ಟಿಕೆಟ್ ಕಸರತ್ತು; ಶುರುವಾಯ್ತು ಮಸಲತ್ತು
Team Udayavani, Mar 17, 2021, 3:46 PM IST
ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇನ್ನೊಂದು ತಿಂಗಳ ಕಾಲ ಜಿಲ್ಲೆಯಲ್ಲಿ ರಾಜಕೀಪಕ್ಷಗಳದ್ದೇ ದರ್ಬಾರ್. ಭರವಸೆ, ಸಾಂತ್ವನದ ಮಾತುಗಳು ಲೆಕ್ಕವಿಲ್ಲದಷ್ಟು ಹರಿಯಲಿವೆ. ಪ್ರಚಾರದಲ್ಲಿ ಪೈಪೋಟಿ ಪರಾಕಾಷ್ಠೆ ಮುಟ್ಟಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇನ್ನು ಅಸಲಿ ರಾಜಕಾರಣದ ಆಟ ಕಾಣಲಿದೆ. ಟಿಕೆಟ್ ಆಕಾಂಕ್ಷಿಗಳ ದೌಡು ಮತ್ತೆ ಆರಂಭವಾಗಲಿದೆ.
ಕ್ಷೇತ್ರದಲ್ಲಿ ಪಕ್ಷದ ಪರ ವಾತಾವರಣ ಇರುವಂತೆ ಕಾಣುತ್ತಿದ್ದರೂ ಇತ್ತೀಚೆಗೆ ಪಕ್ಷದಲ್ಲಿ ನಡೆದಿರುವ ಕೆಲ ಬೆಳವಣಿಗೆಗಳುಬಿಜೆಪಿಯನ್ನು ಬಹಳ ಇಕ್ಕಟ್ಟಿಗೆ ಸಿಲುಕಿಸಿವೆ.ಮುಖ್ಯವಾಗಿ ಈ ಭಾಗದ ಪ್ರಭಾವಿನಾಯಕ ರಮೇಶ ಜಾರಕಿಹೊಳಿ ಪ್ರಕರಣ ಪಕ್ಷದ ಇಮೇಜ್ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದನ್ನು ದಾಟಿ ಮತದಾರರನ್ನು ತನ್ನ ಕಡೆಸೆಳೆದುಕೊಳ್ಳುವ ದೊಡ್ಡ ಸವಾಲು ಬಿಜೆಪಿ ನಾಯಕರಮುಂದಿದೆ. ಮತದಾರರು ಈ ಪ್ರಕರಣಕ್ಕೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ ಎಂಬ ಕುತೂಹಲ ಮೂಡಿದೆ.ಬಿಜೆಪಿಗೆ ಇಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಸಾಧನೆ ಜತೆಗೆಸುರೇಶ ಅಂಗಡಿ ಮೇಲಿನ ಅನುಕಂಪವೇ ಆಧಾರ.
ಹೀಗಾಗಿ ಸಹಜವಾಗಿಯೇಪಕ್ಷದ ಟಿಕೆಟ್‌ಗಾಗಿ ಬಹಳಪೈಪೋಟಿ ನಡೆದಿದೆ. 75ಕ್ಕೂಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಪಕ್ಷದಪ್ರಮುಖ ನಾಯಕರ ಮನೆ ಬಾಗಿಲುಬಡಿದಿದ್ದಾರೆ. ಪ್ರತಿಯೊಬ್ಬ ಆಕಾಂಕ್ಷಿಗಳುತಮಗೆ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೆಲ್ಲದರ ಮಧ್ಯೆ ಈಗಾಗಲೇ 30ಕ್ಕೂಹೆಚ್ಚು ಪ್ರಬಲ ಆಕಾಂಕ್ಷಿಗಳು ತಮಗಿರು ವಪ್ರಭಾವದ ಮೂಲಕ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ದೆಹಲಿಗೆ ಸಹ ಪ್ರಯಾಣ ಮಾಡಿ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಗಮನ ಸೆಳೆದಿದ್ದಾರೆ. ಇದರಲ್ಲಿ ಹಾಲಿ ಹಾಗೂಮಾಜಿ ಶಾಸಕರ ಹೆಸರು ಸಹ ಸೇರಿವೆ. ಆದರೆ ಎಲ್ಲವೂಪಕ್ಷದ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿರುವುದರಿಂದ ಯಾರಿಗೆಟಿಕೆಟ್ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಪ್ರಚಾರದಲ್ಲಿ ಮುಂದೆ: ಲೋಕಸಭೆ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗ್ರಾಪಂ ಚುನಾವಣೆ ಸಂದರ್ಭದಲ್ಲೇ ಬಿಜೆಪಿ ಒಂದುಹಂತದ ಪ್ರಚಾರ ಮುಗಿಸಿದೆ. ಪಕ್ಷದಲ್ಲಿ ಅಂತರಿಕಚಟುವಟಿಕೆಗಳು ನಿರಂತರವಾಗಿ ನಡೆದಿವೆ. ಸಣ್ಣಪ್ರಮಾಣದ ಸಮಾವೇಶ ಹಾಗೂ ಸಭೆಗಳ ಮೂಲಕಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯ ತೆರೆಮರೆಯಲ್ಲಿ ನಡೆದಿದೆ.
