐತಿಹಾಸಿಕ ಪಯಣವನ್ನು ಸ್ಮರಿಸಿ ಭವಿಷ್ಯದ ಕಾರ್ಯಯೋಜನೆಗಳ ರೂಪಿಸಲು ಸಿದ್ಧವಾಗಲಿದೆ. ರಾಜ್ಯದಲ್ಲಿ 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇಲ್ಲಿಂದಲೇ ಚುನಾವಣಾ ಅಬ್ಬರ ಆರಂಭವಾಗಲಿದೆ. ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಸಚಿವ ಸತೀಶ ಜಾರಕಿಹೊಳಿ, ಶಾಸಕ ರಾಜು ಸೇಠ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly Session; ವಕ್ಫ್ ವಿವಾದ ಜಟಾಪಟಿ; ಅರಣ್ಯ ಇಲಾಖೆ, ಶಿಕ್ಷಣ ಸಂಸ್ಥೆಗಳಿಗೂ ನೋಟಿಸ್
“ಉತ್ತಮ ಸಂಶೋಧಕನಿಗೆ ಉದಾಹರಣೆ ಬನ್ನಂಜೆ’
Karnataka Govt: 9 ಪ್ರತಿಷ್ಠಾನ, ಟ್ರಸ್ಟ್‌ಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ
ಕೃಷ್ಣರಿಗೆ ಸಂತಾಪ ವೇಳೆ ವಡ್ಡ ಪದ ಬಳಕೆಗೆ ಡಿಕೆಶಿ ವಿಷಾದ
Session: ಬೆಳೆಗಳ ಹಾನಿಯುಂಟು ಮಾಡುವ ಕಾಡಾನೆಗಳ ಕೊಲ್ಲಲು ಅನುಮತಿ ನೀಡಿ: ಹರೀಶ್ ಪೂಂಜಾ
MUST WATCH
ಹೊಸ ಸೇರ್ಪಡೆ
Palakkad: ಲಾರಿ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾ*ವು
Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್
Priyank Kharge: ಮಾಣಿಪ್ಪಾಡಿ ಬಾಯಿ ಮುಚ್ಚಿಸಲು 150 ಕೋಟಿ ರೂ. ಆಮಿಷ ಒಡ್ಡಿದ್ದ ವಿಜಯೇಂದ್ರ
Thane; ಒಬ್ಬಳೇ ವಾಕಿಂಗ್ ಹೋದ ಪತ್ನಿಗೆ ತಲಾಖ್: ಪತಿ ವಿರುದ್ಧ ಪ್ರಕರಣ
Udupi: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೇಗ ಹೆಚ್ಚಿಸಿ: ಜಿಲ್ಲಾಧಿಕಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.