ಕಳ್ಳರ ಅಟ್ಟಹಾಸಕ್ಕೆ ನಲುಗಿದ ಕುಂದಾನಗರಿ
Team Udayavani, Feb 12, 2021, 2:24 PM IST
ಬೆಳಗಾವಿ: ಕಳ್ಳತನ, ದರೋಡೆಯಲ್ಲಿ ಸಕ್ರಿಯವಾಗಿರುವ ಕಳ್ಳರ ಅಟ್ಟಹಾಸಕ್ಕೆ ಕುಂದಾನಗರಿ ಜನತೆ ಬೆಚ್ಚಿ ಬಿದ್ದಿದ್ದು, 2020ರ ಜನೇವರಿಯಿಂದ ಡಿಸೆಂಬರವರೆಗೆ ಐದೂವರೆ ಕೋಟಿ ರೂ. ಮೊತ್ತಕ್ಕಿಂತ ಹೆಚ್ಚು ಆಸ್ತಿ ಕಳ್ಳತನವಾಗಿದೆ.
ಪ್ರಕರಣಗಳ ಪತ್ತೆ ಹಚ್ಚುವಲ್ಲಿ ಮಹಾನಗರ ಪೊಲೀಸರು ವಿಫಲರಾಗಿದ್ದಕ್ಕೆ ಜನರು ಅಸಮಾಧಾಗೊಂಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬಹು ಸಂಸ್ಕೃತಿಯ ನಗರಿ ಬೆಳಗಾವಿಯಲ್ಲಿ ದಿನದಿನಕ್ಕೂ ಮನೆಗಳ್ಳತನ, ವಾಹನ, ಸರಗಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ಭೇದಿಸುವಲ್ಲಿ ಪೊಲೀಸರು ಸಫಲರಾಗಿಲ್ಲ. 2020 ಇಡೀ ವರ್ಷ ಕೊರೊನಾ ಹಾವಳಿಯಲ್ಲಿಯೇ ಜನರು ಕಾಲ ಕಳೆದಿದ್ದಾರೆ.
ಲಾಕ್‌ಡೌನ್ ಅವಧಿಯೇ ಬಹಳಷ್ಟು ದಿನ ಇತ್ತು. ಕಳ್ಳರು ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡು ಕೈಚಳಕ ತೋರಿಸಿದ್ದಾರೆ. ಒಂದು ವರ್ಷದ ಅವ ಧಿಯಲ್ಲಿ ನಡೆದ 275 ಕಳ್ಳತನ ಪ್ರಕರಣಗಳ ಪೈಕಿ 84 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಇನ್ನುಳಿದ ಪ್ರಕರಣಗಳ ಪತ್ತೆಗೆ ಇನ್ನೂ ಎಷ್ಟು ವರ್ಷ ಬೇಕು ಎಂಬುದೇ ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಳ್ಳರ ಮೂಲ ಯಾವುದು?: ಕಳ್ಳತನದಲ್ಲಿ ಭಾಗಿಯಾಗಿರುವ ಖದೀಮರು ಉತ್ತರ ಭಾರತದ ಮೂಲದವರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಜತೆಗೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಮೂಲದವರೂ ನಗರದಲ್ಲಿ ವಕ್ರದೃಷ್ಟಿ ಹರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳ್ಳರ ಬಂಧನಕ್ಕೆ ಪೊಲೀಸರು ವ್ಯವಸ್ಥಿತ ಜಾಲ ಬೀಸಿದರೆ ಇಂಥ ಕೃತ್ಯಗಳಿಗೆ ಲಗಾಮು ಹಾಕಬಹುದಾಗಿದೆ. ಕಳ್ಳರ ಕೈಚಳಕದ ಬಗ್ಗೆ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮಹಾನಗರ ಪೊಲೀಸ್ ಕಮೀಷನರೇಟ್‌ನ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿಯೂ ಹೆಚ್ಚೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿರುವ ಮಾಹಿತಿ ಸಿಕ್ಕಿದೆ. ಒಂದು ವರ್ಷದ ಅವಧಿಯಲ್ಲಿ ಮನೆಗಳ್ಳತನ, ದರೋಡೆ, ಸರಗಳ್ಳತ, ವಾಹನ ಕಳ್ಳತನ ಸೇರಿ ಒಟ್ಟು 5.88 ಕೋಟಿ ರೂ. ಆಸ್ತಿ-ಪಾಸ್ತಿ ಕಳ್ಳತನವಾಗಿವೆ. ಈ ಪೈಕಿ ಪೊಲೀಸರು ಕೇವಲ 85.73 ಲಕ್ಷ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದು ಮೂಲ ಮಾಲೀಕರಿಗೆ ಮರಳಿಸಿದ್ದಾರೆ. ಆದರೆ ಇನ್ನೂ ಐದು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆ ಹಚ್ಚಬೇಕಾಗಿದೆ.