ಪ್ರಚಾರದಲ್ಲಿ ಸಾಕಷ್ಟು ಮುಂದೆ ಇರುವ ಬಿಜೆಪಿವಲಯದಲ್ಲಿ ಪ್ರಚಾರಕ್ಕಿಂತ ಟಿಕೆಟ್ ಪಡೆಯುವದರಲ್ಲಿ ಹೆಚ್ಚಿನ ಪೈಪೋಟಿ ನಡೆದಿದೆ. ಯಾವ ನಾಯಕರೂ ಇವರಿಗೇ ಟಿಕೆಟ್ ಸಿಗುತ್ತದೆ ಎಂಬ ಖಚಿತ ವಿಶ್ವಾಸದಲ್ಲಿಲ್ಲ. ಎಲ್ಲವೂ ಪಕ್ಷದ ವರಿಷ್ಠರಾದ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮೇಲೆ ಅವಲಂಬಿತವಾಗಿದೆ. ಈಗ ಚುನಾವಣೆ ದಿನಾಂಕಘೋಷಣೆಯಾಗಿರುವುದರಿಂದ ಈ ವಾರದಲ್ಲಿ ಅಭ್ಯರ್ಥಿ ಹೆಸರು ಅಂತಿಮವಾಗಿ ಘೋಷಣೆಯಾಗುವ ನಿರೀಕ್ಷೆ ಇದೆ.
ಸುರೇಶ ಅಂಗಡಿ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಸ್ಥಾನ ತುಂಬಲುಅವರ ಕುಟುಂಬದವರಿಗೆ ಟಿಕೆಟ್ ಕೊಡಬೇಕುಎನ್ನುವದು ಬಿಜೆಪಿ ಕಾರ್ಯಕರ್ತರ ಹಾಗೂ ಸುರೇಶಅಂಗಡಿ ಬೆಂಬಲಿಗರ ಒತ್ತಾಯ. ಈ ಹಿನ್ನೆಲೆಯಲ್ಲಿಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಈಗ ಬಿಜೆಪಿಕಾರ್ಯಕ್ರಮಗಳಲ್ಲಿ ಹೆಚ್ಚು ಸಕ್ರಿಯವಾಗುತ್ತಿದ್ದಾರೆ.ಆದರೆ ರಾಜ್ಯದ ನಾಯಕರು ಇದರ ಬಗ್ಗೆ ಯಾವುದೇಮಾತು ಆಡುತ್ತಿಲ್ಲ. ಮೇಲಾಗಿ ಕೇಂದ್ರ ಗೃಹ ಸಚಿವಅಮಿತ್ ಶಾ ಸಹ ಕುಟುಂಬ ರಾಜಕಾರಣಕ್ಕೆ ಪಕ್ಷ ಜೋತು ಬೀಳಬಾರದು ಎಂದು ಹೇಳಿರುವುದು ನಾನಾ ರೀತಿಯ ಲೆಕ್ಕಾಚಾರಕ್ಕೆ ಎಡೆಮಾಡಿಕೊಟ್ಟಿದೆ.
