Belagavi; ಹಿಂಡಲಗಾ ಜೈಲಿನ ಮೇಲೆ ಕಮಿಷನರ್ ನೇತೃತ್ವದಲ್ಲಿ ದಿಢೀರ್ ಪೊಲೀಸ್ ದಾಳಿ
Team Udayavani, Aug 10, 2024, 12:59 PM IST
ಬೆಳಗಾವಿ: ಇಲ್ಲಿನ ಹಿಂಡಲಗಾ ಜೈಲಿನ ಮೇಲೆ ಶನಿವಾರ 250 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ಶನಿವಾರ ಬೆಳಗಿನ ಜಾವ ಸುಮಾರು 5 ಗಂಟೆಯಿಂದ ಕಮಿಷನರ್ ಇಡಾ ಯಾರ್ಟಿನ್ ಮಾರ್ಬನಿಂಗ್ ನೇತೃತ್ವದಲ್ಲಿ ಜೈಲಿನ ಮೇಲೆ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ 40 ಅಧಿಕಾರಿಗಳು ಮತ್ತು 220ಕ್ಕೂ ಹೆಚ್ಚು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ದಾಳಿಯ ಸಮಯದಲ್ಲಿ ಮೂರು ಚಾಕುಗಳು, 10 ತಂಬಾಕು ಪೊಟ್ಟಣಗಳು, ಒಂದು ಸಿಗರೇಟು, ಸಣ್ಣ ಹೀಟರ್ ತಂತಿ ಬಂಡಲ್, ಇಟ್ಟಿಗೆಗಳು, ಎಲೆಕ್ಟ್ರಿಕ್ ಒಲೆ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.