ಸೋರಿಕೆ ನಿರಂತರ; ಸಮರ್ಪಕ ನೀರು ಪೂರೈಕೆಗೆ ಅಡ್ಡಿ
Team Udayavani, Feb 8, 2019, 9:38 AM IST
ಬೆಳಗಾವಿ: ಹಿಡಕಲ್ ಹಾಗೂ ರಕ್ಕಸಕೊಪ್ಪ ಜಲಾಶಯಗಳಿಂದ ಕುಡಿಯುವ ನೀರು ಪಡೆಯುತ್ತಿರುವ ಬೆಳಗಾವಿ ನಗರದಲ್ಲಿ ವಿತರಣಾ ವ್ಯವಸ್ಥೆ ಸಮರ್ಪಕವಾಗದೇ ಶೇ.40 ರಷ್ಟು ನೀರು ಸೋರಿಕೆಯಾಗುತ್ತಿದೆ. ಇದರಿಂದಾಗಿ ಜಲಾಶಯಗಳಲ್ಲಿ ಭರ್ತಿ ನೀರಿದ್ದರೂ ಅದರ ಪೂರ್ಣ ಲಾಭ ಕುಂದಾನಗರದ ಜನರಿಗೆ ದೊರೆಯುತ್ತಿಲ್ಲ.
ಹಲವು ವರ್ಷಗಳ ಹಿಂದೆ ಅಳವಡಿಸಲಾದ ಪೈಪ್‌ಲೈನ್‌ಗಳ ಆಯುಷ್ಯ ಮುಗಿದಿರುವುದೇ ಈ ಸೋರಿಕೆಗೆ ಮುಖ್ಯ ಕಾರಣ. 1962 ರಲ್ಲಿ ಆಳವಡಿಸಲಾದ ಪೈಪ್‌ಲೈನ್‌ಗಳಲ್ಲಿ ಶೇ. 40 ರಷ್ಟು ನೀರು ಒಳಗಡೆಯೇ ಸೋರಿಕೆಯಾಗುತ್ತಿದೆ. ಇದರಿಂದ ಯಾವುದೇ ಬಡಾವಣೆಗೆ ಸಮರ್ಪಕ ನೀರು ಪೂರೈಕೆಯಾಗುತ್ತಲೇ ಇಲ್ಲ. ಇದು ನಿರಂತರ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ಸಹ ಅಡ್ಡಿಯಾಗಿದೆ.
ಹಳೆಯ ಪೈಪ್‌ಲೈನ್‌ಗಳ ಬದಲಾವಣೆ ಮಾಡಬೇಕು ಎಂದು ಸಿದ್ಧಪಡಿಸಲಾಗಿರುವ ಕ್ರಿಯಾ ಯೋಜನೆ ಕಳೆದ ಹಲವಾರು ವರ್ಷಗಳಿಂದ ಮಹಾನಗರಪಾಲಿಕೆ ಹಾಗೂ ಜಲಮಂಡಳಿ ಕಚೇರಿಗಳಲ್ಲಿ ಕೊಳೆಯುತ್ತ ಬಿದ್ದಿದೆ. ಸರಕಾರಗಳು ಬದಲಾಗಿವೆ. ಪಾಲಿಕೆಯಲ್ಲಿ ಆಡಳಿತ ಬದಲಾಗಿದೆ. ಆದರೆ ಪೈಪ್‌ಲೈನ್‌ಗಳ ಬದಲಾವಣೆ ಕಾರ್ಯ ಮಾತ್ರ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.
