ಮಾರುಕಟ್ಟೆ ಇಲ್ಲದೇ ಕಲ್ಲಂಗಡಿ ಹಂಚಿದ ರೈತರು
ಉಳಿದ ಕಲ್ಲಂಗಡಿ ಹಸುಗಳ ಪಾಲು* ಇನ್ನುಳಿದದ್ದು ಹೊಲದಲ್ಲೇ ಕೊಳೆಯುತ್ತಿವೆ
Team Udayavani, May 19, 2021, 4:30 PM IST
ಜಗದೀಶ ಎಂ. ಖೊಬ್ರಿ
ತೆಲಸಂಗ: ರಾಜ್ಯದಲ್ಲಿನ ಕೊರೊನಾ ಕರ್ಫ್ಯೂದಿಂದಾಗಿ ರೈತರು ಬೆಳೆದ ಕಲ್ಲಂಗಡಿ ಮಾರಾಟವಾಗದೆ ಅವರು ಜನರಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಮಾತ್ರವಲ್ಲದೆ ದನಗಳಿಗೆ ಕತ್ತರಿಸಿ ಹಾಕಿದರೂ ಮುಗಿಯದ್ದಕ್ಕೆ ತೋಟದಲ್ಲಿಯೇ ಹಣ್ಣುಗಳು ಕೊಳೆಯುತ್ತಿವೆ. ಆದರೆ ಶ್ರಮ, ಹಣ ಹಾಕಿ ಬೆಳೆದ ಬೆಳೆಗೆ ಲಾಭವಿಲ್ಲದೇ ರೈತರು ಮಾತ್ರ ಕೊರೊನಾ ಎರಡನೆಯ ಅಲೆ ಕಾಲದಲ್ಲೂ ಪರದಾಡುವಂತಾಗಿದೆ.
ಮಾರ್ಚ ತಿಂಗಳಲ್ಲಿ ನಾಟಿ ಮಾಡಿ ಸದ್ಯ ಮಾರಾಟಕ್ಕೆ ಬಂದಿದ್ದ ಕಲ್ಲಂಗಡಿ ಬೆಳೆ ಕರೋನಾ ಕರ್ಫ್ಯೂದಿಂದ ಹೊಲ ಬಿಟ್ಟು ಹೋಗುತ್ತಿಲ್ಲ. ತೆಲಸಂಗ ಹೋಬಳಿ ಒಂದರಲ್ಲಿಯೇ ಸುಮಾರು 40 ಹೆಕ್ಟೇರ್‌ನಷ್ಟು ಕಲ್ಲಂಗಡಿ ಬೆಳೆ ಮಾರಾಟವಾಗದೇ ಹೊಲದಲ್ಲಿಯೇ ಉಳಿದಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಮಾರಾಟವಾಗದೆ ಅನುಭವಿಸಿದ್ದ ನಷ್ಟವನ್ನು ಪ್ರಸಕ್ತ ವರ್ಷವಾದರೂ ಸರಿದೂಗಿಸಬಹುದೆಂಬ ರೈತರ ಲೆಕ್ಕಾಚಾರ ಬುಡಮೇಲಾಗಿದೆ.
ಲಾಕ್‌ಡೌನ್‌ಗೂ ಮುಂಚೆ ಕೇಜಿಗೆ 10 ರೂ. ದಿಂದ 16 ರೂಪಾಯಿಗೆ ಖರೀದಿ ಮಾಡಿಕೊಳ್ಳುತ್ತಿದ್ದ ದಲ್ಲಾಳಿಗಳು, ಸರಕಾರ ಕರ್ಫ್ಯೂ ಘೋಷಿಸುತ್ತಿದ್ದಂತೆಯೇ ರೈತರತ್ತ ಹೊರಳಿಯೂ ನೋಡುತ್ತಿಲ್ಲ. ಮಾರ್ಚ್ ಕೊನೆಗೆ ಹಾಗೂ ಎಪ್ರೀಲ್ ಮೊದಲ ಭಾಗದಲ್ಲಿ ಹವಾಮಾನ ವೈಪರೀತ್ಯ ಮತ್ತು ಮಳೆ, ಆಲಿಕಲ್ಲು ಹೊಡೆತಕ್ಕೆ ಅರ್ಧದಷ್ಟು ಕಲ್ಲಂಗಡಿ ಬೆಳೆ ನಷ್ಟವಾಗಿತ್ತು. ಏಪ್ರೀಲ್ ಕೊನೆಯ ವಾರ ಮತ್ತು ಮೇ ತಿಂಗಳಲ್ಲಿ ಪ್ರತಿ ವರ್ಷ ಕಲ್ಲಂಗಡಿಗೆ ಹೆಚ್ಚು ಬೆಲೆ ಬರುತ್ತದೆ. ಆಗ ಉಳಿದ ಅರ್ಧದಷ್ಟು ಬೆಳೆ ಮಾರಿ ಖರ್ಚಾದರೂ ಸರಿದೂಗಿಸಬಹುದೆಂಬ ಲೆಕ್ಕಾಚಾರ ರೈತರದಿತ್ತು. ಈಗ ಆ ಆಸೆಯೂ ಕರಗಿ ನೀರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
MUST WATCH
ಹೊಸ ಸೇರ್ಪಡೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.