Belagavi; ರೈಲಿನಲ್ಲಿ ಪ್ರಜ್ಞೆ ತಪ್ಪುವ ಚಾಕೋಲೆಟ್ ಕೊಟ್ಟು ಮೊಬೈಲ್ ಕಳವು
ಎಂಟು ಪ್ರಯಾಣಿಕರು ಆಸ್ಪತ್ರೆಗೆ ದಾಖಲು
Team Udayavani, Sep 11, 2023, 11:25 PM IST
ಬೆಳಗಾವಿ: ವಾಸ್ಕೋಡಗಾಮ -ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ ಎಂಟು ಜನ ಪ್ರಯಾಣಿಕರಿಗೆ ಪ್ರಜ್ಞೆ ತಪ್ಪುವ ಚಾಕಲೇಟ್ ಹಾಗೂ ಕುರಕುರೆ ನೀಡಿ ಮೊಬೈಲ್ ಗಳನ್ನು ಕದ್ದುಕೊಂಡು ಹೋದ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು, ಪ್ರಜ್ಞೆ ತಪ್ಪಿದ ಎಲ್ಲರನ್ನೂ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈಲಿನಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ ಎಂಟು ಜನ ಕೂಲಿ ಕಾರ್ಮಿಕರನ್ನು ಕೂಡಲೇ ಬೆಳಗಾವಿಯಲ್ಲಿ ರೈಲು ಬರುತ್ತಿದ್ದಂತೆ ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು ಪ್ರಜ್ಞೆ ಬಂದ ಬಳಿಕ ಮಾಹಿತಿ ಪಡೆದು ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ.
ಮಧ್ಯ ಪ್ರದೇಶ ಮೂಲದ ಈ ಎಂಟು ಜನ ಕೂಲಿ ಕಾರ್ಮಿಕರು ಗೋವಾದಿಂದ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲ ಅಪರಿಚಿತರು ಬಂದು ಇವರಿಗೆ ಚಾಕೊಲೇಟ್ ಹಾಗೂ ಕುರುಕುರೆ ತಿನ್ನಲು ಕೊಟ್ಟಿದ್ದಾರೆ. ಇದನ್ನು ತಿಂದ ಎಂಟೂ ಜನ ಕೂಲಿ ಕಾರ್ಮಿಕರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಇವರ ಬಳಿ ಇದ್ದ ಮೊಬೈಲ್ ಗಳನ್ನು ಕಳವು ಮಾಡಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ ಇವರ ಎಲ್ಲ ಲಗೇಜ್ ಗಳು ಇವೆ.
ಸದ್ಯ ಆಸ್ಪತ್ರೆಯಲ್ಲಿರುವ ಈ ಕೂಲಿ ಕಾರ್ಮಿಕರ ಪ್ರಜ್ಞೆ ಬಂದ ಬಳಿಕ ಮಾಹಿತಿ ಪಡೆದು ಮುಂದಿನ ತನಿಖೆ ನಡೆಸಲಾಗುವುದು ಎಂದು ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ಕಾರೇಕರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gundlupete: ಟಾಟಾ ಏಸ್ – ಬೈಕ್ ನಡುವೆ ಅಪಘಾತ: ಬೈಕ್ ಸವಾರನ ಕಾಲಿಗೆ ಗಂಭೀರ ಗಾಯ
Kerala: ಅಂಗನವಾಡಿಯಲ್ಲಿ ಉಪ್ಪಿಟ್ಟು ಬೇಡ, ಬಿರಿಯಾನಿ ಬೇಕು.. ಬಾಲಕನ ಮನವಿಗೆ ಸಚಿವೆ ಸ್ಪಂದನೆ
Yakshagana: ವೇಷ- ಪಾತ್ರವೇ ಕಾಣದ ರೀತಿಯ ಅಲಂಕಾರದಿಂದ ಏನು ಪ್ರಯೋಜನ?
America: ಅಮೆರಿಕದಿಂದ ಭಾರತೀಯ ವಲಸಿಗರ ಗಡಿಪಾರು ಶುರು; 205 ಪ್ರಯಾಣಿಕರ ವಿಮಾನ
Hubballi: ಬೆಳ್ಳಂಬೆಳಗ್ಗೆ ಗುಂಡಿನ ಸದ್ದು… ಗುಜರಾತ್ ಮೂಲದ ಇಬ್ಬರು ದರೋಡೆಕೋರರ ಬಂಧನ