ಗಗನಕುಸುಮ: ನಗರದ ಎಲ್ಲ 58 ವಾರ್ಡ್‌ಗಳಿಗೆ ನಿರಂತರ ನೀರು ಪೂರೈಸಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಆದರೆ ಪೈಪ್‌ಲೈನ್‌ಗಳ ಸೋರಿಕೆ ಇದಕ್ಕೆ ಅಡ್ಡಿಯಾಗಿದೆ. 10 ವರ್ಷಗಳ ಹಿಂದೆ 58 ವಾರ್ಡ್‌ಗಳ ಪೈಕಿ 10 ವಾರ್ಡ್‌ಗಳಲ್ಲಿ ನಿರಂತರ ನೀರು ಪೂರೈಕೆ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಯಿತು. 2008 ರಿಂದ ಇದುವರೆಗೆ ಈ 10 ವಾರ್ಡ್ ಬಿಟ್ಟರೆ ಉಳಿದ ವಾರ್ಡ್‌ಗಳು ಈ ಯೋಜನೆಯ ವ್ಯಾಪ್ತಿಗೆ ಬರಲೇ ಇಲ್ಲ. ಪ್ರತಿ ವರ್ಷ ಸರಕಾರದ ಮುಂದೆ ಈ ಬೇಡಿಕೆ ಪ್ರಸ್ತಾಪವಾಗುತ್ತಲೇ ಇದೆ. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸಹ ಇದು ಚರ್ಚೆಯಾಗುತ್ತಿದೆ. ಆದರೆ ಪ್ರಗತಿ ಮಾತ್ರ ಶೂನ್ಯ. ಹೀಗಾಗಿ 48 ವಾರ್ಡ್‌ಗಳ ಜನರು ಈಗಲೂ ವಾರಕ್ಕೊಮ್ಮೆ ನೀರು ಪಡೆಯಬೇಕಾಗಿದೆ. ಕೆಲ ವಾರ್ಡ್‌ಗಳಲ್ಲಿ 8 ರಿಂದ 10 ದಿನಗಳಿಗೊಮ್ಮೆ ನೀರು ಬರುತ್ತಿದ್ದರೆ ಇನ್ನು ಕೆಲ ಭಾಗಗಳಲ್ಲಿ ಮೂರ್‍ನಾಲ್ಕು ದಿನಗಳಿಗೊಮ್ಮೆ ನೀರು ಬರುತ್ತಿದೆ. ನೀರು ಪೂರೈಕೆಯಲ್ಲೂ ತಾರತಮ್ಯ ಮಾಡುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲೇ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. 8 ರಿಂದ 10 ದಿನಗಳಿಗೊಮ್ಮೆ ನೀರು ಬಿಟ್ಟರೂ ಆದು ಸಾಕಾಗುತ್ತಿಲ್ಲ. ಕೆಲ ಪ್ರದೇಶಗಳಲ್ಲಿ ಸಾಕಷ್ಟು ನೀರು ಬಿಡಲಾಗುತ್ತದೆ. ಪ್ರಭಾವಿಗಳು ಇರುವ ಕಡೆ ನೀರಿನ ಸಮಸ್ಯೆಯ ಮಾತೇ ಇಲ್ಲ. ಆದರೆ ನಮ್ಮ ಪ್ರದೇಶಗಳಿಗೆ 10 ದಿನಗಳಿಗೊಮ್ಮೆ ನೀರು. ಎಲ್ಲಿಯಾದರೂ ಪೈಪ್ ಒಡೆದರೆ ದೇವರೇ ಗತಿ. ನಮಗೇಕೆ ಈ ಅನ್ಯಾಯ ಎಂಬುದು ಸಹ್ಯಾದ್ರಿ ನಗರಕ್ಕೆ ಹೊಂದಿಕೊಂಡಿರುವ ಬಡಾವಣೆಗಳ ನಿವಾಸಿಗಳ ದೂರು. ಇದೇ ಕಾರಣದಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ.
ನಗರದಲ್ಲಿ ಪಾಲಿಕೆಯಿಂದ ಕೈಗೊಂಡಿರುವ ಯಾವುದೇ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಹಣ ಖರ್ಚು ಮಾಡುವ ಕೆಲಸ ಮಾತ್ರ ನಡೆದಿದೆ. ಕುಡಿಯುವ ನೀರಿನ ಪೈಪ್‌ಲೈನ್ ಹಾಕುವಾಗ ಸಹ ಸರಿಯಾದ ಯೋಜನೆ ಇಲ್ಲ. ಕೆಲವು ಪ್ರದೇಶಗಳಲ್ಲಿ ಮೂರು ಫೂಟುಗಳ ಕೆಳಗಡೆ ಪೈಪ್ ಇದ್ದರೆ ಇನ್ನು ಕೆಲವು ಕಡೆ ಎರಡರಿಂದ ನಾಲ್ಕು ಅಡಿಗಳ ಕೆಳಗಡೆ ಪೈಪ್‌ಗ್ಳಿವೆ. ಹೀಗಾಗಿ ಎಲ್ಲಿಯೂ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬುದು ಸ್ವತಃ ಶಾಸಕರ ಆರೋಪ.
