Belagavi: ಗೋವಾ ರಾಜ್ಯದ ಅಕ್ರಮ ಮದ್ಯ ಸಾಗಾಟ, ಮಾರಾಟ; ವ್ಯಕ್ತಿ ಬಂಧನ
Team Udayavani, Mar 30, 2024, 2:50 PM IST
ಬೆಳಗಾವಿ: ನಗರದ ಹಿಂಡಲಗಾ ಲಕ್ಷ್ಮೀ ನಗರದ ಸಾರ್ವಜನಿಕ ಸ್ಥಳವೊಂದರಲ್ಲಿ ಪಕ್ಕದ ಗೋವಾ ರಾಜ್ಯದ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಡಿಸಿಪಿ ಸ್ನೇಹಾ ಪಿ. ವಿ ಹಾಗೂ ಅವರ ತಂಡ ಯಶಸ್ವಿಯಾಗಿದೆ.
ಹಿಂಡಲಗಿ ಗ್ರಾಮದ ರಾಜೇಶ ಕೇಶವ ನಾಯ್ಕ ಉರ್ಪ ಹಿಂಡಲಗಿ ರಾಜು (40)ನನ್ನು ಪೊಲೀಸರು ಕೆಡ್ಡಾಗೆ ಕೆಡವಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಡಿಸಿಪಿ ಸ್ನೇಹಾ ಪಿ. ವಿ ಹಾಗೂ ಸಿಸಿಬಿ ಪಿಐ ಸಿಬ್ಬಂದಿ ಅವರ ತಂಡ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಸರಾಯಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಸರಾಯಿಯನ್ನು ಪಕ್ಕದ ಗೋವಾ ರಾಜ್ಯದ ಹಾಗೂ ಮಿಲಿಟರಿ ಕ್ಯಾಂಟೀನ್ ಮದ್ಯ ಎಂದು ಹಗಲಿರಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಹಿಂಡಲಗಿ ರಾಜು ಎಂಬವನಿಂದ ವಿವಿಧ ಕಂಪನಿಯ ಗೋವಾ ರಾಜ್ಯದ ಸುಮಾರು 187 ಲೀಟರ್ ಅಂದಾಜು 9,09,750 ಬೆಲೆಯ ಅಕ್ರಮ ಸರಾಯಿ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರು, 1.5 ಲಕ್ಷ ನಗದು ಸೇರಿದಂತೆ ಒಟ್ಟು ರೂ 10,60,100 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಈ ದಾಳಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಿಸಿಬಿ ಘಟಕದ ಪಿಐ ಸಿಬ್ಬಂದಿ ಅವರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಉದ್ಯಮಿ ಹ*ತ್ಯೆ ಪ್ರಕರಣ: ಪತ್ನಿ ಸೇರಿ ಮೂವರ ಬಂಧನ
Belagavi: ಕಿತ್ತರೂ ಉತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲೂ ರಸಮಂಜರಿ ಕಾರ್ಯಕ್ರಮ
Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ
Bailhongal: ಕರೆಂಟ್ ಶಾಕ್ ತಗುಲಿ ಮಹಿಳೆ ಸಾವು
Belagavi: ಫೇಸ್ಬುಕ್ ಗೆಳೆಯನ ಜೊತೆ ಸೇರಿ ಕೋಟ್ಯಧಿಪತಿ ಗಂಡನನ್ನೇ ಹತ್ಯೆಗೈದಳಾ ಪತ್ನಿ…?
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.