Belagavi: ಪತ್ನಿ ಸಾವಿನಿಂದ ಗಂಡ, ತಾಯಿ ಸಾವಿನಿಂದ ನೊಂದು ಮಗಳು ಆತ್ಮಹತ್ಯೆ
ಸರಾಫ ದಾನೇ ಗಲ್ಲಿಯಲ್ಲಿ ಸಹೋದರ ಹಾಗೂ ಸಹೋದರನ ಮಗನೊಂದಿಗೆ ವಾಸವಾಗಿದ್ದರು
Team Udayavani, Aug 17, 2023, 6:15 PM IST
ಬೆಳಗಾವಿ: ಹೆಂಡತಿ ತೀರಿ ಹೋದ ನೋವಿನಲ್ಲಿ ಗಂಡ ಹಾಗೂ ತಾಯಿ ತೀರಿ ಹೋದ ನೋವಲ್ಲಿ ಮಗಳು ಆತ್ಮಹತ್ಯೆ ಮಾಡಿಕೊಂಡ ಘೋರ ದುರಂತ ನಗರದ ಕಪಿಲೇಶ್ವರ ದೇವಸ್ಥಾನ ಬಳಿಯ ಹೊಂಡದಲ್ಲಿ ನಡೆದಿದ್ದು, ಕಾಕತಾಳೀಯ ಎಂಬಂತೆ
ಎರಡೂ ಮೃತದೇಹಗಳು ಒಂದೆಡೆ ಪತ್ತೆ ಆಗಿದ್ದು ಮನಕಲಕುವಂತಾಗಿದೆ. ಶ್ರಾವಣ ಆರಂಭದ ಅಮವಾಸ್ಯೆ ದಿನ ಒಂದೇ
ಕಡೆಗೆ ಈ ಎರಡೂ ಮೃತದೇಹಗಳು ಪತ್ತೆ ಆಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿಗೆ ಕಾರಣವಾಗಿದೆ.
ಎರಡೂ ಪ್ರತ್ಯೇಕ ಘಟನೆ ಆಗಿದ್ದರೂ ಕಾಕತಾಳೀಯ ಎಂಬಂತೆ ಒಂದೇ ಕಡೆಗೆ ಮೃತದೇಹಗಳು ಪತ್ತೆ ಆಗಿವೆ. ನಗರದ ಕಾಂಗಲಿ ಗಲ್ಲಿಯ ವಿಜಯ ರಾಜಾರಾಮ ಪವಾರ(58) ಹಾಗೂ ಶಹಾಪುರದ ದಾನೇ ಗಲ್ಲಿಯ ಚಿತ್ರಲೇಖಾ ಶ್ರೀಕಾಂತ ಸರಾಫ(72) ಎಂಬವರ ಮೃತದೇಹಗಳು ನಗರದ ಕಪಿಲೇಶ್ವರ ಹೊಂಡದಲ್ಲಿ ತೇಲಾಡುತ್ತಿದ್ದವು. ಇದನ್ನು ಗಮನಿಸಿದ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಇಬ್ಬರೂ ಕೂಡಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತವಾಗಿತ್ತು. ಆದರೆ ಮೃತದೇಹಗಳನ್ನು ಹೊರಗೆ ತೆಗೆದು ಗುರುತಿಸಿದಾಗ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಅವಿವಾಹಿತೆ ಚಿತ್ರಲೇಖಾ ಸರಾಫ ದಾನೇ ಗಲ್ಲಿಯಲ್ಲಿ ಸಹೋದರ ಹಾಗೂ ಸಹೋದರನ ಮಗನೊಂದಿಗೆ ವಾಸವಾಗಿದ್ದರು. ತಾಯಿ ತೀರಿ ಹೋದ ನೋವಿನಿಂದ ಹಲವಾರು
ವರ್ಷಗಳಿಂದ ನೊಂದಿದ್ದರು. ಮಾನಸಿಕವಾಗಿ ನೊಂದಿದ್ದ ಚಿತ್ರಲೇಖಾ ಸೋಮವಾರ ಹೊಂಡದಲ್ಲಿ ಜಿಗಿದಿದ್ದರು. ವಿಜಯ
ಪವಾರ ಜಾಂಡಿಸ್‌ನಿಂದ ಬಳಲುತ್ತಿದ್ದರು.
ಎರಡು ವರ್ಷಗಳ ಹಿಂದೆ ಪತ್ನಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದರು. ಹೆಂಡತಿಯ ಸಾವಿನಿಂದ ವಿಜಯ ತೀವ್ರವಾಗಿ ನೊಂದಿದ್ದರು. ಹೀಗಾಗಿ ಮಂಗಳವಾರ ಕಪಿಲೇಶ್ವರ ಹೊಂಡದಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯ ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಶ್ರಾವಣ ಮಾಸ ಆರಂಭದ ಅಮವಾಸ್ಯೆಯಂದು ಭಕ್ತರು ಕಪಿಲೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಮೃತದೇಹ ನೋಡಿ ಆತಂಕಗೊಂಡಿದ್ದರು. ಕೂಡಲೇ ಪೊಲೀಸರು ಕಾರ್ಯ ಪ್ರವೃತ್ತರಾಗಿ ಇಬ್ಬರನ್ನೂ ಗುರುತಿಸಿ ಕ್ರಮ ಜರುಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.