ಸಾವಿರ ಸಸಿ ನೆಡುವುದಕ್ಕೆಸಿಕ್ಕಿತು ಚಾಲನೆ
Team Udayavani, Aug 15, 2021, 3:46 PM IST
ತೆಲಸಂಗ: ತಾಲೂಕಿನ 46 ಗ್ರಾಮ ಪಂಚಾಯಿತಗಳ ಮೂಲಕ ಒಂದು ಲಕ್ಷ ಸಸಿನೆಡುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿನಿರ್ವಹಿಸಲು ಪಿಡಿಒಗಳಿಗೆ ಸೂಚಿಸಲಾಗಿದ್ದು,ನಿರ್ಲಕ್ಷ್ಯ ತೋರಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದುಅಥಣಿ ತಾಪಂ ಇಒ ಶೇಖರಕರಿಬಸಪ್ಪಗೋಳ ಎಚ್ಚರಿಸಿದರು.
ಗ್ರಾಮದಲ್ಲಿ ಶನಿವಾರಗ್ರಾಪಂ ವತಿಯಿಂದ ನರೇಗಾಯೋಜನೆಯಡಿ ಸಾವಿರ ಸಸಿನೆಡುವುದಕ್ಕೆ ಚಾಲನೆ ನೀಡಿ ಅವರುಮಾತನಾಡಿದರು. ಸಸಿ ನೆಡಲು ಈಗಾಗಲೇಸಾಕಷ್ಟು ವಿಳಂಬವಾಗಿದೆ. ನಿ ರ್ಧಿಷ್ಟಸಮಯದಲ್ಲಿ ಕೆಲಸ ಮಾಡಿ ಮುಗಿಸುವುದುಕಡ್ಡಾಯ. ನೆಟ್ಟ ಸಸಿ ಬೆಳೆಯಲು ನೌಕರರುಮಾತ್ರವಲ್ಲದೇ ಆಯಾ ಗ್ರಾಮದ ಯುವಕರುವಾರಕ್ಕೊಂದು ದಿನ ಶ್ರಮದಾನ ಮಾಡಿಬೆಳೆಸಿರಿ ಎಂದರು.
ಚಿಕ್ಕೋಡಿ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಎಸ್.ಪಿ.ಅಭ್ಯಂಕರ ಮಾತನಾಡಿದರು.ಪಿಡಿಒ ಬೀರಪ್ಪ ಕಡಗಂಚಿ, ಅಥಣಿ ವಲಯಅರಣ್ಯ ಅ ಧಿಕಾರಿ ರಾಜು ಕಾಂಬಳೆ, ಎಡಿಅರುಣ ಮಾಚಕನೂರ, ಶಾಖಾಅರಣ್ಯ ಅ ಧಿಕಾರಿ ಎಸ್.ಎಸ್.ಕನ್ನಾಳ, ಎಸ್.ಪಿ. ಅಂಬಿಗೇರ,ನಿವೃತ್ತ ಸೈನಿಕ ಮಾದೇವ ಬಾಣಿ,ಡಾ| ಎಸ್.ಐ. ಇಂಚಗೇರಿ, ರಾಮುನಿಡೋಣಿ, ಸಿದ್ದಲಿಂಗ ಮಾದರ, ಗಜಾನನಮಾದರ ಇದ್ದರು.
“ಸಸಿ ನೆಡುವ ಯೋಜನೆಗೆ 2.89ಕೋಟಿ ವ್ಯರ್ಥ’ ಎಂಬ ಶೀರ್ಷಿಕೆಯಡಿಉದಯವಾಣಿ ವರದಿ ಆ.10ರಂದುಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ತಾಲೂಕಾಡಳಿತಸಸಿ ನೆಡುವ ಕೆಲಸಕ್ಕೆ ಶನಿವಾರ ತೆಲಸಂಗದಿಂದಚಾಲನೆ ನೀಡಿದೆ.