ಪೊಲೀಸರು ಸೈಲೆಂಟ್ ಆಗಿದ್ದು ಏಕೆ?: ನಗರ ವ್ಯಾಪ್ತಿಯಲ್ಲಿ ಇಷ್ಟೊಂದು ಕಳ್ಳತನ ನಡೆಯುತ್ತಿದ್ದರೂ ಪೊಲೀಸರು ಸಮ್ಮನಿದ್ದಿದ್ದಾದರೂ ಏಕೆ. ವಿಶೇಷ ತಂಡ ರಚಿಸಿ ಪತ್ತೆ ಹಚ್ಚುವಲ್ಲಿ ನಿಷ್ಕ್ರಿಯರಾಗಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ಸಂಚಾರಿ ಪೊಲೀಸರಂತೆ ಬಹುತೇಕ ಪೊಲೀಸ್ ಠಾಣೆಯ ಸಿಬ್ಬಂದಿ ವಾಹನ ತಪಾಸಣೆಯಲ್ಲಿಯೇ ನಿರತರಾಗಿದ್ದಾರೆ. ಒಂಟಿ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆದಿವೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರು ಬಾಗಿಲು, ಕಿಟಕಿ ಮುರಿದು ಒಳ ನುಗ್ಗಿ ಚಿನ್ನಾಭರಣ, ನಗದು ಹಣ ದೋಚಿರುವ ಪ್ರಕರಣಗಳು ಬಹಳಷ್ಟಿವೆ. ವಾಹನ ಕಳ್ಳತನಗಳೂ ಸಾಕಷ್ಟಿವೆ. 275 ಪ್ರಕರಣಗಳ ಪೈಕಿ ಮನೆ ಹಾಗೂ ವಾಹನ ಕಳ್ಳತ ಹೆಚ್ಚಾಗಿ ನಡೆದಿವೆ.
ಇದನ್ನೂ ಓದಿ :ಶೌಚಗೃಹ ನಿರ್ಮಾಣ ವಿಚಾರ: ಸಭೆಯಲ್ಲಿ ಧರಣಿ ನಡೆಸಿದ ಜಿಪಂ ಸದಸ್ಯರು
ಏಳು ಒಂಟಿ ಮನೆಗೆ ಕನ್ನ ಹಾಕಿದ್ದ ಖದೀಮರು 6,57,747 ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಈ ಪೈಕಿ ಎರಡೇ ಪ್ರಕರಣ ಪತ್ತೆಯಾಗಿದ್ದು, ಇನ್ನೂ ಐದು ಪ್ರಕರಣಗಳನ್ನು ಪತ್ತೆ ಹಚ್ಚಬೇಕಿದೆ. 2.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ವಾಪಸ್ಸು ನೀಡಲಾಗಿದೆ. ನಗರದಲ್ಲಿ ಮನೆ, ಅಂಗಡಿ ಸೇರಿದಂತೆ ಮಾರುಕಟ್ಟೆ ಪ್ರದೇಶಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕಳವು ಮಾಡಲಾಗಿದೆ. 145 ವಾಹನ ಕಳ್ಳತನ ಪ್ರಕರಣ ದಾಖಲಾಗಿದ್ದು, ಇದರಲ್ಲಿ 43 ಪ್ರಕರಣ ಪತ್ತೆ ಹಚ್ಚಲಾಗಿದೆ. ಇನ್ನೂ 102 ಪ್ರಕರಣ ಪತ್ತೆಯಾಗಬೇಕಿದೆ.
ಸರಗಳ್ಳತನ ಪ್ರಕರಣ ಪತ್ತೆ ಆಗಿಲ್ಲ: ಆರು ದರೋಡೆ ಪ್ರಕರಣಗಳಲ್ಲಿ 8,58,720 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದ್ದು, ಇದರಲ್ಲಿ ಮೂರು ಪ್ರಕರಣ ಪತ್ತೆ ಹಚ್ಚಿ 6,27,000 ರೂ. ಮೌಲ್ಯದ ವಸ್ತುಗಳನ್ನು ಮೂಲ ಮಾಲೀಕರಿಗೆ ಮರಳಿಸಲಾಗಿದೆ. ಇನ್ನೂ ಮೂರು ಪ್ರಕರಣಗಳು ಪತ್ತೆಯಾಗಬೇಕಿದೆ. 3.49 ಲಕ್ಷ ರೂ. ಮೌಲ್ಯದ ನಾಲ್ಕು ಸರಗಳ್ಳತನ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಇನ್ನೂವರೆಗೆ ಒಂದೂ ಪ್ರಕರಣ ಪತ್ತೆಯಾಗಿಲ್ಲ.
27 ಸಾಮಾನ್ಯ ಕಳ್ಳತನಗಳ ಪ್ರಕರಣಗಳ ಪೈಕಿ 9 ಪ್ರಕರಣ ಭೇದಿಸಲಾಗಿದ್ದು, ಇನ್ನೂ 18 ಪ್ರಕರಣಗಳು ಪತ್ತೆಯಾಗಬೇಕಿದೆ. 70,77,288 ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿವೆ. 83 ಸಾವಿರ ರೂ. ಮೌಲ್ಯದ ಎರಡು ಜಾನುವಾರುಗಳ ಕಳ್ಳತನವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.