![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 19, 2023, 5:10 PM IST
ಬೆಳಗಾವಿ: ಗೀತೆಯ ಸಂದೇಶವನ್ನು ಸಮಸ್ತ ಜನತೆಗೆ ತಲುಪಿಸುತ್ತಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಕಾರ್ಯ
ಶ್ಲಾಘನೀಯ ಎಂದು ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಭಗವದ್ಗೀತೆ ಅಭಿಯಾನ ಸಮಿತಿಯ ಗೌರವಾಧ್ಯಕ್ಷ ಡಾ|
ಪ್ರಭಾಕರ ಕೋರೆ ಹೇಳಿದರು.
ಇಲ್ಲಿಯ ಗುರುದೇವ ರಾನಡೆ ಮಂದಿರದಲ್ಲಿ ಭಗವದ್ಗೀತೆ ಅಭಿಯಾನ ಸಮಿತಿ, ಜನಕಲ್ಯಾಣ ಟ್ರಸ್ಟ್ ಹಾಗೂ ಎಸಿಪಿಆರ್ ಸಹಯೋಗದಲ್ಲಿ ಸೋಮವಾರ ನಡೆದ ಗೀತಾ ಸಮನ್ವಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಸ್ವಾರ್ಥದಿಂದ ಮೂಲ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಅತ್ಯಂತ ಸ್ತುತ್ಯಾರ್ಹ. ಜೊತೆಗೆ ಬೆಳಗಾವಿಯಲ್ಲಿ ಭಗವದ್ಗೀತೆ ಅಭಿಯಾನ ನಡೆಸುತ್ತಿರುವುದು ಬಹಳ ದೊಡ್ಡ ಕೆಲಸ. ಇದೇ ದಿ.23ರಂದು ನಡೆಯಲಿರುವ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನತೆ ಭಾಗವಹಿಸಲಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಭಗವದ್ಗೀತೆಯ ತತ್ವದ ಅಡಿಯಲ್ಲಿ
ಎಲ್ಲ ಸಿದ್ಧಾಂತಗಳನ್ನು ಒಂದೇ ಕಡೆ ತರುವ ಪ್ರಯತ್ನದ ಭಾಗವಾಗಿ ಗೀತಾ ಸಮನ್ವಯ ನಡೆಸಲಾಗುತ್ತಿದೆ. ಎಲ್ಲದಕ್ಕೂ ಅದರದ್ದೇ ಆದ ಸ್ಥಾನ ಇರಬೇಕು. ಆದರೆ ಅವೆಲ್ಲದರ ಮಧ್ಯೆ ಹೊಂದಾಣಿಕೆ ಇರಬೇಕು. ಅದೇ ಸಮನ್ವಯ ಎಂದರು.
ತತ್ವಶಾಸ್ತ್ರಗಳಲ್ಲಿ ಕೂಡ ಪರಸ್ಪರ ಹೊಂದಾಣಿಕೆ ಇರುತ್ತದೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ತತ್ವಗಳ ಮೇಲೆ ಇಲ್ಲಿ ವಿಷಯ ಮಂಡನೆ ನಡೆಯುತ್ತದೆ. ಈ ಮೂರೂ ಪ್ರಕಾರದ ಚಿಂತನೆಗಳಲ್ಲಿ ಹೊಂದಾಣಿಕೆ ಇರುತ್ತದೆ. ಈ ಕುರಿತ ಚರ್ಚೆಯೇ ಗೀತಾ ಸಮನ್ವಯ ಎಂದು ಶ್ರೀಗಳು ಹೇಳಿದರು.ನಂತರ ವಿವಿಧ ಗೋಷ್ಠಿಗಳು ನಡೆದವು.
ಭಗವದ್ಗೀತೆ ಮತ್ತು ಶರಣ ಸಾಹಿತ್ಯ ಕುರಿತು ನಿವೃತ್ತ ಪ್ರಾಚಾರ್ಯ ಡಾ.ವಿ.ಎಸ್. ಮಾಳಿ, ಆಳ್ವಾರ್ ಸಾಹಿತ್ಯ ಕುರಿತು ಮೈಸೂರು
ಸಂಸ್ಕೃತ ಕಾಲೇಜಿನ ಡಾ.ಎಂ.ಆನಂದ, ಭಗವದ್ಗೀತೆ ಮತ್ತು ದಾಸ ಸಾಹಿತ್ಯ ಕುರಿತು ಇಸ್ಕಾನ್ ನ ನಾಗೇಂದ್ರ ದಾಸ ಹಾಗೂ ಪಂಡಿತ ಶ್ರೀನಿಧಿ ಆಚಾರ್ ಜಮ್ನಿಸ್, ಭಗವದ್ಗೀತೆ ಮತ್ತು ರಾಮಕೃಷ್ಣ- ವಿವೇಕಾನಂದ ಸಾಹಿತ್ಯ ಕುರಿತು ರಾಮಕೃಷ್ಣ ಆಶ್ರಮದ ನಿತ್ಯಸ್ಥಾನಂದ ಸ್ವಾಮಿಗಳು ಮತ್ತು ಶ್ರೀ ಕ್ಷೇತ್ರ ಶಕಟಪುರದ ಮಧುಸೂದನ್ ಶಾಸ್ತ್ರಿ ಹಂಪಿಹೊಳಿ ಅವರು ವಿಷಯಗಳನ್ನು ಮಂಡಿಸಿದರು. ಮೈಸೂರಿನ ಭಾರತೀ ಯೋಗಧಾಮದ ಯೋಗ ರತ್ನ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್ ಸಮಾರೋಪ ಭಾಷಣ ಮಾಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ವಿದ್ವಾನ್ ಸೂರ್ಯನಾರಾಯಣ ಭಟ್, ಎಸಿಪಿಆರ್ ಗೌರವ ಕಾರ್ಯದರ್ಶಿ ಎಂ.ಬಿ.ಜಿರಲಿ, ರಾಮ ಭಂಡಾರಿ, ಭಗವದ್ಗೀತೆ ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ,
ಕಾರ್ಯದರ್ಶಿ ಎಂ.ಕೆ.ಹೆಗಡೆ, ಸೀತಾರಾಮ ಭಾಗವತ, ಶ್ರೀಧರ ಗುಮ್ಮಾನಿ, ವೆಂಕಟ್ರಮಣ ಹೆಗಡೆ, ಗಣೇಶ ಹೆಗಡೆ, ಅರುಣ ನಾಯ್ಕ, ಸುಬ್ರಹ್ಮಣ್ಯ ಹೆಗಡೆ, ಸಿ.ಜಿ.ಶಾಸ್ತ್ರಿ, ಶ್ರೀಪಾದ ಭಟ್, ವಿನಾಯಕ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು. ಅಭಿಯಾನ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಭಟ್ ಹಾಗೂ ಉಪಾಧ್ಯಕ್ಷೆ ಪೂರ್ಣಿಮಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.