ಕಾಂಗ್ರೆಸ್‌ನಲ್ಲಿ ಕುತೂಹಲ-ಜೆಡಿಎಸ್ ಸ್ಪರ್ಧೆ ಸಾಧ್ಯತೆ ಕಡಿಮೆ :
ಇನ್ನು ಬಿಜೆಪಿಯಲ್ಲಿ ಕಾಣುವ ಉತ್ಸಾಹ ಹಾಗೂ ಸಿದ್ಧತೆ ಕಾಂಗ್ರೆಸ್ ಪಾಳೆಯದಲ್ಲಿ ಕಾಣುತ್ತಿಲ್ಲ. ಇಲ್ಲಿ ಗೆಲ್ಲುವ ಅಭ್ಯರ್ಥಿ ನಿಲ್ಲಿಸಬೇಕು ಎನ್ನುವದಕ್ಕಿಂತ “ಹರಕೆಯ ಕುರಿ’ ಮಾತೇ ಹೆಚ್ಚಾಗಿ ಕಾಣುತ್ತಿದೆ. ಹೀಗಾಗಿಯಾರಿಗೆ ಟಿಕೆಟ್ ಎಂಬ ಕುತೂಹಲ ಪಕ್ಷದ ಕಾರ್ಯಕರ್ತರಲ್ಲಿದೆ. ಕಾಂಗ್ರೆಸ್ ನಾಯಕರು ಬೆಳಗಾವಿ ಲೋಕಸಭೆಗೆ ಮೂವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಇದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಇನ್ನೊಂದು ಕಡೆ ಶಾಸಕಿ ಲಕ್ಷ್ಮಿ ಹೆಬ್ಟಾಳಕರ ಜತೆಗೆ ಅವರ ಸಹೋದರ ಚನ್ನರಾಜ ಹಟ್ಟಿಹೋಳಿ ಹೆಸರು ಸಹ ಕೇಳಿಬಂದಿದೆ. ಇವರಿಬ್ಬರಹೊರತಾಗಿ ಮಾಜಿ ಸಂಸದ ಹಾಗೂ ಜಿಲ್ಲೆಯ ಹಿರಿಯ ರಾಜಕಾರಣಿ ಪ್ರಕಾಶ ಹುಕ್ಕೇರಿ ಪ್ರಯತ್ನ ನಡೆಸಿದ್ದು ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಈಗಿನ ಬೆಳವಣಿಗೆ ಪ್ರಕಾರ ಪ್ರಕಾಶ ಹುಕ್ಕೇರಿ ಹೆಸರು ಮುಂಚೂಣಿಯಲ್ಲಿದೆ.ಇದಲ್ಲದೆ ಆನಂದ ಗಡ್ಡದೇವರಮಠ ಮತ್ತು ಮರಾಠಾ ಸಮುದಾಯದ ಅನಿಲ ಲಾಡ್ ಹೆಸರು ಸಹ ಪ್ರಸ್ತಾಪವಾಗಿದೆ.
ಸತೀಶ ಜಾರಕಿಹೊಳಿ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ತಮ್ಮ ಖಚಿತ ನಿರ್ಧಾರ ತಿಳಿಸಿಲ್ಲ.ಇದುವರೆಗಿನ ಅವರ ಹೇಳಿಕೆಗಳು ಅಡ್ಡಗೋಡೆ ಮೇಲೆ ದೀಪ ಇಟ್ಟಂತಿದೆ. ಮೇಲಾಗಿ ಲೋಕಸಭೆಗೆ ಹೋಗಬೇಕು ಎಂಬ ಆಸಕ್ತಿ ಅವರಲ್ಲಿ ಅಷ್ಟಾಗಿ ಕಾಣುತ್ತಿಲ್ಲ. ಆದರೆ ಪಕ್ಷದ ವರಿಷ್ಠರು ಸತೀಶ ಅವರನ್ನೇನಿಲ್ಲಿಸಲು ಆಸಕ್ತಿ ತೋರಿದಂತೆ ಕಾಣುತ್ತಿದೆ. ಹೀಗಾಗಿ ಸತೀಶ ಜಾರಕಿಹೊಳಿ ನಿರ್ಧಾರದ ಮೇಲೆ ಉಳಿದವರ ಟಿಕೆಟ್ ಭವಿಷ್ಯ ನಿಂತಿದೆ ಎನ್ನಲಾಗುತ್ತಿದೆ. ಜೆಡಿಎಸ್ ವಲಯದಲ್ಲೂ ಉಪಚುನಾವಣೆಸಂಬಂಧ ಅಂತಹ ಯಾವುದೇ ರಾಜಕೀಯ ಚಟುವಟಿಕೆಗಳು ಇದುವರೆಗೆ ಕಂಡಿಲ್ಲ. ಚುನಾವಣೆ ಸಂಬಂಧ ಇದುವರೆಗೆ ಒಮ್ಮೆಯೂ ಕಾರ್ಯಕರ್ತರ ಸಭೆ ನಡೆಯದಿರುವುದೇ ಇದಕ್ಕೆ ಸಾಕ್ಷಿ. ಈಗಿನ ಬೆಳವಣಿಗೆ ನೋಡಿದರೆ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ಸಾಧ್ಯತೆ ಕಡಿಮೆ.
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
World Test Championship: ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ
Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.