ಶಿಂಧೋಳ್ಳಿಯಲ್ಲಿ ಕ್ರಿಕೆಟ್ ಆಡಿ ಹೊರಟಾಗ ಯುವಕರ ಡಬಲ್ ಮರ್ಡರ್: ಬಿಗುವಿನ ಪರಿಸ್ಥಿತಿ
Team Udayavani, Dec 26, 2022, 8:19 AM IST
ಬೆಳಗಾವಿ: ರಾತ್ರಿ ಕ್ರಿಕೆಟ್ ಆಟ ಆಡಿ ಹೋಗುವಾಗ ಇಬ್ಬರು ಯುವಕರನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಶಿಂಧೋಳ್ಳಿ ಗ್ರಾಮದಲ್ಲಿ ರವಿವಾರ(ಡಿ. 25) ರಾತ್ರಿ ನಡೆದಿದೆ.
ಶಿಂಧೋಳ್ಳಿ ಗ್ರಾಮದ ಬಸವರಾಜ ಮಾರುತಿ ಬೆಳಗಾಂವಕರ(24) ಹಾಗೂ ಗಿರೀಶ ಯಲ್ಲಪ್ಪ ನಾಗುನ್ನವರ(24) ಮೃತಪಟ್ಟ ಯುವಕರು.
ರವಿವಾರ ರಾತ್ರಿ ಕ್ರಿಕೆಟ್ ಆಡಿ ಹೊರಟ ಯುವಕರನ್ನು ಅಪರಿಚಿತರು ಬಂದು ಹೊಡೆದಿದ್ದು, ಈ ಪರಿಣಾಮ ಬಸವರಾಜ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಿರೀಶನನ್ನು ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಿಸದೇ ರಾತ್ರಿ ಮೃತಪಟ್ಟಿದ್ದಾನೆ.
ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಹೊನಲು ಬೆಳಕಿನ ಹಾಪ್ಪಿಚ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಯುವಕರು ರವಿವಾರ ರಾತ್ರಿ ಕ್ರಿಕೆಟ್ ಆಟ ಆಡಿ ಹೊರಟಿದ್ದರು. ಯಾರೋ ಯುವಕರು ಬಂದು ಹೊಡೆದಿದ್ದಾರೆ. ಕೊಲೆಗೆ ನಿಖರ ಕಾರಣ ಖಚಿತವಾಗಿಲ್ಲ.
ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮಾರೀಹಾಳ ಠಾಣೆ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.