ಪೈಪ್‌ಲೈನ್ ಬಹಳ ಹಳೆಯದಾಗಿ ರುವುದರಿಂದ ನೀರಿನ ಸೋರಿಕೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಎಲ್ಲ ಬಡಾವಣೆಗಳಿಗೆ ನಿರಂತರ ನೀರು ಪೂರೈಕೆ ಯೋಜನೆ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಇದೂ ಒಂದು ಕಾರಣ. ಮೊದಲು ಎಲ್ಲ ಹಳೆಯ ಪೈಪ್‌ಲೈನ್‌ಗಳ ಬದಲಾವಣೆ ಮಾಡಬೇಕಿದೆ. ಇದಕ್ಕಾಗಿ ಈಗಾಗಲೇ ಸಮಗ್ರ ವರದಿ ಸಿದ್ಧಪಡಿಸಿ ಮಂಜೂರಾತಿ ಪಡೆಯಲಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಗರದಲ್ಲಿ ಬಾಕಿ ಉಳಿದಿರುವ 48 ವಾರ್ಡ್‌ಗಳಿಗೆ ನಿರಂತರ ನೀರು ಪೂರೈಕೆ ಯೋಜನೆ ವಿಸ್ತರಣೆ ಮಾಡಲು 2008ರಲ್ಲಿ 250 ಕೋಟಿ ರೂ. ಯೋಜನಾ ವೆಚ್ಚ ಸಿದ್ಧಪಡಿಸಲಾಗಿತ್ತು. ಆದರೆ ಆಗಿನಿಂದ ಅನುಮತಿ ದೊರೆತಿಲ್ಲ. ಈಗ ಈ ಯೋಜನಾ ವೆಚ್ಚ 600 ಕೋಟಿ ರೂ. ತಲುಪಿದ್ದು ಕೇಂದ್ರದಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ. ಈಗ ಲೋಕಸಭೆ ಚುನಾವಣೆ ಬರುವುದರಿಂದ ಆಗಸ್ಟ್‌ನಲ್ಲಿ ಇದರ ಟೆಂಡರ್ ಕರೆದು ಕಾರ್ಯ ಅರಂಭವಾಗಲಿದೆ ಎಂಬುದು ಶಾಸಕ ಆಭಯ ಪಾಟೀಲ ಹೇಳಿಕೆ.
ನಗರದ 48 ವಾರ್ಡ್‌ಗಳಲ್ಲಿ ನಿರಂತರ ನೀರು ಪೂರೈಕೆ ಯೋಜನೆಗೆ ಸುಮಾರು 427 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧವಾಗಿದೆ. ಈ ಯೋಜನೆಯಡಿ ಈಗಿರುವ ಎಲ್ಲ ಪೈಪ್‌ಲೈನ್‌ಗಳ ಬದಲಾವಣೆ ಮಾಡಲಾಗುವುದು ಹಾಗೂ ನೀರಿನ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂಬುದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳ ಹೇಳಿಕೆ.
ನಗರದಲ್ಲಿ ಕುಡಿಯುವ ನೀರಿನ ವಿತರಣೆ ವ್ಯವಸ್ಥೆ ಸರಿಯಾಗಿಲ್ಲ. ಪೈಪ್‌ಲೈನ್‌ಗಳು ಬಹಳ ಹಳೆಯದಾಗಿರುವುದರಿಂದ ಶೇ. 40 ರಿಂದ 45 ರಷ್ಟು ನೀರಿನ ಸೋರಿಕೆಯಾಗುತ್ತಿದೆ. ಎಲ್ಲ ಪೈಪ್‌ಲೈನ್‌ಗಳನ್ನು ಬದಲಾವಣೆ ಮಾಡಲೇಬೇಕಿದೆ. ಪೈಪ್‌ಲೈನ್‌ಗಳ ಬದಲಾವಣೆ ನಂತರ ವಿತರಣಾ ವ್ಯವಸ್ಥೆಯನ್ನು ಸಂಪೂರ್ಣ ಮಾರ್ಪಾಡು ಮಾಡಬೇಕಾಗಿದೆ. ಅದುವರೆಗೆ ನೀರಿನ ಸೋರಿಕೆ ನಿಲ್ಲುವುದಿಲ್ಲ. ಪೈಪ್‌ಲೈನ್ ಬದಲಾವಣೆಗೆ ಈಗಾಗಲೇ ಕ್ರಿಯಾ ಯೋಜನೆ ಸಿದ್ಧವಾಗಿದೆ.
• ಚಂದ್ರಪ್ಪ ,
ಜಲಮಂಡಳಿ ಕಾರ್ಯನಿರ್ವಾಹಕ ಎಂಜನಿಯರ್
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.