Belagavi; ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ ಗುಡ್ಡಕಾಯು ನಿಧನ
Team Udayavani, May 21, 2024, 10:13 PM IST
ಬೆಳಗಾವಿ: ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ.ಗುಡ್ಡಕಾಯು (91) ಅವರು ಇಲ್ಲಿಯ ಮಹಾಂತೇಶ ನಗರ ನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅವರಿಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. 1972 ರಲ್ಲಿ ಗೋಕಾಕದಿಂದ ಕಾಂಗ್ರೆಸ್ ಶಾಸಕರಾಗಿ ಅವರು ಒಂದು ಅವಧಿಗೆ ಆಯ್ಕೆಯಾಗಿದ್ದರು.
ಕೆಲ ತಿಂಗಳ ಹಿಂದೆ ಚುನಾವಣೆ ನೆನಪು ಮೆಲುಕು ಹಾಕಿದ್ದ ಚಂದ್ರಶೇಖರ ಗುಡ್ಡಕಾಯು ಅವರು, ನಾನು ಚುನಾವಣೆಗೆ ಖರ್ಚೇ ಮಾಡಿರಲಿಲ್ಲ. ಎಲ್ಲಾ ಮಾಡಿದ್ದು,ನೋಡಿಕೊಂಡಿದ್ದು ವಸಂತರಾವ್ ಅಣ್ಣಾ ಎಂದು ತಮ್ಮ ಚುನಾವಣೆಯ ಅನುಭವ ಹೇಳಿದ್ದರು.
1972 ರಲ್ಲಿ ಗೋಕಾಕದಿಂದ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಮಹಾರಾಷ್ಟ್ರ ಸರಕಾರದಲ್ಲಿ ನೀರಾವರಿ ಮಂತ್ರಿಯಾಗಿದ್ದ ದಿ.ಶಂಕರರಾವ್ ಚವ್ಹಾಣರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು. ಅಲ್ಲಿಂದ ಅವರನ್ನು ಬಿಡಿಸಿಕೊಂಡು ಬಂದ ರಾಯಬಾಗದ ವಸಂತರಾವ್ ಗೋಕಾಕದಿಂದ ಚುನಾವಣೆಗೆ ನಿಲ್ಲಿಸಿದ್ದರು.
ನನ್ನನ್ನು ಮಂತ್ರಿ ಮಾಡಲು ಮುಂದೆ ಬಂದ್ರು ದೇವರಾಜ ಅರಸರು. ಆದರೆ ನಾನು ಒಲ್ಲೆಯಪ್ಪ ಮಾಡೋದಿದ್ರೆ ವಸಂತರಾವ್ ಅವರನ್ನೇ ಮಾಡ್ರಿ ಎಂದೆ. ಅವರೇ ಮಂತ್ರಿ ಆದರು ಎಂದು ಅಂದಿನ ಘಟನೆ ಮೆಲುಕು ಹಾಕಿದ್ದರು.
1972 ರಲ್ಲಿ ಗುಡ್ಡಕಾಯು ಅವರು 28,005 ಮತಗಳನ್ನು ಪಡೆದು ಆಯ್ಕೆಯಾಗಿದ್ದರು.
ಮಾಜಿ ಶಾಸಕರಾದ ಮೇಲೆ ಗುಡ್ಡಕಾಯು ಅವರು ಬೆಳಗಾವಿಯ ಮಹಾಂತೇಶನಗರದಲ್ಲಿ ವಾಸಿಸುತ್ತಿದ್ದು ಎಲ್.ಐ.ಸಿ.ಏಜೆಂಟರಾಗಿ ಕೆಲಸ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.